“ವಿಶ್ವ ಪ್ರಜಾಪ್ರಭುತ್ವ ದಿನ ಮಾನವ ಸರಪಳಿ ಭಾರತೀಯರ ಹೆಮ್ಮೆ”…..

ಪ್ರಜಾಪ್ರಭುಗಳ ಮಾನವೀಯ ಮೌಲ್ಯಗಳ
ಬೆಸೆಯುವ ಬನ್ನಿ
ಮಾನವ ಸರಪಳಿ ಏಕತೆಯ ಭಾವ ಸಂಗಮ
ಜಗದ ಮಾದರಿತನ ಸಾರ ಬನ್ನಿ
ನಮ್ಮ ಪ್ರಜಾಪ್ರಭುತ್ವ ಮೌಲ್ಯಗಳ ಸದೃಢ
ಅರ್ಥಗರ್ಭಿತವಾಗಿಸೋಣ ಸಿಹಿ ಹಂಚ ಬನ್ನಿ
ಲಿಂಗ ಬೇಧವಿಲ್ಲದೇ ಸಮಾನತೆ ಪ್ರತೀಕ
ಪ್ರಜಾಪ್ರಭುತ್ವ ಭಾರತ ಮಾತೆಯ ಹೆಮ್ಮೆಯ
ಪುತ್ರರು
ಜಗಕೆ ಮಾದರಿ ವಿಶ್ವ ಕಿರೀಟ ಪ್ರಾಯ ಏನಸಿ
ಸಕಲರ ಲೇಸ ಸುಗುಣ ಸಿಹಿ ಹಂಚಿ
ಬೆರೆಯೋಣ ಬನ್ನಿ ಬಾಂಧವರೇ
ಮಾನವ ಸರಪಳಿ ರಚಿಸಿ ನಲಿಯೋಣ
ಸಂಭ್ರಮಿಸೋಣ ಬನ್ನಿ
ಅನ್ನದಾತರೇ ಸಹೋದರ ಸಹೋದರಿಯರೇ
ವಿಶ್ರಾಂತ ದೇಶ ಭಕ್ತ ಆಧ್ಯಾತ್ಮಿಕ ಚಿಂತಕ
ಗುರುವೃಂದ ಗುರುಮಾತೆಯರು
ನೌಕರ ಅಧಿಕಾರಿ ವರ್ಗ ವೈದ್ಯಬಳಗ ಸಮಾಜ
ಚಿಂತಕ ಸೇವಾ ಸದಸ್ಯ ಬಳಗ ಕಾರ್ಮಿಕ
ಶ್ರಮಜೀವಿಗಳು
ಮುದ್ದು ಮಕ್ಕಳು ಸಕಲ ಕಲಾಬಳಗ
ಪ್ರಜಾಪ್ರಭುತ್ವ ಸಿಹಿ ಸವಿಯುವ ಪ್ರತಿ ಮಾನವ
ಕುಲ ಬಾಂಧವರೇ ನಮ್ಮತನದ ಪ್ರಜಾಪ್ರಭುತ್ವ
ಸಿರಿಯ ಸಿಹಿ ಜಗಕೆ
ಮಾನವ ಸರಪಳಿ ರಚಿಸಿ ವಿಶ್ವದಿ ನಮ್ಮಯ
ಕಿರುತಿ ಸೂರ್ಯ ಚಂದ್ರ ಹಾಗೇ ಬೆಳಗಿ ಸರ್ವರ
ಬಾಳಿನ ಬೆಳಕ
ಪ್ರಜಾಪ್ರಭುತ್ವದ ದಿನ ಬೆಳಕು ಮೂಡಿಸಿ
ಸಂಭ್ರಮಿಸಿ ಗೆಲ್ಲಿಸಿ ನಲಿಯೋಣ
ಸಂಭ್ರಮಿಸೋಣ. ಜಯ ಹೇ ಕರ್ನಾಟಕ
ಮಾತೆ ವಂದೇ ಮಾತರಂ
ಪ್ರಜಾಪ್ರಭುತ್ವ ಅಜರಾಮರ ಜನ ಮಾನಸದಲಿ
ಜೈಹಿಂದ್
ನಾವೇಲ್ಲರೂ ಒಂದೇ ಎಂದೆಂದಿಗೂ
ಭಾರತೀಯರು ಆದರ್ಶತನ ಸದಾ ವಿಶ್ವದಲಿ
ಕಂಗೋಳಿಸಲಿ
-ದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವ ಮಾನವ ಜೀವ ರಕ್ಷಕ”
ಐಕಾನ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು
ಬಾಗಲಕೋಟೆ.