ರೈತರ ಬೆಳೆ ವಿಮೆ, ತೊಗರಿ ನೆಟೆ ರೋಗ ಪರಿಹಾರ, ಹಾಗೂ ಬರಗಾಲ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹ.
ದೇವರ ಹಿಪ್ಪರಗಿ ಮೇ.20

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಸಂಬಂಧಿಸಿದಂತೆ ಸಾಕಷ್ಟು ರೈತರಿಗೆ ರಾಜ್ಯ ಹಾಗೂ ಕೇಂದ್ರದಿಂದ ಪ್ರತಿ ಹೆಕ್ಟೇರ್ ಗೆ 8500 + 8500 ರಂತೆ ಒಟ್ಟು 17000 ಹಾಕಬೇಕು ಆದರೆ ರಾಜ್ಯ ಸರಕಾರ ಹಾಕಿರುವ 2000 ಹಣವನ್ನು ಸಹ ಮುರಿದು ಕೇವಲ 6500 ಪ್ರತಿ ಹೆಕ್ಟೇರ್ ಗೆ ಹಾಕುತ್ತಿದ್ದಾರೆ.ತೊಗರಿ ನೆಟೆ ರೋಗದ ಪರಿಹಾರ ಕೇವಲ 4200 ಹಣ ಜಮಾ ಮಾಡಲಾಗಿ ಉಳಿದ ಬಾಕಿ ಹಣ ಜಮಾ ಮಾಡಬೇಕು.ಅದೇ ರೀತಿ ಫಸಲು ಭೀಮಾ ಯೋಜನೆಯ ಸಾಕಷ್ಟು ಅವ್ಯವಹಾರ ನಡೆಯುತ್ತಿದ್ದು ಅಂತಹವರ ವಿರುದ್ದ ಕಠಿಣ ಕ್ರಮ ಕೈಕೊಳ್ಳಬೇಕು.ತಾಲೂಕಿನ ಎಲ್ಲಾ ರೈತರ ಜಮೀನುಗಳಿಗೆ ಹೋಗುವ ದಾರಿಯಲ್ಲಿ ಬೆಳೆದ ಕಂಠಿಗಳನ್ನು ಕಡಿಸಿ ದಾರಿ ಸುಗಮ ಮಾಡಿಸಬೇಕು.ವಯೋವೃದ್ಧರಿಗೆ ಪಿಂಚಂಣಿ ಹಣ ಜಮಾ ಆಗದೇ ಸಾಕಷ್ಟು ಹಣ ಜಮಾ ಆಗದೇ ಸಮಸ್ಯೆ ಉಂಟಾಗಿದೆ ಅದನ್ನು ಸರಿಪಡಿಸಬೇಕು.ಜೂನ ತಿಂಗಳಿನಲ್ಲಿ ಎಲ್ಲಾ ರೈತರಿಗೆ ಬೀತನೆಗೆ ಬೇಕಾಗುವ ಬೀಜ ಗೊಬ್ಬರ ಕೀಟನಾಶಕಗಳು ಹಾಗೂ ಯಂತ್ರೋಪಕರಣಗಳನ್ನು ಸರಿಯಾಗಿ ಹಾಗೂ ಗುಣಮಟ್ಟದ ವಸ್ತುಗಳನ್ನು ಕೊಡಬೇಕು ಎಂದು ಆಗ್ರಹಿಸಲಾಯಿತು.ಈ ವೇಳೆ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಜಿಲ್ಲಾ ಉಪಾಧ್ಯಕ್ಷರಾದ ಸಂಪತ್ತ ಜಮಾದಾರ ತಾಲೂಕಾ ಅಧ್ಯಕ್ಷರಾದ ಈರಪ್ಪ ಕುಳೆಕುಮಟಗಿ ತಾ, ಗೌರವಾಧ್ಯಕ್ಷರಾದ ಶಿವಾನಂದಯ್ಯ ಹಿರೇಮಠ ಮುಖಂಡರಾದ ಸಿ.ಎಸ್.ಪ್ಯಾಠಿ ಮಲ್ಲನಗೌಡ ಬಿರಾದಾರರುದ್ರಯ್ಯ ಹಿರೇಮಠ ಅಪ್ಪಸಾಹೇಬ ಹರವಾಳ ಬಾಬು ಬಾಗವಾನ ಶಂಕರಗೌಡ ಹೊಸಗೌಡರ ಶಿವರಾಯ ಪ್ಯಾಠಿರಾಮು ದೇಸಾಯಿ ಸುನಂದಾ ಸೊನ್ನಳ್ಳಿ ಶಕೀರಾ ಹೆಬ್ಬಾಳಸಾಯಬ್ಬಿ ತಾಂಬೊಳಿ ಜಾಯಿದಾ ಕೊರಬೊ ಸೇರಿದಂತೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ. ತಾಳಿಕೋಟೆ.