ಸರಕಾರದ ಅನುದಾನ ಯಾರ ಪಾಲಾಗುತ್ತಿದೆ ಎಂದು – ರಾಜ್ಯಾಧ್ಯಕ್ಷ ತಾಹೇರ್.ಹುಸೇನ್ ಪ್ರಶ್ನೆ.
ಮಾನ್ವಿ ಅ.09

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಸರಕಾರ ಅನುದಾನ ಕೊಟ್ಟರು ಸಹ ಈ ಭಾಗದ ರಾಜಕಾರಣಿಗಳ ನಿಷ್ಕಾಳಜಿ ಯಿಂದಾಗಿ ಅಭಿವೃದ್ಧಿ ಅನ್ನೋದು ಇಲ್ಲಿ ಇಲ್ಲವಾಗಿದೆ ಎಂದು ವೆಲ್ಫೇರ್ ಪಾರ್ಟಿ ರಾಜ್ಯಾಧ್ಯಕ್ಷ ತಾಹೇರ್ ಹುಸೇನ್ ಗುಡುಗಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ವೆಲ್ಫೇರ್ ಪಾರ್ಟಿ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಜನರಿಂದ ಆಯ್ಕೆಯಾದ ಶಾಸಕರು ಸಚಿವರು ಮತ್ತು ಸಂಸದರು ಕಲ್ಯಾಣ ಕರ್ನಾಟಕ ಭಾಗವನ್ನು ಅಭಿವೃದ್ಧಿ ಮಾಡದೆ ಬೆಂಗಳೂರಲ್ಲಿ ಸಂಸಾರ ಸಮೇತವಾಗಿ ಉಳಿದು ಕೊಳ್ಳುತ್ತಾರೆ. ಆದರೆ ಈ ಭಾಗದ ಸಮಸ್ಯೆ ಮತ್ತು ಅಭಿವೃದ್ಧಿ ಮಾಡೋದು ಯಾರು ಎಂದು ಪ್ರಶ್ನಿಸಿದರು.
ಕಲ್ಯಾಣ ಕರ್ನಾಟಕ ಭಾಗವಾದ ಮಾನ್ವಿ ವಿಧಾನ ಸಭಾ ಕ್ಷೇತ್ರವು ಅಭಿವೃದ್ಧಿ ಹೊಂದಿಲ್ಲ ಇಲ್ಲಿನ ಶಾಸಕರ ನಿಷ್ಕಾಳಜಿಯಿಂದ ಅಭಿವೃದ್ಧಿಯಾಗಿಲ್ಲ ಇದು ದೊಡ್ಡ ದುರಂತ ಎಂದು ವೆಲ್ಫೇರ್ ಪಾರ್ಟಿ ಜಿಲ್ಲಾಧ್ಯಕ್ಷ ಫರೀದ್ ಉಮ್ರಿ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನೆಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

