6 ನೇ. ವಾರ್ಷಿಕ ಮಹಾ ಸಭೆಯು ಅತ್ಯಂತ – ಯಶಸ್ವಿಯಾಗಿ ಜರುಗಿತು.
ಇಲಕಲ್ಲ ಫೆ.24

ಇಲ್ಲಿನ ಅಲ್ಪಸಂಖ್ಯಾತ ಬಾಗವಾನ ಜಮಾತ್, ಸಾಮಾಜಿಕ ಶೈಕ್ಷಣಿಕ, ಸಾಂಸ್ಕೃತಿಕ ಅಭಿವೃದ್ಧಿ ಸಂಘ ಇಲಕಲ್ಲ ಇದರ 6 ನೇ. ವಾರ್ಷಿಕ ಮಹಾ ಸಭೆಯು ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಸಭೆಯಲ್ಲಿ ಇತ್ತಿಚೆಗೆ ಮುಸ್ಲಿಮರ ಪವಿತ್ರ ಉಮ್ರಾ ಯಾತ್ರೆಗೆ ಹೋಗಿ ಬಂದ ಮಹನೀಯರಿಗೆ ಗೌರವಿಸಿ ಸತ್ಕರಿಸಲಾಯಿತು. ಮತ್ತು ನೂತನವಾಗಿ ಇಲಕಲ್ಲ ನಗರದ ಯೋಜನಾ ಪ್ರಾಧಿಕಾರದ ಸದಸ್ಯರಾಗಿ ಆಯ್ಕೆ ಯಾದ ಸಮಾಜದ ಯುವ ಮುಖಂಡ ಜನಾಬ ಶಬ್ಬೀರ ಅಹ್ಮದ ಬಾಗವಾನ ಇವರಿಗೆ ಸಮಾಜದ ಪರವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನಗರ ಸಭೆ ಸದಸ್ಯರು, ಸಮಾಜದ ಮುಖಂಡರು ಹಿರಿಯರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ಜಿಲ್ಲಾ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಅಬ್ದುಲ್.ಗಫಾರ್.ತಹಶೀಲ್ದಾರ.ಇಲಕಲ್ಲ.ಬಾಗಲಕೋಟೆ