ತುಳಸಿ ಕುಟುಂಬಕ್ಕೆ ಸಾಂತ್ವಾನ, ಸರ್ಕಾರ ದಿಂದ ಬರುವ ಪರಿಹಾರವನ್ನು ಒದಗಿಸಿ ಕೊಡುವೆ – ಶಾಸಕ ಡಾ. ಶ್ರೀ ನಿವಾಸ್. ಎನ್.ಟಿ.
ಕಾತ್ರಿಕೆಹಟ್ಟಿ ಜೂನ್.13

ಖಾನಾ ಹೊಸಹಳ್ಳಿ ಸಮೀಪದ ಕಾತ್ರಿಕೆಹಟ್ಟಿ ಗ್ರಾಮದ ವಿದ್ಯಾರ್ಥಿನಿ ತುಳಸಿ (8) ಅವರಿಗೆ ವಿದ್ಯುತ್ ಶಾಕ್ ಹೊಡೆದ ಪರಿಣಾಮ ಇತ್ತೀಚಿಗೆ ತೀರಿ ಕೊಂಡಿದ್ದರು. ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿ. 12-06-24 ರಂದು ದುಃಖದಲ್ಲಿರುವ ತುಳಸಿ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿ ಧೈರ್ಯ ತುಂಬಿದರು. ಶಾಸಕರು ವೈಯಕ್ತಿಕವಾಗಿ ಅವರ ಕುಟುಂಬಕ್ಕೆ ನೆರವು ನೀಡಿ ಸರ್ಕಾರ ದಿಂದ ಬರುವ ಪರಿಹಾರವನ್ನು ಒದಗಿಸಿ ಕೊಡುವುದಾಗಿ ತಿಳಿಸಿದರು. ಸ್ಥಳದಲ್ಲೇ ಕೆ. ಇ. ಬಿ. ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಇರುವ ಕಡೆ ಹಳೆಯ ವಿದ್ಯುತ್ ಕಂಬಗಳನ್ನು ಕೂಡಲೇ ತೆರವು ಗೊಳಿಸಿ ಹೊಸ ಕಂಬ ನಿರ್ಮಿಸಲು ಸೂಚಿಸಿದರು. ಈ ಸಂದರ್ಭದಲ್ಲಿ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು, ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕೆ. ಹೊಸಹಳ್ಳಿ.