ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಮುಖಂಡರ ಪೂರ್ವಭಾವಿ ಸಭೆ.
ಕಾನಾ ಹೊಸಹಳ್ಳಿ ಏಪ್ರಿಲ್.03

ಬಿಜೆಪಿಗೆ ಮತ ಕೇಳುವ ನೈತಿಕತೆಯೇ ಇಲ್ಲ, ಯಾವ ಅಭಿವೃದ್ಧಿಯೂ ಮಾಡದೇ ಧರ್ಮ ಜಾತಿ ಹೆಸರಲ್ಲಿ ರಾಜಕಾರಣ ಮಾಡುತ್ತದೆ ಎಂದು ಶಾಸಕ ಎನ್.ಟಿ ಡಾ ಶ್ರೀನಿವಾಸ್ ಹೇಳಿದರು. ತಾಲೂಕಿನ ಕಾನ ಹೊಸಹಳ್ಳಿ ಗ್ರಾಮದ ಗಾಣಿಗರ ಸಮುದಾಯ ಭವನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬಳ್ಳಾರಿ ಚುನಾವಣಾ ಲೋಕಸಭಾ ಕ್ಷೇತ್ರ, ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮುಖಂಡರ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ದೇಶದ ಆಸ್ತಿ ಉದ್ಯಮಿಗಳ ಕೈ ಸೇರಿದೆ, ನಮ್ಮ ದೇಶದಲ್ಲಿ ನಿರುದ್ಯೋಗ ಬಡತನ ತುಂಬಿ ತುಳುಕುತ್ತದೆ. ಬಿಜೆಪಿಯವರು ಮತ ಕೇಳುವ ಹಕ್ಕಿಲ್ಲ. ಕಾಂಗ್ರೆಸ್ ಪಕ್ಷ ಎಲ್ಲ ಬಗೆಯಿಂದಲೂ ಅಭಿವೃದ್ಧಿ ಕೆಲಸ ಮಾಡಿದೆ. ಕೇಂದ್ರದಲ್ಲೂ ಅಧಿಕಾರ ನೀಡಿದರೆ, ಎರಡೂ ಕಡೆ ನಮ್ಮದೇ ಸರಕಾರವಾಗಿ ಇನ್ನಷ್ಟು ಕೆಲಸಗಳು ಸಾಧ್ಯವಾಗಲಿವೆ. ಬಿಜೆಪಿಯ ಸುಳ್ಳಿನ ಕಾಯಕ ಬಹಳ ದಿನ ನಡೆಯುವುದಿಲ್ಲ. ಇಲ್ಲಿಯವರೆಗೂ ಬಿಜೆಪಿಯ ಲೋಕಸಭಾ ಸದಸ್ಯರ ಅಧಿಕಾರಾವಧಿಯಲ್ಲಿ ಯಾವ ಅಭಿವೃದ್ಧಿ ಕಂಡಿಲ್ಲ. ಈ ಸಲ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ.

ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಈ ತುಕಾರಾಮ್ ಅವರ ಗೆಲುವುಗಾಗಿ ಸಹಕಾರ ಕೊಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಂಘಟನೆಯ ಮನೋಭಾವನೆ ಯಿಂದ ಮತ ಕೇಳಬೇಕು ಎಂದೂ ಪಕ್ಷದ ಕಾರ್ಯಕರ್ತರಲ್ಲಿ ಶಾಸಕರು ಮನವಿ ಮಾಡಿಕೊಂಡರು. ಈ ವೇಳೆ ನಾಗಮಣಿ ಜಿಂಕಲ್ ಮಹಿಳಾ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಮಾತನಾಡಿ ಕಾಂಗ್ರೆಸ್ ಸರ್ಕಾರ ಕೊಟ್ಟಂತ ಐದು ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ತಕ್ಷಣವೇ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದೆ ಇನ್ನು ರಾಹುಲ್ ಗಾಂಧಿಯವರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬ ಕುಟುಂಬದವರಿಗೆ 1ಲಕ್ಷ ರೂಪಾಯಿಯನ್ನು ಘೋಷಣೆ ಮಾಡಿದ್ದಾರೆ ಮತ್ತು ರೈತರಿಗೆ ಜಿಎಸ್ಟಿ ತೆರಿಗೆಯನ್ನು ಕೂಡ ರದ್ದುಗೊಳಿಸುತ್ತೇವೆ ಇನ್ನು ಸಾಕಷ್ಟು ಜನ ಪರವಾದಂತಹ ಯೋಜನೆಗಳನ್ನು ರಾಹುಲ್ ಗಾಂಧಿಯವರು ಘೋಷಣೆ ಮಾಡಿದ್ದಾರೆ. ಈ ದೇಶದಲ್ಲಿ ನುಡಿದಂತ ನಡೆದ ಸರ್ಕಾರ ಅಂದರೆ ಅದು ಕಾಂಗ್ರೆಸ್ ಸರ್ಕಾರ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಶಶಿಧರ ಸ್ವಾಮಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಮಾತನಾಡಿ ಕಾಂಗ್ರೆಸ್ ಸರ್ಕಾರ ಜನ ಪರವಾದ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಕಾಂಗ್ರೆಸ್ ಸರ್ಕಾರ ಕೊಟ್ಟಂತ ಭರವಸೆಯನ್ನು ಈಡೇರಿಸುವ ಕೆಲಸವನ್ನು ಶುರು ಮಾಡಿದ್ದೆವು. ಎಂಟೇ ತಿಂಗಳಲ್ಲಿ ಐದು ಗ್ಯಾರಂಟಿ ಜಾರಿ ಮಾಡಿದ್ದೇವೆ. ಬಿಜೆಪಿ ಇವತ್ತಿನವರೆಗೂ ಕೊಟ್ಟ ಮಾತಿನಲ್ಲಿ ಒಂದನ್ನೂ ಈಡೇರಿಸಿಲ್ಲ. ಹೀಗಾಗಿ ಬಿಜೆಪಿಗೆ ಮತ ಹಾಕಿದರೆ ಏನು ಪ್ರಯೋಜನ ಬಿಜೆಪಿ ಪಕ್ಷದವರು ರಾಮನ ಹೆಸರಿನಲ್ಲಿ ರಾಜಕೀಯ ಮಾಡುತ್ತಾರೆ. ಇದು ಸಂವಿಧಾನ ವಿರೋಧಿ ಕೆಲಸವನ್ನು ಮಾಡುತ್ತಿದ್ದಾರೆ. ದೇವರನ್ನು ಎಲ್ಲರೂ ಪೂಜಿಸುತ್ತಾರೆ. ಒಂದೊಂದು ಧರ್ಮದವರು ಒಂದೊಂದು ದೇವರನ್ನು ಪೂಜಿಸುತ್ತಾರೆ. ಭಾರತ ಜಾತ್ಯಾತೀತ ರಾಷ್ಟ್ರ ವಾಗಿದ್ದು ಸರ್ವರು ಒಂದೇ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಕೊಟ್ಟಿರುವ ಸಂವಿಧಾನದಡಿ ನಾವೆಲ್ಲರು ಒಂದು ಕುಟುಂಬದ ರೀತಿಯಲ್ಲಿ ಇರಬೇಕಾಗುತ್ತದೆ. ಈ ಬಾರಿ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು. ನಮ್ಮ ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ಈ ಬಾರಿ ಹೆಚ್ಚಿನ ಬೆಂಬಲ ನೀಡುವುದರ ಮೂಲಕ. ಅವರನ್ನು ಆರಿಸಿ ನಾವು ಪಾರ್ಲಿಮೆಂಟಿಗೆ ಕಳಿಸಬೇಕೆಂದು ತಿಳಿಸಿದರು.ಈ ವೇಳೆ ಗಂಗಣ್ಣ ಮುಖಂಡ ಮಾತನಾಡಿ ಗಾಂಧಿಗಿರಿ ಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಬಹುಮತ ದಿಂದ ಆಯ್ಕೆ ಮಾಡಿ. ಪಕ್ಷದ ಕಾರ್ಯಕರ್ತರು ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ಬಿಜೆಪಿಯವರು ಪ್ರಚಾರ ಮಾಡುತ್ತಾರೆ ಆದರೆ ಅಭಿವೃದ್ಧಿ ಮಾತ್ರ ಏನೂ ಇಲ್ಲ. ಟಿವಿ, ಪತ್ರಿಕೆ ಮೂಲಕ ಪ್ರಚಾರ ಮಾಡಿ ಆಮೇಲೆ ದುಡ್ಡಿನ ಮೂಲಕ ಮತದಾರರನ್ನು ಹಾದಿ ತಪ್ಪಿಸುತ್ತಾರೆ. ಸಾವಿರಾರು ಕೋಟಿ ಹಣ ಖರ್ಚು ಮಾಡಿ ಚುನಾವಣೆ ಮಾಡುತ್ತಾರೆ. ಅವರ ಬಳಿ ಬೇರೇನೂ ಮಂತ್ರವಿಲ್ಲ ಎಂದು ಅವರು ದೂರಿದರು.ಈ ಸಂದರ್ಭದಲ್ಲಿ ಉಮೇಶ್ ಕಾಂಗ್ರೆಸ್ ಮುಖಂಡರು ಮಾತನಾಡಿ. ಕೇಂದ್ರ ಸರ್ಕಾರ ರೈತರ ಬಗ್ಗೆ ಕಾಳಿಜೆ ಇಲ್ಲ ನರೇಂದ್ರ ಮೋದಿಯವರು ನಮ್ಮ ದೇಶದ ರೈತರ ಸಾಲ ಮನ್ನಾ ಮಾಡುವುದನ್ನು ಬಿಟ್ಟು, ಸಾವಿರಾರು ಕೋಟಿ ರೂಪಾಯಿಗಳು ಉದ್ಯಮಿಗಳ ಸಾಲವನ್ನು ಮನ್ನ ಮಾಡಿದ್ದಾರೆ. ಅದು ನಮ್ಮ ದೇಶದಲ್ಲಿ ಬಡವರು ಮತ್ತು ರೈತರ ಪರವಾಗಿ ಕಾಳಜಿ ಇರುವಂತಹ ಸರ್ಕಾರ ಅಂದರೆ ಅದು ಕಾಂಗ್ರೆಸ್ ಸರ್ಕಾರ. ಅದಕ್ಕೆ ಈ ಬಾರಿ ನಮ್ಮ ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತುಕಾರಾಮ್ ರವರ ಗೆಲುವಿಗೆ ನಾವೆಲ್ಲರೂ ಸೈನಿಕರಂತೆ ಹೋರಾಡಬೇಕು ಎಂದರು.

ಈ ಸಂದರ್ಭದಲ್ಲಿ ನಾಗಮಣಿ ಜಿಂಕಲ್ ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷ, ಶಶಿಧರ್ ಸ್ವಾಮಿ ಮಾಜಿ ಜಿ.ಪಂ ಸದಸ್ಯರು, ಕಾಂಗ್ರೆಸ್ ಮುಖಂಡ ಎನ್‌ಟಿ ತಮ್ಮಣ್ಣ, ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ ಕುಮಾರ್ ಗೌಡ್ರು, ಕಾವಲಿ ಶಿವಪ್ಪ ನಾಯಕ, ಹೊಸಹಳ್ಳಿ ಗ್ರಾ.ಪಂ ಅದ್ಯಕ್ಷರು ಎ.ಸಿ ಚೇತನ, ಮುಖಂಡರಾದ ಜಿ ಒಬಣ್ಣ, ಉಮೇಶ್, ಹೂಡೇಂ ಮಾಜಿ ತಾ.ಪಂ ಸದಸ್ಯ ಪಾಪ ನಾಯಕ, ದಲಿತ ಮುಖಂಡ ಗಂಗಣ್ಣ, ಬಿ.ಟಿ ಗುದ್ದಿ ದುರುಗೇಶ್, ಪೇಪರ್ ಸುರಯ್ಯ, ಅಜ್ಜನ ಗೌಡ್ರು, ಮಾರೇಶ, ಕೃಷ್ಣ ನಾಯ್ಕ, ಲಕ್ಕಜಿ ಮಲ್ಲಿಕಾರ್ಜುನ್, ಬೋಮ್ಮಣ್ಣ, ಎರಿಸ್ವಾಮಿ, ಮನೋಜ್ ಕುಮಾರ್ ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ, ಶಾಸಕ ಆಪ್ತ ಸಹಾಯಕ ಮರುಳು ಸಿದ್ದಪ್ಪ, ಮಂಜು ಹೊಸಹಳ್ಳಿ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಗ್ರಾಮ ಪಂಚಾಯತಿಯ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ