ಬರ ಪರಿಹಾರ ರೈತರಿಗೆ ನೀಡಬೇಕು ಸಾಲಕ್ಕೆ ಜಮೆ ಮಾಡ ಬಾರದು – ಪ್ರಭುಗೌಡ.
ದೇವರ ಹಿಪ್ಪರಗಿ ಮೇ.21

ಸರ್ಕಾರ ರೈತರಿಗೆ ನೀಡಿದ ಬರ ಪರಿಹಾರವನ್ನು ರೈತರಿಗೆ ಸಾಲವನ್ನು ಜಮೆ ಮಾಡಿಕೊಳ್ಳದೆ ಈ ಸಮಯದಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ಅನುಕೂಲವಾಗುವಂತೆ ಸರ್ಕಾರ ಬರ ಪರಿಹಾರ ನೀಡಿದೆ ಅದಕ್ಕಾಗಿ ಬ್ಯಾಂಕ್ ಗಳು ಸಾಲಕ್ಕೆ ಜಮೆ ಮಾಡದೆ ರೈತರಿಗೆ ನೀಡಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾದ ಡಾ,ಪ್ರಭುಗೌಡ ಲಿಂಗದಳ್ಳಿಯವರು ಹೇಳಿದರು, ಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಕಳೆದ ವರ್ಷ ಮುಂಗಾರು ವಿಫಲವಾಗಿ ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿತ್ತು ಮಳೆ ಬೆಳೆ ಇಲ್ಲದೆ ಬರಗಾಲದಿಂದ ರಾಜ್ಯದ ರೈತರು ರೋಸಿ ಹೋಗಿದ್ದರು ಕರ್ನಾಟಕ ಸರ್ಕಾರ ನಿರಂತರವಾಗಿ ಹೋರಾಟ ಮಾಡಿ ಕೊನೆಗೆ ಕೋರ್ಟ್ ಮುಖಾಂತರ ಜಯ ಸಿಕ್ಕಿತು, ಅದಕ್ಕಾಗಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಬರ ಪರಿಹಾರ ಬಿಡುಗಡೆ ಮಾಡಿದೆ, ಈ ಪರಿಹಾರವನ್ನು ರೈತರು ಕೈ ಸೇರಬೇಕು ಸಾಲ ಮರುಪಾವತಿ ಮಾಡದಂತೆ ಈಗಾಗಲೇ ಸರ್ಕಾರ ಜಿಲ್ಲಾ ಆಡಳಿತ ಬ್ಯಾಂಕಿನ ಮುಖ್ಯಸ್ಥರಿಗೆ ಆದೇಶ ಮಾಡಿದರೂ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚು ಕೇಳಿ ಬರುತ್ತಿವೆ ರೈತರು ನೇರವಾಗಿ ನಮ್ಮ ಹತ್ತಿರ ಬಂದು ತಮ್ಮ ಅಳಲನ್ನು ತೋಡಿ ಕೊಳ್ಳುತ್ತಿದ್ದಾರೆ ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯ ಅಧಿಕಾರಗಳು ಗ್ರಾಮೀಣ ಭಾಗದಲ್ಲಿ ನಿಗಾ ವಹಿಸಬೇಕು ಎಂದು ಹೇಳಿದರು, ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಯಾಕ್ ಅಧ್ಯಕ್ಷರಗಳಾದ ಬಸೀರ ಶೇಟ್ ಬೇಪಾರಿ, ಬಾಳ ಸಾಹೇಬಗೌಡ ಪಾಟೀಲ ಹಾಗೂ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ. ದೇವರ ಹಿಪ್ಪರಗಿ.