ಅಕ್ರಮ ಮಾವಾ ಮಧ್ಯ ನಿಲ್ಲಿಸಿ.
ದೇವರ ಹಿಪ್ಪರಗಿ ಮೇ.28

ದೇವರ ಹಿಪ್ಪರಗಿ ಪಟ್ಟಣದ ಕನಕದಾಸ ಸರ್ಕಲ್ ನಲ್ಲಿ ಅವ್ಯಾಹತವಾಗಿ ನಡೆಸುತ್ತಿದ್ದ ಆಕ್ರಮ ಮಾವಾ ಮಧ್ಯ ಹಾಗೂ ಅಂಗಡಿಗಳಲ್ಲಿ ಮಾವಾ ಮಾರಾಟವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಮಹಿಳೆಯರು ತಹಶಿಲ್ದಾರರ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿದರು. ಆನಂತರ ಶಿರಸ್ತಾದಾರ ಡಿ ಎಸ್ ಭೋವಿ ಅವರಿಗೆ ಮನವಿಯನ್ನು ಸಲ್ಲಿಸಿದರು, ಪಟ್ಟಣದ ತಹಶಿಲ್ದಾರರ ಕಛೇರಿ ಆಗಮಿಸಿ ಕರಿಸಿದ್ದೇಶ್ವರ ದೇವಸ್ಥಾನ, ಗಂಗಾನಗರ, ರಾವುತರಾಯ ಗುಡಿ ಓಣಿ ಹಾಗೂ ತಾಂಡಾ ರಸ್ತೆಯ ಮಹಿಳೆಯರು ಕನಕದಾಸ ವೃತ್ತದಲ್ಲಿ ಆಕ್ರಮ ಮಧ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದರು, ಆಕ್ರಮ ಮಧ್ಯ ಹಾಗೂ ಪಾನ ಶಾಪಗಳಲ್ಲಿ ಮಾದಕ ಮಾವಾ ಮಾರಾಟದ ಫಲವಾಗಿ ಸ್ಥಳೀಯ ಯುವಕರು ಹಾಗೂ ಹಿರಿಯರು ಕುಡಿಯುವುದು ತಿನ್ನುವ ಚಟ್ಟಕ್ಕೆ ಅಂಟಿ ಕೊಂಡಿದ್ದಾರೆ ಇದರಿಂದ ಮನೆಯ ಸಂಸಾರ ಮಾಡುವ ಮಹಿಳೆರು ಸಂಕಷ್ಟ ದಲ್ಲಿ ಸಿಲುಕಿದ್ದಾರೆ ಕೂಡಲೇ ತಾಲೂಕಾ ಆಡಳಿತ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕಮಲಾ ಬಿರಾದಾರ ಹೇಳಿದರು, ಹಾಗೂ ಬೋರಮ್ಮ ಜೋಂಡಿ ಮಾತನಾಡಿ ಈ ಚಟ್ಟಕ್ಕೆ ಹಲವಾರು ಯುವಕರು ಬಲಿಯಾಗಿದ್ದಾರೆ ಇದನ್ನು ಬಂದು ಮಾಡದಿದ್ದರೆ ಬಡವರು ಹಾಳಾಗುವುದು ಕಚಿತ್ತಾ, ಮದ್ಯ ಮಾರಾಟ ಮಾಡುವ ಪಕ್ಕದಲ್ಲಿ ಶಾಲೆ ಕಾಲೇಜುಗಳಿವೆ ಈ ಕುಡಕರ ಹಾವಳಿಯಿಂದ ವಿದ್ಯಾರ್ಥಿನಿಯರು ಶಾಲೆಗೆ ಹೋಗಲು ಭಯ ಬೀತರಾಗಿದ್ದಾರೆ, ಇದಕ್ಕೆ ಸಂಬಂಧಪಟ್ಟ ಇಲಾಖೆ ಹಾಗೂ ತಾಲೂಕಾ ಆಡಳಿತ ಕೂಡಲೇ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು, ಅಬಕಾರಿ ಇಲಾಖೆಯ ಸಿಬ್ಬಂದಿಗಳು ಮಧ್ಯ ಮಾರಾಟ ಮಾಡುವ ಸ್ಥಳಕ್ಕೆ ಆಗಮಿಸಿದರು, ಹಾಗೂ ಈ ಪ್ರತಿಭಟನೆಯಲ್ಲಿ ಪಟ್ಟಣದ ಹಲವಾರು ಮಹಿಳೆಯರು ಇದ್ದಾರೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ.ಹಚ್ಯಾಳ ದೇವರ ಹಿಪ್ಪರಗಿ.