ಹಾಸ್ಟೇಲ್ ಸೌಲಭ್ಯಗಳನ್ನು ಬಳಸಿಕೊಂಡು ಹೆಚ್ಚು ಹೆಚ್ಚಾಗಿ ಓದುವುದರೊಂದಿಗೆ ಉತ್ತಮವಾದ ಜೀವನ ರೂಪಿಸಿಕೊಳ್ಳಿ ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಟಿ. ದೇವಪ್ಪ ಕರೆ.
ಕೂಡ್ಲಿಗಿ ಸಪ್ಟೆಂಬರ್.16

ಪಟ್ಟಣದ 2 ನೇ ವಾರ್ಡಿನ ಉಡುಸಲಮ್ಮ ಕೆರೆ ಕಟ್ಟಿಯ ಹಿಂಭಾಗದಲ್ಲಿ ಬರುವಂತಹ ಪರಿಶಿಷ್ಟ ಜಾತಿ ವಿದ್ಯಾರ್ಥಿ ನಿಲಯದಲ್ಲಿ ಹೊಸದಾಗಿ ವಿದ್ಯಾರ್ಥಿ ನಿಲಯಕ್ಕೆ ದಾಖಲಾತಿಯಾಗಿ ಬರುವ ವಿದ್ಯಾರ್ಥಿಗಳಿಗೆ ಸ್ವಾಗತ ಮಾಡುತ್ತಾ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮವನ್ನು ಶುಕ್ರವಾರ ಸಾಯಂಕಾಲ 5-00.ಗೆ ಹಮ್ಮಿಕೊಳ್ಳಲಾಗಿದ್ದು. ಈ ಸಂದರ್ಭದಲ್ಲಿ ಎಸ್ ಎ ವಿ ಟಿ ಕಾಲೇಜಿನ ಪ್ರಾಂಶುಪಾಲರಾದ ಎನ್. ಕಲ್ಲಪ್ಪ ಇವರು ಅಧ್ಯಕ್ಷತೆಯನ್ನು ವಹಿಸಿಕೊಂಡು ಕಾರ್ಯಕ್ರಮದಲ್ಲಿ ಸಸಿಗೆ ನೀರೆರುವುದರ ಮೂಲಕ ಉದ್ಘಾಟನೆ ಮಾಡಿದರು. ಹಾಗೆ ಅವರು ಹಾಸ್ಟೇಲ್ ವಿದ್ಯಾರ್ಥಿಗಳ ಕುರಿತು ಹಳ್ಳಿ ಹಳ್ಳಿಗಳಿಂದ ಬಂದಿರುವಂತಹ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿರುವಂತಹ ಕಷ್ಟ ಮತ್ತು ಇನ್ನಿತರ ಸಾಕಷ್ಟು ಸಮಸ್ಯೆಗಳು ಇರಬಹುದು ಯಾಕೆಂದ್ರೆ ಎಸ್ ಸಿ ಮತ್ತು ಎಸ್ ಟಿ ಸಮುದಾಯದ ನಮ್ಮ ವಿದ್ಯಾರ್ಥಿಗಳು ತಾಲೂಕಿನಲ್ಲಿ ಹೆಚ್ಚಾಗಿ ಆರ್ಥಿಕವಾಗಿ ಬಲವೊಂದದೆ ಇರುವವರು ಇರುವುದರಿಂದ ವಿದ್ಯಾರ್ಥಿಗಳು ಹಾಸ್ಟೇಲ್ ಬಗ್ಗೆ ಕುರಿತು ತಿಳಿಸುತ್ತಾ ಹಾಸ್ಟೇಲ್ ನಲ್ಲಿ ಓದುವಂತಹ ಎಲ್ಲಾ ವಿದ್ಯಾರ್ಥಿಗಳು ತಮ್ಮ ತಮ್ಮ ತಂದೆ ತಾಯಿಯವರ ನಿಮ್ಮ ನಿಮ್ಮ ವ್ಯಾಸಂಗದ ಉತ್ತಮ ಭವಿಷ್ಯದ ಬಹುದೊಡ್ಡ ಆಸೆಗಳನ್ನು ಹೊಂದಿರುತ್ತಾರೆ.

ಆದ್ದರಿಂದ ತಾವೆಲ್ಲಾ ಹಾಸ್ಟೆಲ್ಲಿನಲ್ಲಿರುವಂತಹ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳಿ ಎಂದು ತಿಳಿಸಿದರು. ಹಾಗೆ ಟಿ. ದೇವಪ್ಪ ಹಿರೇಮಠ ವಿದ್ಯಾಪೀಠ ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳ ಕುರಿತು ಎಲ್ಲಾ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವುದರೊಂದಿಗೆ ಜೊತೆಗೆ ನಿಮ್ಮ ನಿಮ್ಮ ಜೀವನದ ಗುರಿಗಳನ್ನು ನೀವು ಮುಟ್ಟುವಂತೆ ನಿರ್ಧಾರವನ್ನು ತೆಗೆದುಕೊಂಡು ನಿಶ್ಚಿಂತೆಯಿಂದ ಶ್ರದ್ಧೆಯಿಂದ ವಿದ್ಯಾಭ್ಯಾಸದ ಕಡೆಗೆ ಹೆಚ್ಚಾಗಿ ಗಮನಹರಿಸಿ ನಿಮ್ಮ ಉತ್ತಮ ಜೀವನವನ್ನು ರೂಪಿಸಿಕೊಳ್ಳಿ ಎಂದು ಕರೆ ನೀಡಿದರು. ಹಾಗೆ ಇನ್ನೋರ್ವ ಉಪನ್ಯಾಸಕರಾದ ವಿವೇಕಾನಂದ ಇವರು ವಿದ್ಯಾರ್ಥಿಗಳ ಕುರಿತು ಉಪನ್ಯಾಸ ನೀಡಿದರು ಹಾಗೆ ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮೆಟ್ರಿಕ್ ನಂತರದ ನಿಲಯ ಪಾಲಕರಾದ ಎ.ಮಹಮ್ಮದ್ ಸೈಯದ್ ಇವರು ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಕೊಡುವುದರೊಂದಿಗೆ ಸಮಾಜದಲ್ಲಿ ಉನ್ನತ ಅಧಿಕಾರಿಗಳಾಗಿ ಬೆಳೆಯಿರಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಹಾಗೆ ಈ ಸಂದರ್ಭದಲ್ಲಿ ಹಾಸ್ಟೇಲ್ ನ ಎಲ್ಲಾ ವಿದ್ಯಾರ್ಥಿಗಳು ತಮ್ಮ ತಮ್ಮ ಹಾಸ್ಟೇಲ್ ಜೀವನದ ಅನಿಸಿಕೆಗಳನ್ನು ತಿಳಿಸಿದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ