ಸಾಮೂಹಿಕ ಮದುವೆಗಳು ಆರ್ಥಿಕ ಹೊರೆಯನ್ನು ಕಡಿಮೆಗೊಳಿಸುತ್ತವೆ-ಶಾಸಕ ಕಾಶಪ್ಪನವರ.
ಹುನಗುಂದ ಸಪ್ಟೆಂಬರ್.9

ಸಾಮೂಹಿಕ ಮದುವೆಗಳು ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದರ ಜೊತೆಗೆ ಬಡ ಕುಟುಂಬಗಳ ಬಹುದೊಡ್ಡ ಹೊರೆಯನ್ನು ಕಡಿಮೆ ಮಾಡುತ್ತವೆ.ನಾಡಿನ ಸಂತ ಶರಣರ,ಸ್ವಾಮಿಗಳ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೀವುಗಳು ಪುಣ್ಯವಂತರು ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ಪಟ್ಟಣದ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಸಂಗಮೇಶ್ವರ ದೇವಸ್ಥಾನ ಜೀಣೋದ್ದಾರ ಮತ್ತು ಜಾತ್ರಾ ಸಮಿತಿ ವತಿಯಿಂದ ಉಚಿತ ಸಾಮೂಹಿಕ ವಿವಾಹ ಹಾಗೂ ಇಷ್ಟಲಿಂಗದೀಕ್ಷೆ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಚಿಕ್ಕ ಸಂಸಾರ ಚೊಕ್ಕ ಸಂಸಾರಕ್ಕೆ ಆಧ್ಯತೆಯನ್ನು ನೀಡುವ ಮೂಲಕ ನವ ದಂಪತಿಗಳು ದಾಂಪತ್ಯ ಜೀವನದಲ್ಲಿ ಕಷ್ಟ ಬಂದಾಗ ಕುಗ್ಗದೇ ಸುಖ ಬಂದಾಗ ಹಿಗ್ಗದೇ ಎರಡನ್ನು ಸಮನಾಗಿ ಸ್ವೀಕರಿಸಬೇಕು.ಸಂಗಮೇಶ್ವರ ದೇವಸ್ಥಾನ ಸಮಿತಿಯಿಂದ ಪ್ರತಿ ವರ್ಷ ಇಂತಹ ಕಲ್ಯಾಣ ಕಾರ್ಯವನ್ನು ಮಾಡುತ್ತಾ ಬರುತ್ತಿದೆ.ಸಂಗಮೇಶ್ವರ ಕಲ್ಯಾಣ ಮಂಟಪದ ಅಡಿಗಲ್ಲನ್ನು ನಾನೇ ಹಾಕಿ ಆರಂಭಿಸಿದ್ದು ಸಮಿತಿ ಸರ್ವ ಸದಸ್ಯರ ಶ್ರಮದಿಂದ ಇಂತಹ ಭವ್ಯ ಕಟ್ಟಡ ನಿರ್ಮಾಣವಾಗಿದೆ.ಕಲ್ಯಾಣ ಮಂಟಪದ ಇನ್ನುಳಿದ ಎಲ್ಲಾ ಕೆಲಸಗಳನ್ನು ಕೆಲವೇ ವರ್ಷದಲ್ಲಿ ನಾನೇ ಪೂರ್ಣಗೊಳಿಸಿ ಶ್ರೀಗಳ ನೇತೃತ್ವದಲ್ಲಿ ಉದ್ಘಾಟನೆಯನ್ನು ಅತೀ ಶೀಘ್ರದಲ್ಲಿ ಮಾಡಲಾಗುವುದು ಎಂದರು.ಹಡಗಲಿ ನಿಡಗುಂದಿಯ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿಕೊಂಡು ಮಾತನಾಡಿ ದಾಂಪತ್ಯ ಜೀವನ ಬಹಳ ಪವಿತ್ರವಾದ ಸಂಬಂಧ.ಸಂಸಾರ ಸುಖಮಯವಾಗಿ ಸಾಗಬೇಕಾದರೇ ಗಂಡ ಹೆಂಡತಿ ಸಾಮರಸ್ಯದ ಬದುಕು ಮುಖ್ಯ.ಗಂಡ ಹೆಂಡತಿ ಜಗಳ ಗಂಧ ತಿಂಡಿದಂತೆ,ಜೀವನದಲ್ಲಿ ಬರುವ ನೋವು ನಲಿವುಗಳನ್ನು ಸಮನಾಗಿ ಸ್ವೀಕರಿಸಿ ಮುನ್ನೆಡಯಬೇಕು.ದಾಂಪತ್ಯ ಜೀವನಕ್ಕೆ ಕಾಲಿಟ್ಟು ನವ ವಧು ವರರಿಗೆ ಶುಭವಾಗಲೆಂದು ಹಾರೈಸಿದರು.

ವಿ.ಮ.ಬ್ಯಾಂಕ್ ನಿರ್ದೇಶಕ ಮಹಾಂತೇಶ ಅವಾರಿ ಮಾತನಾಡಿ 5 ಕೋಟಿ ರೂ ವೆಚ್ಚದಲ್ಲಿ ಇಂತಹ ದೊಡ್ಡ ಮಂಟಪ ನಿರ್ಮಾಣದಲ್ಲಿ ಸಂಗಮೇಶ್ವರ ದೇವಸ್ಥಾನ ಸಮಿತಿ ಸರ್ವ ಸದಸ್ಯರ ಪರಿಶ್ರಮ ಮೆಚ್ಚುವಂತದ್ದು.ಕಲ್ಯಾಣ ಮಂಟಪದ ಕಾಮಗಾರಿ ಇನ್ನು ಅರ್ಧದಲ್ಲಿದ್ದು ಅದನ್ನು ಶಾಸಕ ವಿಜಯಾನಂದ ಕಾಶಪ್ಪನವರ ತಮ್ಮ ಅವಧಿಯಲ್ಲಿ ಇದನ್ನು ಪರಿಪೂರ್ಣಗೊಳಿಸಬೇಕೆಂದು ಮನವಿ ಮಾಡಿದರು.ಒಗ್ಗಟ್ಟು ಇದ್ದರೇ ಇಂತಹ ದೊಡ್ಡ ಕಲ್ಯಾಣ ಕಾರ್ಯಗಳನ್ನು ಮಾಡಲು ಸಾಧ್ಯ ಎಂದರು. ಚಳಗೇರಿ ವೀರಸಂಗಮೇಶ್ವರ ಶ್ರೀಗಳು ಸಮ್ಮುಖ ವಹಿಸಿಕೊಂಡು ಮಾತನಾಡಿದರು.ಅಧ್ಯಕ್ಷತೆಯನ್ನು ಸಂಗಮೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಶೇಖರಪ್ಪ ಬಾದವಾಡಗಿ ವಹಿಸಿಕೊಂಡಿದ್ದರು,ವಿ.ಮ.ಬ್ಯಾಂಕ್ ಅಧ್ಯಕ್ಷ ರವಿ ಹುಚನೂರ,ಪಿಕೆಪಿಎಸ್ ಅಧ್ಯಕ್ಷ ದೇವು ಡಂಬಳ,ಬಿ.ವ್ಹಿ.ಪಾಟೀಲ ಮಾತನಾಡಿದರು.ಈ ಸಂದರ್ಭದಲ್ಲಿ 7 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು,ಮತ್ತು ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮ ನಡೆಯಿತು.ವೇ.ಮೂ.ಮಹಾಂತಯ್ಯ ಗಚ್ಚಿನಮಠ,ನೀಲಪ್ಪ ತಪೇಲಿ,ರಾಜಕುಮಾರ ಬಾದವಾಡಗಿ,ಮಲ್ಲು ವೀರಾಪೂರ,ಶಿವಾನಂದ ಕಂಠಿ,ಮಹಾಂತೇಶ ಶ್ಯಾವಿ,ಅಪ್ಪು ಜಡಿಮಠ,ಸಣ್ಣಬಸಪ್ಪ ಹಳಪೇಟಿ,ಈಶ್ವರಪ್ಪ ಹವಾಲ್ದಾರ,ಬಸವಂತಪ್ಪ ಕುಂಟೋಜಿ,ಅರುಣೋದಯ ದುದ್ಗಿ,ರಾಮನಗೌಡ ಬೆಳ್ಳಿಹಾಳ,ಗುರಣ್ಣ ಗೋಡಿ,ಮಲ್ಲಪ್ಪ ಅಂಟರತಾನಿ,ಅಡಿವೆಪ್ಪ ಅವಾರಿ ಸೇರಿದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ