ಕಲಕೇರಿ ಗ್ರಾಮ ಪಂಚಾಯಿತಿಯಲ್ಲಿ ಭಾರಿ ಅವ್ಯವಹಾರ ತನಿಖೆಗೆ – ಡಿ.ಎಸ್.ಎಸ್ ಆಗ್ರಹ.
ಕಲಕೇರಿ ಮೇ.16

ತಾಳಿಕೋಟೆ ತಾಲ್ಲೂಕಿನ ಕಲಕೇರಿ ಗ್ರಾಮ ಪಂಚಾಯತಿಯಲ್ಲಿ ಭಾರಿ ಅವ್ಯಹಾರ ನಡೆದಿದೆ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರ ಹಾಗೂ ಅಧ್ಯಕ್ಷರು ಕೂಡಿಕೊಂಡು ೧೫ ನೇ. ಹಣಕಾಸು ಹಾಗೂ ವರ್ಗ ಒಂದರಲ್ಲಿ ಖಾತೆಯನ್ನು ಯಾವುದೇ ಕಾಮಗಾರಿಯನ್ನು ಮಾಡದೆ ನಕಲಿ ಬಿಲ್ ಮಾಡಿ ಹಣವನ್ನು ಎತ್ತಿದ್ದಾರೆ. ನರೇಗಾ ಯೋಜನೆ ಯಲ್ಲಿ ಕಾರ್ಮಿಕರಿಂದ ಕೆಲಸ ಮಾಡಿಸದೇ, ಮೇಶಿನ್ ರಿ ಹಾಗೂ ಜೆಸಿಬಿ ಮೂಲಕ ಕೆಲಸವನ್ನು ಮಾಡಿಸಿ ಹಾಗೂ ಹುಣಶ್ಯಾಳ ಕೆರೆಯಲ್ಲಿ ಕೆಲವು ದಿನ ಕಾರ್ಮಿಕರಿಂದ ಕೆಲಸ ಮಾಡಿಸಿ ಆಮೇಲೆ ಜೆಸಿಬಿ ಮೂಲಕ ಕೆಲಸ ಮಾಡಿಸಿದ್ದಾರೆ ೧೦ ಲಕ್ಷ. ಕ್ಕಿಂತ ಹೆಚ್ಚು ಹಣವನ್ನು ದುರ್ಬಳಕೆ ಮಾಡಿದ್ದಾರೆ. ಒಂದು ಮನೆಗೆ ಜಿಪಿಎಸ್ ಮಾಡಲು ೨೦ ರಿಂದ ೩೦ ಸಾವಿರ ಕೊಡಬೇಕು ಅಂತಾ, ಗ್ರಾಮ ಪಂಚಾಯತಿ ಬಗ್ಗೆ ಕೂಲಂಕುಷವಾಗಿ ತನಿಖೆ ಮಾಡಿ ಇದರಲ್ಲಿ ಬಾಗಿ ಆದವರಿಗೆ ತಕ್ಕ ಶಿಕ್ಷ ಅಗಬೇಕು ಇದಕ್ಕೆ ಸಂಬಂಧಪಟ್ಟರ ಮೇಲೆ ಅಧಿಕಾರಗಳು ಕೂಡಲೇ ಗಮನ ಹರಿಸಬೇಕು ಇಲ್ಲದಿದ್ದರೆ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಸಂಗಮೇಶ ನಡವಿನಕೇರಿ ಯವರು ತಿಳಿಸಿದ್ದಾರೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ.