ಕೋರವಾರ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ – ಸರಿಯಾಗಿ ಪೂರೈಕೆ ಯಾಗುತಿಲ್ಲ.
ಕೋರವಾರ ಮಾ.26

ದೇವರ ಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮ ಪಂಚಾಯತಿ ಯವರು ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆಗಳು ಇದ್ದು ನೀರನ್ನು ಸರಿಯಾಗಿ ಪೂರೈಸುತ್ತಿಲ್ಲಾ ಎಂದು ಜಯ ಕರ್ನಾಟಕ ಸಂಘಟನೆಯ ವತಿಯಿಂದ ಗ್ರಾಮ ಪಂಚಾಯತಿ ಕಾರ್ಯದರ್ಶಿಗಳಾದ ಜಿ.ವ್ಹಿ ಪಟಣ್ಣಶೆಟ್ಟಿ, ರವರಿಗೆ ಮನವಿ ಸಲ್ಲಿಸಲಾಯಿತು. ನೇತೃತ್ವವನ್ನು ಚನ್ನಪ್ಪಗೌಡ ಎಸ್.ಬಿರಾದಾರ, ಜಿಲ್ಲಾ ವಕ್ತಾರರು ಕೋರವಾರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟು ಇದ್ದು. ಇಂದು ಎರಡು ತಿಂಗಳಿಗೊಮ್ಮೆ ನೀರನ್ನು ಬಿಡುತ್ತಾರೆ ಇದರಿಂದಾಗಿ ಸಾರ್ವಜನಿಕರಿಗೆ ತುಂಬಾ ತೊಂದರೆ ಯಾಗುತ್ತಿದೆ.

ಒಂದು ವಾರದಲ್ಲಿ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಉಗ್ರವಾದ ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ಈ ಮೂಲಕ ಎಚ್ಚರಿಸಿದರು, ಮತ್ತು ದೇವರ ಹಿಪ್ಪರಗಿ ತಾಲೂಕಾ ಅಧ್ಯಕ್ಷರು ಸಿದ್ರಾಮಪ್ಪ ಅವಟಿ ಮಾತನಾಡಿದರು. ಹಾಗೂ ವಲಯ ಘಟಕದ ಮುಖಂಡರಾದ ಮಲ್ಲನಗೌಡ ಸುಂಕದ ಜಗದೀಶ ಮೇಲಿನಮಠ ರಾಮು ಹೊನಮಟ್ಟಿ ಭೀಮನಗೌಡ ನಂದಗೌಡರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್. ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ