“ಕನ್ನಡಕ್ಕೆ ಕೈ ಎತ್ತು”…..

ಕರುನಾಡು ಗಂಧದ ಬೀಡು
ಅ ಆ ಇ ಈ ಅಕ್ಷರ ಮಾಲೆ
ಕಲಿಸುವುದು ಮಾತೃತ್ವದ ಭಾವವು
ಬುದ್ಧ ಬಸವ ಅಂಬೇಡ್ಕರರ ಸಂಸ್ಕಾರ
ಸಂಸ್ಕೃತಿ ನಮ್ಮತನವು
ಕೃಷ್ಣ ಕಾವೇರಿ ಭೀಮಾ ಮಲಪ್ರಭಾ ಘಟಪ್ರಭಾ
ತುಂಗಾ ಭದ್ರಾ ಜಲಧಾರೆಯ ಸಿರಿ ನಾಡು
ಬೇಲೂರ ಹಳೇಬೀಡು ಬದಾಮಿ ಐಹೊಳೆ
ಪಟ್ಟದಕಲ್ಲು ವಾಸ್ತು ಶಿಲ್ಪಿವು ಶ್ರೇಷ್ಠವು
ಜನ್ನ ರನ್ನ ಪಂಪರ ಕಾವ್ಯ ಕಲರವ ಕುವೇಂಪು
ಬೇಂದ್ರೆ ಮಾಸ್ತಿ ಅ ನಾ ಕೃ ಡಿವಿಜಿ ಯವರ
ಕನ್ನಡ ಕಂಪು
ವಿಶ್ವದೆಲ್ಲೆಡೆ ಬೆಳಕು ಚಂದನ ಕಬ್ಬು ತೆಂಗು
ಹೊನ್ನು ಬೆಳೆಯ ಸಿರಿಯು
ಭಾರತ ಮಾತೆಯ ಮುಕುಟ ಮಣಿಯು
ಕರುನಾಡವು
ನಮ್ಮ ಭಾಷೆ ಕನ್ನಡ ನಮ್ಮ ಹೆಮ್ಮೆ ಕನ್ನಡಕ್ಕಾಗಿ
ಕೈ ಎತ್ತು ಜಗವೆಲ್ಲಾ ರಾರಾಜಿಸಲಿ ಕನ್ನಡ
ಧ್ವಜವು
ಜೈಕರ್ನಾಟಕ ಜಯ ಹೇ ಕನ್ನಡ ಜಯ ಹೇ
ಭಾರತ ಮಾತೆ ವಂದೇ ಮಾತರಂ
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ/ಅಮೀನಗಡ

