ಭೂಮಿಗಾಗಿ ಹೋರಾಟ ಕಾಲ್ನಡಿಗೆ ಜಾಥಾ – ಕೊಡಗು.
ಹೈಸೋಡ್ಲುರು ಡಿ.09

ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಹಾತ್ಮ ಪ್ರೊಫೆಸರ್ ಬಿ,ಕೃಷ್ಣಪ್ಪ ಸ್ಥಾಪಿತ ರಿ, ನಂಬರ್, 386 /2020-21. ಸಂಘಟನೆಯ ರಾಜ್ಯ ಸಂಚಾಲಕರಾದ ಡಿ ಆರ್ ಪಾಂಡುರಂಗ ಸ್ವಾಮಿ ಅವರ ನೇತೃತ್ವದಲ್ಲಿ ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್, ಕೋಡಿಗಲ್ ರಮೇಶ್, ಗೋಣಿಕೊಪ್ಪ ಗೋವಿಂದಪ್ಪ, ರಾಜ್ಯ ಮಹಿಳಾ ಸಂಘಟನಾ ಸಂಚಾಲಕರಾದ ಎಂ ವಿ ಭವಾನಿ, ರವರ ನೇತೃತ್ವದಲ್ಲಿ, ಅಕ್ರಮವಾಗಿ ಸರ್ಕಾರಿ ಪೈಸಾರಿ ಜಾಗದಲ್ಲಿ ಕೃಷಿ ಮಾಡಿ ಕೊಂಡಿರುವವರಿಗೆ 30 ವರ್ಷಕ್ಕೆ ನೀಡಿರುವ ಸರ್ಕಾರದ ತೀರ್ಮಾನ ರದ್ದು ಪಡಿಸಬೇಕು. ಮೇಲ್ವರ್ಗದವರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವುದನ್ನು ತಡೆಯಬೇಕು. ಕೊಡಗಿನ ನಿವೇಶನ ರೈತರಿಗೆ ನಿವೇಶನ ನೀಡಬೇಕು ಹಕ್ಕು ಪತ್ರ ವಿತರಿಸಬೇಕು ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ದಲಿತರ ಮೇಲಿನ ದೌರ್ಜನ್ಯ ನಿಲ್ಲಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ, ಹೈಸೋಡ್ಲುರಿನಿಂದ ಹೊನ್ನಂಪೇಟೆ ತಾಲೂಕು ತಹಶೀಲ್ದಾರ್ ಕಚೇರಿವರೆಗೆ 15 km ಕಾಲ್ನಡಿಗೆ ಜಾಥಾ. ಹೋರಾಟವನ್ನು ಮಾಡುತ್ತಾ ಸಾವಿರಾರು ಜನ ದಲಿತರು ಪ್ರತಿಭಟನೆ ಮಾಡಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು