ಜಗತ್ತು ಬದಲಾದಂತೆ ವಿದ್ಯಾರ್ಥಿಗಳು ಬದಲಾಗುವುದು ಅವಶ್ಯ-ಶಶಿಕಲಾ ಮಠ.
ಹುನಗುಂದ ಸಪ್ಟೆಂಬರ್.3

ವಿದ್ಯಾರ್ಥಿಗಳು ಬದಲಾಗುತ್ತಿರುವ ಪ್ರಪಂಚಕ್ಕೆ ಹೊಂದಿಕೊಳ್ಳುವುದು ಅವಶ್ಯವಾಗಿದೆ ಮಹಾವಿದ್ಯಾಲಯದ ಪ್ರಾಚಾರ್ಯ ಶಶಿಕಲಾ ಮಠ ಅವರು ಹೇಳಿದರು. ಪಟ್ಟಣದ ವ್ಹಿ.ಎಂ.ಕೆ.ಎಸ್.ಆರ್.ವಸ್ತೃದ ಕಲಾ,ವಿಜ್ಞಾನ ಹಾಗೂ ವ್ಹಿ.ಎಸ್.ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗ್ರಂಥಾಲಯದ ಸಹಯೋಗದಲ್ಲಿ ಆಯೋಜಿಸಿದ ನ್ಯಾಷನಲ್ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ವಿಷಯದ ಕುರಿತು ಏರ್ಪಡಿಸಿದ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಅವರು ಇಂದು ಜಗತ್ತು ಅಂಗೈ ಮೇಲಿದೆ.ವಿದ್ಯಾರ್ಥಿಗಳು ಆಧುನಿಕ ಜಗತ್ತಿನ ತಂತ್ರಜ್ಞಾನದೊಂದಿಗೆ ಹೊಂದಿಕೊಂಡು ಜೀವನವನ್ನು ರೂಪಿಸಿಕೊಳ್ಳಲು ಸಾಕಷ್ಟು ಅವಕಾಶಗಳಿವೆ.ತಂತ್ರಜ್ಞಾನ ಗೊತ್ತಿರದವರು ಇಂದಿನ ಯುಗದಲ್ಲಿ ನಿಜವಾದ ಅನಕ್ಷರಸ್ಥರಂತಾಗುತ್ತಾರೆ ಕಾರಣ ಅದರ ಅರಿವು ಪ್ರತಿಯೊಬ್ಬರಿಗೂ ಬೇಕು ಎಂದರು. ಗ್ರಂಥಪಾಲಕ ಎಂ.ಎಸ್.ದರಗಾದ ಮಾತನಾಡಿ ಪರಿವರ್ತನೆಯೇ ಜಗದ ನಿಯಮ ಎನ್ನುವ ಹಾಗೆ ಇಂದು ತಂತ್ರಜ್ಞಾನದ ಮೂಲಕ ರಾಷ್ಟ್ರೀಯ ಈ-ಗ್ರಂಥಾಲಯದ ಮಹತ್ವ ವಿದ್ಯಾರ್ಥಿಗಳು ತಿಳಿಯುವುದು ಅವಶ್ಯವಿದೆ.ಈ-ಗ್ರಂಥಾಲಯದ ಉಪಯೋಗಿಸುವ ವಿಧಾನಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.ವೇದಿಕೆಯಲ್ಲಿ ಐಕ್ಯೂಎಸಿ ಸಂಚಾಲಕ ಡಾ.ಎಸ್.ಆರ್.ಗೋಲಗೊಂಡ, ಡಾ.ಎಸ್.ಆರ್.ನಾಗಣ್ಣವರ ಉಪಸ್ಥಿತರಿದ್ದರು.ಕು.ಮಧು ಆಂದೇಲಿ ವಚನ ಪ್ರಾರ್ಥಿಸಿದರು, ಡಾ.ಪರಶುರಾಮ ಹಾದಿಮನಿ ನಿರೂಪಿಸಿ,ಕಾಲೇಜು ಒಕ್ಕೂಟದ ಕಾರ್ಯಾಧ್ಯಕ್ಷಪ್ರೊ.ಬಿ.ಎ.ಕಂಠಿ ವಂದಿಸಿದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ