ಕೂಡ್ಲಿಗಿ, ವಿದ್ಯಾರ್ಥಿಗಳ ಶಿಕ್ಷಣದ ಭವಿಷ್ಯದೊಂದಿಗೆ ಕೆಲ ಡೋಂಗಿ ಶಿಕ್ಷಕರ ಚೆಲ್ಲಾಟ, ಕ್ರಮ ತೆಗೆದುಕೊಳ್ಳದ ಇ.ಓ ಗೆ ಧಿಕ್ಕಾರ – ಎಸ್.ಡಿ.ಎಂ.ಸಿ

ಕೂಡ್ಲಿಗಿ ಜೂನ್.19

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣಕ್ಕೆ ಸೇರಿದಂತೆ, ತಾಲೂಕಿನಾಧ್ಯಾಂತ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿವೆ. ಅದಕ್ಕೆ ಮೂಲ ಕಾರಣ ಡೋಂಗಿ ಶಿಕ್ಷಕರು, ಹಾಗೂ ಅವರಿಗೆ ಕುಮ್ಮಕ್ಕು ನೀಡುತ್ತಿರುವ ವಿರುದ್ಧ ಕ್ರಮ ಕೈಗೊಳ್ಳದ ಶಿಕ್ಷಣಾಧಿಕಾರಿಗಳೇ ನೇರ ಹೊಣೆ ಎಂದು SDMC ಪದಾಧಿಕಾರಿಗಳು ಆಕ್ರೊಶ ವ್ಯಕ್ತಪಡಿಸಿದ್ದಾರೆ. ಅವರು ಜೂನ್ 18 ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ SDMC ಯ ಹತ್ತಾರು ಮುಖಂಡರುಗಳು ಹಾಗೂ ಕಟ್ಟಡ ಕಾರ್ಮಿಕ ಮುಖಂಡರು ಪತ್ರಕರ್ತರೊಂದಿಗೆ ಮಾತನಾಡಿದರು. ವಿದ್ಯಾರ್ಥಿಗಳು ಕಲಿಯುವಂತ ಭವಿಷ್ಯದ ಜೀವನದೊಂದಿಗೆ ಚೆಲ್ಲಾಟವಾಡುವ ಡೋಂಗೀ ಶಿಕ್ಷಕರಿಗೆ, ಹಾಗೂ ಅವರಿಗೆ ಕುಮ್ಮಕ್ಕು ನೀಡುವ ಶಿಕ್ಷಣಾಧಿಕಾರಿಗೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

SDMC ರಾಜ್ಯ ಮುಖಂಡ ಗುನ್ನಳ್ಳಿ ರಾಘವೇಂದ್ರ ನೇತೃತ್ವದಲ್ಲಿ, ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ಬಹುತೇಕ ಸರ್ಕಾರಿ ಶಾಲೆಗಳಲ್ಲಿ. ಶಿಕ್ಷಕರು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ, ಹಾಗೂ ಗುಣ ಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಸಂಪೂರ್ಣ ವಿಫಲವಾಗಿದ್ದಾರೆ. ಹಾಗೂ ಸರ್ಕಾರಿ ಶಾಲೆಗಳಲ್ಲಿ ಅನೇಕ ಸಮಸ್ಯೆಗಳ ಸೇರಿದಂತೆ ವಿವಿಧ ಗಂಭೀರ ಆರೋಪಗಳಿದ್ದು, ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ. ತಪ್ಪಿತಸ್ಥರ ವಿರುದ್ಧ ಕಾನೂನು ರೀತ್ಯಾ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿ, ತಾಲೂಕು SDMC ಪದಾಧಿಕಾರಿಗಳು. ತಮ್ಮ ಹಕ್ಕೊತ್ತಾಯ ಪತ್ರವನ್ನು, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮ ನಾಭ ಕರ್ಣಂ ರವರಿಗೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮುಖಂಡರಾದ ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಬಿ.ಟಿ ಗುದ್ದಿ ಚoದ್ರು SDMC ತಾಲೂಕು ಅಧ್ಯಕ್ಷರು ಕೂಡ್ಲಿಗಿ ಟಿ.ಭಾಗ್ಯಮ್ಮ ಸೇರಿದಂತೆ. ವಿವಿಧ ಮುಖಂಡರು ಮಾತನಾಡಿದರು. ಬೊಮ್ಮಘಟ್ಟ ಪಂಪಾಪತಿ, ಕೊಟ್ರೇಶ್ ಹಾರಕ ಬಾವಿ,ಕಾರ್ಮಿಕ ಮುಖಂಡರು ಕರಿಯಪ್ಪ, ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ. ಬಿ. ಸಾಲುಮನೆ. ಕೂಡ್ಲಿಗಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button