ಬಿ.ಡಿ.ಸಿ.ಸಿ ಬ್ಯಾಂಕ್ ಅಧಿಕಾರಿಗಳ ಷಡ್ಯಂತ್ರಕ್ಕೆ – ರೈತರ ಗೋಳು ಕೇಳುವರ್ಯಾರು?…..

ಅಮೀನಗಡ ಮೇ.27

ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ 12 ಕೋಟಿಗೂ ಅಧಿಕ ಹಗರಣದ ತನಿಖೆಯನ್ನು ವಿರೋಧಿಸಿ ಇಂದು ಹುನಗುಂದ ತಾಲೂಕಿನ ಅಮೀನಗಡ ನಗರದ ಬಿ.ಡಿ.ಸಿ.ಸಿ ಬ್ಯಾಂಕ್ ಮುಂದೆ ರೈತರ ಪ್ರತಿಭಟನೆ ನಡೆಯಿತು. 2012 ರಿಂದ 2015/2019 ರ ತನಕ ಈ ಬ್ಯಾಂಕಿನ ಸಿಪಾಯಿ ಪ್ರವೀಣ ಎಸ್ ಪತ್ರಿ 12 ಕೋಟಿ ರೂಪಾಯಿ ಪ್ರಾಡ್ ಮಾಡಿದ ಆರೋಪದಲ್ಲಿ ಆತನೆ ನಮ್ಮ ಖಾತೆಗಳಿಗೆ ಹಣ ವರ್ಗಾವಣೆ ಮಾಡಿ ತಾನೆ ಹಣ ಲಪಟಾಯಿಸಿದ ಘಟನೆ ಎಲ್ಲರಿಗೂ ತಿಳಿದ ವಿಚಾರ ಇಲಾಖೆ ತನಿಖೆ ನಂತರ ಈ ಪ್ರಕರಣ ಈಗ ಸಿ.ಓ.ಡಿ ತನಿಖೆ ಮುಕ್ತಾಯದ ಹಂತದಲ್ಲಿ ಇದ್ದು 145 ರೈತರ ಆಸ್ತಿಗಳ ಮೇಲೆ ಬೋಜಾ ಕುಡಿಸಬಹುದಾ? ಎಂಬ ವಿಚಾರದಿಂದ ಇಂದು ಸೂಳೇಭಾವಿ ಗ್ರಾಮದ ರೈತರು ಪ್ರತಿಭಟನೆ ಆರಂಭಿಸಿ ಬ್ಯಾಂಕಿನ ವಿರುದ್ದ ನೀವು ತಪ್ಪು ಮಾಡಿ ರೈತರನ್ನು ಇದರಲ್ಲಿ ಸಿಕ್ಕಿಸಿ ಹೈರಾಣ ಮಾಡುತ್ತಿದ್ದೀರಿ. ಎಂದು ಪ್ರತಿಭಟನಾಕಾರರು ದೂರಿದರು. ಜನರಲ್ ಮ್ಯಾನೇಜರ್ ಹಾಗೂ ಜಿಲ್ಲಾ ಬಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಸರನಾಯಕ ಅವರು ಸ್ಥಳಕ್ಕೆ ಆಗಮಿಸಿ ಈ ತನಿಖೆಯಿಂದ ರೈತರನ್ನು ಕೈ ಬಿಟ್ಟು ಈ ಪ್ರಕರಣದಲ್ಲಿ ನೇರ ಆರೋಪಿ ಯಾರು ಅಂತ ಎಲ್ಲರಿಗೂ ತಿಳಿದ ವಿಚಾರ ಅಂತವರನ್ನು ಹೊರಗಡೆ ತಿರುಗಾಡಲು ಬಿಟ್ಟು ರೈತರನ್ನು ವಿಚಾರಣೆಗೆ ಕರೆದು ಅವಾಚ್ಚ ಶಬ್ದಗಳಿಂದ ನಿಂದಿಸಿರುವುದು ಸರಿ ಅಲ್ಲ ಅಮಾಯಕ ರೈತರ ಖಾತೆಗಳನ್ನು ತಾವು ದುರ್ಬಳಕೆ ಮಾಡಿಕೊಂಡು ಈಗ ಅವರನ್ನೆ ಅಪರಾಧಿಗಳಂತೆ ನೋಡುತ್ತಿರುವುದು ಖಂಡನೀಯ ಎಂದು ರೈತ ಮುಖಂಡರಾದ ಈರಪ್ಪ ಫರಾಳದ,ನಾಗೇಶ ಗಂಜಿಹಾಳ,ದೇವರಾಜ ಕಮತಗಿ, ಖಂಡನೀಯ ವ್ಯಕ್ತಪಡಿಸಿದ್ದಾರೆ.

ಸದರಿ ಈ ಪ್ರಕರಣ ,COD ತನಿಖೆ ಮಾಡುತ್ತಿರುವುದರಿಂದ ರೈತರು ಪ್ರತಿಭಟನೆ ಕೈಬಿಟ್ಟು ತನಿಖೆಗೆ ಸಹಕಾರ ನೀಡಬೇಕು,ರೈತರ ಆಸ್ತಿಗಳ ಮೇಲೆ ಯಾವುದೆ ಬೋಜಾ ಕೂಡಿಸುವುದಿಲ್ಲ ತನಿಖೆ ಶಾಂತತವಾಗಿ ನಡೆಸಲು ತಾವುಗಳು ಸಹಕಾರ ನೀಡಿ ಎಂದು ಪ್ರಧಾನ ವ್ಯವಸ್ಥಾಪಕರಾದ ಶ್ರೀ ಎಸ,ಎಸ್ ಮಿರ್ಜಿ ಹಾಗೂ DJM ಶ್ರೀ ಎಸ್,ಬಿ,ಅಕ್ಕಿ,ಹಾಗೂ DJM ಶ್ರೀ ವ್ಹಿ,ಕೆ ದಂಡಣ್ಣವರ ಶಾಂತಿಯಿಂದ ಸಹಕಾರ ನೀಡಲು ಮನವಿ ಮಾಡಿದರು‌ ಇದಕ್ಕೆ ನೀರಾಕರಿಸಿದ ಪ್ರತಿಭಟನಾ ಕಾರರು ಜಿಲ್ಲಾ MD ಹಾಗೂ ಅಧ್ಯಕ್ಷರು ಬರಲೇ ಬೇಕು ಎಂದು ಪಟ್ಟು ಹಿಡಿದರು. ನಂತರ ಮದ್ಯಾಹ್ನ 3 ಗಂಟೆಗೆ ಬಂದು ಮನವಿ ಸ್ವೀಕಾರ ಮಾಡುವುದಾಗಿ ಹೇಳಿದ ನಂತರ ರೈತರು ಬ್ಯಾಂಕ್ ಮುಂದೆ ಕಾಯುತ್ತಿದ್ದಾರೆ, ಮುಂದೆ ಯಾವ ರೀತಿ ಈ ಹೋರಾಟ ನಡೆಯುತ್ತೆ ಎಂಬುದನ್ನ ಕಾದು ನೋಡಬೇಕಾಗಿದೆ.

ಈ ಪ್ರತಿಭಟನೆಯಲ್ಲಿ ರೈತ ಮುಂಡರಾದ ಗ್ಯಾನಪ್ಪ ಗೋನಾಳ, ಸಂಗಯ್ಯ ಲೂತಿಮಂಠ, ಆನಂದ ಫರಾಳದ,ಪ್ರಭು ನಾಗರಾಳ ಆನಂದ ಮೊಕಾಶಿ ,ರಾಘು ಪೂಜಾರ,ಮಾಂತಯ್ಯ ಲೂತಿಮಠ,ರಾಜು ಬಾಗಲಿ,ಮಹಾನಿಂಗಪ್ಪ ಫರಾಳದ,ಅನೇಕ ರೈತ ಮುಖಂಡರು ಹೋರಾಟದಲ್ಲಿ ಪಾಲ್ಗೊಂಡಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button