ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ದಿಂದ – ಮುಂಗಾರು ಸಂಭ್ರಮ.

ಕೂಡ್ಲಿಗಿ ಜೂನ್.16

ಕೂಡ್ಲಿಗಿ ತಾಲೂಕಿನ ಜಂಗಮ ಸೋವೇನ ಹಳ್ಳಿ ಗ್ರಾಮದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ ಏರ್ಪಡಿಸಿದ್ದ ಮುಂಗಾರು ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಭಾಷೆಯ ಅನಿವಾರ್ಯತೆ ಸೃಷ್ಟಿಸದ ಹೊರತು ಭಾಷೆಯ ಅನುಷ್ಠಾನ ಅಸಾಧ್ಯ. ನಾವು ನಿತ್ಯ ಭಾಷೆಯನ್ನು ಬೆಳೆಸ ಬೇಕಾದರೆ ಕನ್ನಡ ಭಾಷೆಯನ್ನೇ ಬಳಸಬೇಕು, ಆಗ ಭಾಷೆ ಸಮೃದ್ಧವಾಗಿ ಬೆಳೆಯುತ್ತದೆ, ಭಾಷಿಕರ ಸಂಖ್ಯೆಯೂ ಹೆಚ್ಚುತ್ತದೆ. ವಿದ್ಯಾವಂತರು ಹಣವಂತರು ದೊಡ್ಡ ಹುದ್ದೆಯಲ್ಲಿರುವವರು ಕನ್ನಡದ ಬಗ್ಗೆ ಇರುವ ಕೀಳರಿಮೆಯನ್ನು ಮೊದಲು ತೊರೆಯಬೇಕು ಎಂದರು. ಕನ್ನಡ ನೆಲದ ಸಕಲ ಸವಲತ್ತುಗಳು ಬೇಕು, ಕನ್ನಡ ಭಾಷೆ ಬೇಡ ಎನ್ನುವವರಿಗೆ ಸರ್ಕಾರ ಬುದ್ಧಿ ಕಲಿಸಬೇಕಿದೆ ಎಂದರು.ಕಸಾಪ ನಿಕಟ ಪೂರ್ವ ಅಧ್ಯಕ್ಷ ಎನ್.ಎಂ.ರವಿಕುಮಾರ್ ರೈತರು ರಸಗೊಬ್ಬರ ಬಳಸಿದರೆ ಆಗುವ ಪರಿಣಾಮಗಳ ಕುರಿತು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ರೈತರು ದಿಢೀರ್ ಶ್ರೀಮಂತರಾಗುವ ಆಸೆಯಿಂದ ಕೊಟ್ಟಿಗೆ ಗೊಬ್ಬರ ಬಳಸದೇ ರಾಸಾಯನಿಕ ಯುಕ್ತ ಗೊಬ್ಬರ, ಔಷಧಗಳ ಬಳಕೆ ಮಾಡಿ ಈ ನೆಲದ ಸತ್ವವನ್ನು ವಿಷ ಮಾಡಿದ್ದಾರೆ. ಯಥೇಚ್ಛವಾಗಿ ರಸಾಯನಿಕ ಗೊಬ್ಬರದ ಪರಿಣಾಮ ರೈತ ಬೆಳೆದ ಬೆಳೆ ವಿಷಮಯವಾಗಿದೆ ಇದನ್ನು ಸೇವಿಸುವ ನಾವುಗಳು ಅನೇಕ ರೋಗಗಳಿಗೆ ಬಲಿಯಾಗುವುದಲ್ಲದೆ, ಆಯಸ್ಸನ್ನು ಸಹ ಹತ್ತಿರಕ್ಕೆ ತಂದು ಕೊಂಡಿದ್ದೇವೆ. ಹದಿ ಹರೆಯದ ವಯಸ್ಸಿನಲ್ಲಿಯೇ ಆಸ್ಪತ್ರೆಗೆ ದಾಖಲಾಗಿ ಹಣವ್ಯಯ ಮಾಡುತ್ತಿರುವುದು ದುರಂತವೇ ಸರಿ. ಆದ್ದರಿಂದ ರೈತರು ಸಾವಯವ ಗೊಬ್ಬರ ಬಳಸುವ ಜತೆ ಸಿರಿ ಧಾನ್ಯಗಳನ್ನು ಬೆಳೆದರೆ ಉತ್ತಮ ಆರೋಗ್ಯದ ಜತೆ ನೆಮ್ಮದಿಯ ಬದುಕನ್ನು ಕಟ್ಟಿ ಕೊಳ್ಳಬಹುದು ಎಂದು ರೈತರಿಗೆ ಸಲಹೆ ನೀಡಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಿ.ಬಿ.ಶಿವಾನಂದ ಒತ್ತಡ ಮುಕ್ತ ಕಲಿಕೆಯಲ್ಲಿ ಶಿಕ್ಷಕರ ಪಾತ್ರ ಕುರಿತು ಮಾತನಾಡಿದರು, ಮಿಮಿಕ್ರಿ ಕಲಾವಿದ ಕೋಗಳಿ ಕೊಟ್ರೇಶ್ ಹಾಸ್ಯ ಕಲೆಯನ್ನು ಪ್ರಸ್ತುತ ಪಡಿಸಿ ಜನರನ್ನು ರಂಜಿಸಿದರು. ಕಾರ್ಯಕ್ರಮದಲ್ಲಿ ಸಾನಿಧ್ಯವನ್ನು ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮಿ ವಹಿಸಿದ್ದರು. ಕಸಾಪ ತಾಲೂಕು ಅಧ್ಯಕ್ಷ ವೀರೇಶ್ ಅಂಗಡಿ, ಕಜಾಪ ತಾಲೂಕು ಅಧ್ಯಕ್ಷ ಕೆ.ಎಂ.ವೀರೇಶ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್.ವಿ.ಸಿದ್ದರಾಧ್ಯ, ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಕಾರ್ಯದರ್ಶಿ ಕೆ.ಎಸ್. ವೀರೇಶ್ ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷೆ ವಿ.ಗೀತಾ, ತಾಲೂಕು ಅಧ್ಯಕ್ಷ ಕೊಟ್ರಗೌಡ, ಕಾರ್ಯದರ್ಶಿ ಟಿ.ಎಚ್.ಎಂ.ಶೇಖರಯ್ಯ, ಗ್ರಾಪಂ ಸದಸ್ಯ ಉಪ್ಪಾರ ಫಕ್ಕಿರಪ್ಪ,ಎಸ್ಡಿಎಂಸಿ ಅಧ್ಯಕ್ಷ ಉಪ್ಪಾರ ದುರುಗಪ್ಪ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಮಂಜುನಾಥ, ಹಾಲಸ್ವಾಮಿ,ಹವ್ಯಾಸಿ ಬರಹಗಾರ ಸ್ವರೂಪನಂದ, ನಂದಿ ವಿರೂಪಾಕ್ಷಪ್ಪ ಸೇರಿದಂತೆ ಗ್ರಾಮಸ್ಥರು ಇದ್ದರು.ಇದೇ ಸಂಧರ್ಭದಲ್ಲಿ ಕಸಾಪ ಕಾರ್ಯದರ್ಶಿ ನಂದಿ ಬಸವರಾಜ ಸರ್ಕಾರಿ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ಸ್ ವಿತರಣೆ ಮಾಡಿದರು.ನಂತರ ಸಾಧಕರಿಗೆ ಸನ್ಮಾನ ಮಾಡಲಾಯಿತು. ಅಗಸಗಟ್ಟೆ ತಿಂದಪ್ಪ ಸಂಗಡಿಗರು ಜಾನಪದ ಗೀತೆ ಗಾಯನ ಮಾಡಿದರು.

ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button