ಸತತವಾಗಿ 5 ನೇ. ಬಾರಿಗೆ ಬಾಗಲಕೋಟ ಗದ್ದುಗೇರಿದ ಪಿ.ಸಿ ಗದ್ದಿಗೌಡರ.

ಇಲಕಲ್ಲ ಜೂನ್.04

ಬಾಗಲಕೋಟೆ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿಸಿದಂತೆ ಬಿಜೆಪಿ ಜಯಭೇರಿ ಬಾರಿಸಿದೆ. ತನ್ನ ಭದ್ರ ಕೋಟೆಯನ್ನು ಬಿಜೆಪಿ ಉಳಿಸಿ ಕೊಂಡಿದೆ. ಪಿ.ಸಿ.ಗದ್ದಿಗೌಡರ ಕೇಸರಿ ಬಾವುಟ ಹಾರಿಸಿದ್ದಾರೆ.ಮತ ಎಣಿಕೆಯ ಸಂದರ್ಭದಲ್ಲಿ ಮೊದಲೆರಡು ಸುತ್ತುಗಳಲ್ಲಿ ಮಾತ್ರ ಕಾಂಗ್ರೆಸ್ ಎರಡು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಮುನ್ನಡೆ ಸಾಧಿಸಿತ್ತು. ಇದನ್ನು ಬಿಟ್ಟರೆ, ಉಳಿದ 17 ಸುತ್ತುಗಳಲ್ಲಿ ಬಿಜೆಪಿ ಮತಗಳು ಏರಿಕೆಯಾಗಿ ಕೊನೆಗೆ 68,399 ಮತಗಳ ಅಂತರದಿಂದ ಪಿ.ಸಿ.ಗದ್ದಿಗೌಡರಿಗೆ ಗೆಲುವಾಯಿತು.ಪಿ.ಸಿ.ಗದ್ದಿಗೌಡರು ಪಡೆದ ಒಟ್ಟು ಮತಗಳು 6,71,039 (6,67,441 +3,598 ಅಂಚೆ ಮತಗಳು).ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಪಡೆದ ಒಟ್ಟು ಮತಗಳು- 6,02,640 (6,00,741+1,899 ಅಂಚೆ ಮತಗಳು). ಬಿಜೆಪಿ ಪಡೆದ ಒಟ್ಟು ಲೀಡ್- 68,399 ಮತಗಳು.ಉತ್ತರ ಕರ್ನಾಟಕದ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿರುವ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಅಂತಿಮ ಫಲಿತಾಂಶ ಹೊರ ಬಿದ್ದಿದೆ. ಬಿಜೆಪಿ ಅಭ್ಯರ್ಥಿ ಪಿ.ಸಿ ಗದ್ದಿಗೌಡರ್ (P. C. Gaddigoudar)  ಅವರು ಗೆಲುವು ಸಾಧಿಸಿದ್ದು, ಈ ಮೂಲಕ 5 ನೇ. ಬಾರಿಗೆ ಗೆಲುವಿನ ಗದ್ದುಗೆ ಏರಿದ್ದಾರೆಲಿಂಗಾಯತ ಸಮುದಾಯದ ಪ್ರಾಬಲ್ಯ ಇರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಲಿಂಗಾಯತ ಅಭ್ಯರ್ಥಿಗಳೇ ಅಖಾಡದಲ್ಲಿದ್ದರು. ಹೀಗಾಗಿ ಪೈಪೋಟಿಯನ್ನು ಮತ್ತಷ್ಟು ಹೆಚ್ಚಿಸಿತ್ತು. ಪಿ.ಸಿ ಗದ್ದಿಗೌಡರ ಅವರು ಸ್ಪರ್ಧಿಸಿದರೆ, ಇತ್ತ ಕಾಂಗ್ರೆಸ್‍ನಿಂದ ಮೊದಲ ಬಾರಿ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್ (Samyukta Patil) ಅದೃಷ್ಟ ಪರೀಕ್ಷೆಗೆ ಇಳಿದು ಸೋತಿದ್ದಾರೆ.ಗದ್ದಿಗೌಡರ ಅವರು ಸಂಯುಕ್ತಾ ಪಾಟೀಲ್ ವಿರುದ್ಧ 6,83,99 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಗದ್ದಿಗೌಡರಿಗೆ 6,71,039 ಮತಗಳು ಬಿದ್ದರೆ, ಸಂಯುಕ್ತಾ ಪಾಟೀಲ್ ಅವರು 6,02,640 ಮತಗಳನ್ನು ಗಳಿಸಿದ್ದಾರೆ. ಈ ಮೂಲಕ ಸಂಯುಕ್ತಾ ಪಾಟೀಲ್ ಅವರು ಮೊದಲ ಪ್ರಯತ್ನದಲ್ಲಿ ಸಂಸತ್ ಪ್ರವೇಶಿಸಲು ವಿಫಲರಾದರು.ಕಳೆದ ಚುನಾವಣೆಯಲ್ಲಿ ಏನಾಗಿತ್ತು?: 2019 ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಪಿ.ಸಿ.ಗದ್ದಿಗೌಡರ್ 1,68,187 ಮತಗಳ ಅಂತರದಿಂದ ಗೆಲುವು ದಾಖಲಿಸಿ ಸತತ ನಾಲ್ಕನೆಯ ಬಾರಿ ಸಂಸದರಾಗಿ ಆಯ್ಕೆಯಾದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೀಣಾ ಕಾಶಪ್ಪನವರ್ ಭಾರೀ ಅಂತರದ ಸೋಲು ಅನುಭವಿಸಿದರು. ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದರೂ ಬಿಜೆಪಿ ಅಭ್ಯರ್ಥಿ ಗೆದ್ದು ಸೋಲಿಲ್ಲದ ಸರದಾರ ಎನಿಸಿ ಕೊಂಡಿದ್ದಾರೆ.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್.ವಾಯ್.ಕಿಳ್ಳಿ ಇಲಕಲ್ಲ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button