ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕು, ಮತ ಮಾರಾಟ ಮಾಡಬೇಡಿ – ಶ್ರೀಧರ ಗೊಟೂರ.
ಹುನಗುಂದ ಏಪ್ರಿಲ್.04

ಮತದಾನ ಮಾಡುವದು ಪ್ರತಿಯೊಬ್ಬರ ಹಕ್ಕು, ಮತವನ್ನು ಮಾರಾಟ ಮಾಡದೆ ದೇಶದ ಭವಿಷ್ಯಕ್ಕೆ ಮತ್ತು ಉತ್ತಮ ಆಡಳಿತಕ್ಕೆ ನಾವೆಲ್ಲರೂ ಮತದಾನ ಮಾಡಬೇಕು ಎಂದು ಸಹಾಯಕ ಚುನಾವಣಾಧಿಕಾರಿ ಶ್ರೀಧರ ಗೊಟೂರ ಹೇಳಿದರು. ಪಟ್ಟಣದ ಜಿಲ್ಲಾ ಆಡಳಿತ,ಜಿಲ್ಲಾ ಸ್ವೀಪ್ ಸಮಿತಿ ಮತ್ತು ತಾಲೂಕ ಆಡಳಿತ,ತಾಲೂಕ ಸ್ವೀಪ್ ಸಮಿತಿ ಹಾಗೂ ಪುರಸಭೆ ಸಹಯೋಗದಲ್ಲಿ ನಡೆದ ಮತದಾನ ಜಾಗೃತಿ ಅಭಿಯಾನದ ಕರಪತ್ರ ಬಿಡುಗಡೆ ಗೊಳಿಸಿ ಮಾತನಾಡಿದ ಅವರು, ಯಾವುದೇ ಆಸೆ ಆಮೀಷಕ್ಕೆ ಒಳಗಾಗದೆ ಭಾರತ ಸ್ವಚ್ಚ ಆಡಳಿತ ಉತ್ತಮ ಭವಿಷ್ಯವನ್ನು ಯೋಚಿಸಿ ಮತ ಹಾಕಬೇಕು. ವಿವೇಚನೆಯಿಂದ ಮತ ಹಾಕಿದರೆ ದೇಶದ ಜನರಿಗೆ ಹಿತವಾದಂತೆ, ಮತದಾನದ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತರೆ ದೇಶ ತಾನಾಗಿಯೇ ಮುನ್ನಡೆಯುತ್ತದೆ ಎಂದರು. ತಹಶೀಲ್ದಾರ ನಿಂಗಪ್ಪ ಬಿರಾದಾರ ಮಾತನಾಡಿ ೧೦೦ ಕ್ಕೆ ೧೦೦ ರಷ್ಟು ಮತದಾನ ಮಾಡಿಸಲು ಪ್ರತಿಯೊಬ್ಬರು ನೆರೆಹೊರೆಯವರನ್ನು ಕರೆತಂದು ಮತಗಟ್ಟೆಗೆ ಮತದಾನ ಮಾಡಿಸುವ ಶ್ರಮದಾನ ದಿಂದ ನಾವು ಹೊಸ ಮನಸಿನೊಂದಿಗೆ ಸದೃಢ ದೇಶ ಕಟ್ಟಲು ಸಾಧ್ಯವಾಗಲಿದೆ ಎಂದರು. ಮುಖ್ಯಾಧಿಕಾರಿ ಪಿ.ಕೆ. ಗುಡದಾರಿ ಮಾತನಾಡಿ ಎಲ್ಲರೂ ಭೂತಕಡೆಗೆ ಹೊರಡಿ, ಮತದಾನದ ಅವಕಾಶದ ಜಾಣ್ಮೆಯಿಂದ ಬಟನ್ ಒತ್ತುವ ಮೂಲಕ ಯೋಗ್ಯರಿಗೆ ಮತ ನೀಡೋಣ ಎಂದರು. ಪುರಸಭೆಯಿಂದ ಜಾಗೃತಿ ಜಾಥಾವು ಚನ್ನಮ್ಮ ವೃತ್ತದ ಮೂಲಕ ಪಟ್ಟಣದ ಪ್ರಮುಖ ಬೀದಿಯಲ್ಲಿ ನಡೆದು ವಿಜಯ ಮಹಾಂತೇಶ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಮತದಾನ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ತಾಪಂ ಇಒ ಶ್ರೀಮತಿ ತಾರಾ, ವಿಕಲಚೇತನ ಮುಖಂಡ ಸಂಗಮೇಶ ಬಾವಿಕಟ್ಟಿ,ಪುರಸಭೆಯ ಶ್ರೀ ಹುಣಶಾಳ, ಮಹಾಂತೇಶ ತಾರಿವಾಳ, ಬಾಬು ಲೈನ್, ರಜಾಕ ಲೈನ್, ಸಿದ್ದು ಹಿರೇಮನಿ ಸೇರಿದ್ದಂತೆ ಪೌರ ಕಾರ್ಮಿಕರು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ