ಮಹಾತ್ಮ ಗಾಂಧೀಜಿ ಪ್ರತಿಮೆಗೆ ನಮನ ಸಲ್ಲಿಸಿದ – ಶಾಸಕ ಹಂಪಯ್ಯ ನಾಯಕ.
ಮಾನ್ವಿ ಅ.03

ಮಹಾತ್ಮ ಗಾಂಧೀಜಿಯವರ ಕೊಡುಗೆಯಿಂದಾಗಿ ನಮಗೆ ಸ್ವಾತಂತ್ರ್ಯ ಲಭಿಸಿದೆ. ಹೀಗಾಗಿ ಪ್ರತಿಯೊಬ್ಬರು ಅವರ ವಿಚಾರದಂತೆ ನಡೆಯಬೇಕು ಎಂದು ಶಾಸಕ ಹಂಪಯ್ಯ ನಾಯಕ ತಿಳಿಸಿದರು. ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಪಂಪಾ ಗಾರ್ಡನ್ ನಲ್ಲಿ ನಡೆದ ಮಹಾತ್ಮ ಗಾಂಧೀಜಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ.

ಗಾಂಧೀಜಿ ಮಹಾತ್ಮರು ಸೇರಿದಂತೆ ನಾನಾ ವ್ಯಕ್ತಿಗಳ ಕೊಡುಗೆಯಿಂದಾಗಿ ಬ್ರಿಟೀಷರು ನಮ್ಮ ದೇಶ ಬಿಟ್ಟು ತೆರಳಲು ಸಾಧ್ಯವಾಯಿತು ಎಂದರು. ಗಾಂಧೀಜಿ ಅವರ ಕೊಡುಗೆ ಇರುವುದರಿಂದಲೇ ನಾವು ಅವರನ್ನು ನಿತ್ಯ ನೆನೆದರು ಸಹ ತಪ್ಪೇನಿಲ್ಲ. ಹೀಗಾಗಿ ಶಾಲಾ ಮಕ್ಕಳು ಗಾಂಧೀಜಿಯವರ ವೈಚಾರಿಕತೆಯಂತೆ ನಡೆಯಬೇಕು ಎಂದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ಮಾನ್ವಿ