ಕೂಡ್ಲಿಗಿ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ವಿತರಣೆ.
ಕೂಡ್ಲಿಗಿ ಮೇ.30

ಈ ಬಾರಿ ಮಳೆಯೂ ವಾಡಿಕೆಗಿಂತ ಹೆಚ್ಚು ಬೇಗ ಮಳೆ ಬಂದಿದ್ದು ಇಡೀ ತಾಲೂಕಿನಲ್ಲಿ ಕೃಷಿ ಚಟುವಟಿಕೆ ಭರದಿಂದ ಸಾಗಿದೆ ಈ ಬಾರಿ ಮಳೆ ಚೆನ್ನಾಗಿ ಆಗಿರುವುದರಿಂದ ರೈತ ಸಂಪರ್ಕ ಕೇಂದ್ರಕ್ಕೆ ರೈತರು ಬೀಜಗಳನ್ನು ಕೊಂಡು ಕೊಳ್ಳಲು ಮುಂದೆ ಬಂದಿದ್ದಾರೆ. ಅನೇಕ ಬೀಜಗಳು ದಾಸ್ತಾನಿದ್ದು ಮೆಕ್ಕೆಜೋಳ 90 ಕ್ವಿಂಟಲ್ ತೊಗರಿ 31 ಕ್ವಿಂಟಲ್ ಜೋಳ 9 ಕ್ವಿಂಟಲ್ ಸಜ್ಜೆ 2 ಕ್ವಿಂಟಲ್ ಮತ್ತು ಹೆಸರು ನವಣೆ ಇತ್ಯಾದಿ ಶೇಖರಣೆ ರೈತ ಸಂಪರ್ಕ ಕೇಂದ್ರದಲ್ಲಿ ಮಾಡಲಾಗಿದೆ ರೈತ ಸಂಪರ್ಕ ಕೇಂದ್ರದಲ್ಲಿ ಸರ್ಕಾರದ ವತಿಯಿಂದ ಸಾಮಾನ್ಯ ವರ್ಗದವರಿಗೆ 50% ರಿಯಾಯಿತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರೈತರಿಗೆ ಶೇಕಡ 75 ರಷ್ಟು ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಒದಗಿಸಲಾಗುವುದು. ಎಂದು ಅಧಿಕಾರಿಗಳು ತಿಳಿಸಿದರು. ಈ ಬೀಜ ವಿತರಣಾ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕರು ಸುನಿಲ್ ಕುಮಾರ್, ಸಾವಿತ್ರಿ ಹರಾಳ್ ಕೃಷಿ ಅಧಿಕಾರಿಗಳು,ಗುರುಬಸವರಾಜ್, ಆತ್ಮ ಯೋಜನೆಯ ವ್ಯವಸ್ಥಾಪಕರಾದ ಶ್ರವಣಕುಮಾರ, ಕೃಷಿಕ ಸಮಾಜದ ನಿರ್ದೇಶಕರಾದ ಎಮ್.ಬಸವರಾಜ್ ಕಕ್ಕುಪ್ಪಿ ಕೃಷಿಕ ಸಮಾಜದ ಉಪಾಧ್ಯಕ್ಷರಾದ ಜಂಬಣ್ಣ ರೈತ ಸಂಘದ ದೇವರಮನಿ ಮಹೇಶ್ ತಾಲೂಕ ಅಧ್ಯಕ್ಷರಾದ ಭಾಷಾ ಸಾಹೇಬ್ ಶಿವಪುರ ಹಾಲಸ್ವಾಮಿ ರೈತ ಸಂಘದ ಪಾಂಡುರಂಗ ನಾಯಕ್ ದುರ್ಗಪ್ಪ ನಾರಾಯಣ ನಾಯ್ಕ ಪರುಶು ರಾಮ್ ನಾಯ್ಕ ಶೇಷಾಪ್ಪ ಮುಂತಾದವರು ಭಾಗವಹಿಸಿದ್ದರು.ಮತ್ತು ಕೂಡ್ಲಿಗಿ ರೈತ ಸಂಪರ್ಕ ಕೇಂದ್ರದಲ್ಲಿ ಈಗಿರುವ ದಾಸ್ತಾನು ರಿಯಾಯಿತಿ ದರದಲ್ಲಿ ಬಾರ್ ಕೋಡ್ ಸ್ಕ್ಯಾನರ್ ಮುಖಾಂತರ ಅಗತ್ಯ ದಾಖಲಾತಿಗಳನ್ನೊದಗಿಸಿ ರೈತರು ಬಿತ್ತನೆ ಬೀಜಗಳನ್ನು ಪಡೆಯಲು ಸಾರ್ವಜನಿಕರು ರೈತರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ. ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.