ಹಳ್ಳಿ ಹಳ್ಳಕ್ಕೆ ಇಲ್ಲ ಸೇತುವೆ, ಮಳೆಗಾಲದಲ್ಲಿ ಗ್ರಾಮಸ್ಥರಿಗೆ ಸಂಚಾರದ ಸಂಕಷ್ಟ….!
ಮಾರ್ಕಬ್ಬಿನಹಳ್ಳಿ ಜೂನ್.10

ಹಳ್ಳಕ್ಕೆ ಸೇತುವೆ ನಿರ್ಮಿಸುವಂತೆ ಮಾರ್ಕಬ್ಬಿನಹಳ್ಳಿ ಗ್ರಾಮಸ್ಥರು ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದರು. ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಸ್ಪಂದನೆ ಸಿಕ್ಕಿಲ್ಲ. ಹಳ್ಳಕ್ಕೆ ಅಡ್ಡಲಾಗಿ ಶಾಶ್ವತ ಸೇತುವೆ ನಿರ್ಮಿಸಿ ಕೊಡಿ ಎಂಬ ನಮ್ಮ ಬೇಡಿಕೆಯನ್ನು ಯಾರು ಇದುವರೆಗೆ ಈಡೇರಿಸುತ್ತಿಲ್ಲ . ನಮ್ಮ ಸಂಕಷ್ಟ ಯಾರಿಗೆ ಹೇಳಬೇಕು ಎಂದ ಗ್ರಾಮಸ್ಥರು.ದೇವರ ಹಿಪ್ಪರಗಿ ತಾಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮಸ್ಥರ ಪರಿಸ್ಥಿತಿ ಮಳೆಗಾಲ ಶುರುವಾಯಿತು ಎಂದರೆ ಭಯ ಆತಂಕ ಶುರು ಆಗುತ್ತದೆ. ಊರು ಮುಂದಿನ ಹಳ್ಳಕ್ಕೆ ಸೇತುವೆ ಇಲ್ಲದ ಕಾರಣ ತುಂಬಿ ಹರಿಯುವ ಹಳ್ಳ ದಾಟುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ.ಪ್ರತಿ ವರ್ಷ ಉಕ್ಕಿ ಹರಿಯುವ ಈ ಹಳ್ಳದಿಂದ ಗ್ರಾಮಸ್ಥರು ತೊಂದರೆಗೆ ಒಳಗಾಗುತ್ತಿದ್ದಾರೆ. ಗ್ರಾಮದಲ್ಲಿ ಯಾರಿಗಾದರೂ ಅನಾರೋಗ್ಯ ಉಂಟಾದರೆ ಆಸ್ಪತ್ರೆಗೆ ತೆರಳ ಬೇಕೆಂದರೆ ಹಳ್ಳ ತುಂಬಿ ಹರಿಯುವುದರಿಂದ ಪಟ್ಟಣಕ್ಕೆ ಸಂಪರ್ಕಿಸಲು ಸಾಧ್ಯವಾಗುದ್ದಿಲ್ಲ. ಈ ಮಾರ್ಕಬ್ಬಿನಹಳ್ಳಿ ಗ್ರಾಮದಲ್ಲಿ ಸರಕಾರಿ ಪ್ರೌಢಶಾಲೆ, ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ, ಸರಕಾರಿ ಉರ್ದು ಶಾಲೆಗಳು ಇದ್ದು. ಶಿಕ್ಷಕರು ಪಟ್ಟಣದಿಂದ ಈ ಗ್ರಾಮಕ್ಕೆ ಬರ ಬೇಕಾದರೆ ಈ ಹಳ್ಳದಾಟೆ ಬರಬೇಕು. ಹಳ್ಳದಲ್ಲಿ ನೀರು ತುಂಬಿ ಹರಿವುದರಿಂದ ಊರಿಗೆ ತಲುಪಲು ಸಾಧ್ಯವಾಗುವುದಿಲ್ಲ. ಇಲ್ಲಿನ ಶಾಲಾ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಎಂದು ಪ್ರಜ್ಞಾವಂತ ನಾಗರಿಕರ ಆರೋಪವಾಗಿದೆ. ನೀರಿನ ಸೆಳೆತ ಅರಿಯದ ಸಾರ್ವಜನಿಕರು ಮನೆ ಸೇರುವ (ಧಾವಂತ, ಅವಸರ) ದಲ್ಲಿ ಹಳ್ಳ ದಾಟುವ ಬಂಡ ಧೈರ್ಯ ಮಾಡಿ ಎಷ್ಟೋ ಜನ ಅಪಾಯದಲ್ಲಿ ಸಿಲುಕಿ ಕೊಂಡು ಪ್ರಾಣ ಅಪಾಯದಿಂದ ಪಾರಾಗಿದ್ದಾರೆ.ಈ ಗ್ರಾಮದ ಜನರು ತಮ್ಮ ಊರಿಗೂ ಸೇತುವೆ ನಿರ್ಮಾಣ ವಾಗಲಿದೆಯೇ? ಎಂದು ಕಾದು ನೋಡುತ್ತಿದ್ದಾರೆ. ಊರ ಮುಂದಿನ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಿ ಗ್ರಾಮಸ್ಥರಿಗೆ ಅನುಕೂಲ ಮಾಡಿ ಈ ಗ್ರಾಮದ ಜನರ ಬವಣೆಗೆ ಇನ್ನಾದರು ಸಂಬಂಧ ಪಟ್ಟ ಅಧಿಕಾರಿಗಳು ಸರ್ಕಾರ ಕಿವಿ ಕೊಡಲಿದೆಯೇ? ಕಾಯ್ದು ನೋಡಬೇಕಾಗಿದೆ.
“ಬಾಕ್ಸ್ ಸುದ್ದಿ”…..
ಸಾರ್ವಜನಿಕರಿಗೆ, ಗ್ರಾಮಸ್ಥರಿಗೆ ಈ ಹಳ್ಳದಿಂದ ತುಂಬ ತೊದರೆಯಾಗುತ್ತಿದೆ. ಈ ಹಳ್ಳಕೆ ಬ್ರಿಡ್ಜ್ ಮಾಡಿ ಮಾರ್ಕಬ್ಬಿನಹಳ್ಳಿ ಊರಿನ ಜನರಿಗೆ ಮತ್ತು ಈ ರಸ್ತೆಗೆ ಅಡ್ಡಾಡುತ್ತಿರುವವರಿಗೆ ಸರಕಾರ ಅನುಕೂಲ ಮಾಡಿ ಕೊಡಬೇಕು.(ನಜಿರ ಬೀಳಗಿ, ಟಿಪ್ಪು ಕ್ರಾಂತಿ ಸೇನೆ ಸಂಘಟನೆ ಜಿಲ್ಲಾಧ್ಯಕ್ಷರು ವಿಜಯಪುರ)
“ಬಾಕ್ಸ್ ಸುದ್ದಿ”…..
ಸುಮಾರು ವರ್ಷದಿಂದ ಈ ಹಳ್ಳದಿಂದ ಜನೆತೆಗೆ ತೊಂದರೆ ಯಾಗುತ್ತಿದೆ ಸಾಕಷ್ಟು ಬಾರಿ ಅಧಿಕಾರಿಗಳಿಗೆ, ರಾಜಕೀಯ ನಾಯಕರುಗಳಿಗೆ ತಿಳಿಸಿದರು ಪ್ರಯೋಜವಾಗಿಲ್ಲ. ಅತಿ ಶೀಘ್ರದಲ್ಲಿ ಸೇತುವೆ ನಿರ್ಮಾಣ ಮಾಡದಿದ್ದಲ್ಲಿ ಹೋರಾಟ ಮಾಡಲಾಗುವುದು. (ವಿಶ್ವಾನಾಥ ವಂದಾಲಮಠ, ಜಯ ಕರ್ನಾಟಕ ಸಂಘಟನೆ ತಾಲೂಕು ವಲಯ ಘಟಕ ಅಧ್ಯಕ್ಷರು ದೇವರಹಿಪ್ಪರಗಿ)
ವರದಿ:ಮಹಾಂತೇಶ ಹಾದಿಮನಿ ವಿಜಯಪುರ.