ದ.ವಿ.ಪ ತಾಲೂಕ ಹೋರಾಟಗಾರರ ಮನವಿಗೆ ಸ್ಪಂದಿಸಿ – ಕೆ.ಎಸ್.ಆರ್.ಟಿ.ಸಿ ನಿಗಮ ಘಟಕದ ವ್ಯವಸ್ಥಾಪಕ ಅಶೋಕ್ ಕುಮಾರ್ ರವರು ಪುರಸ್ಕರಿಸಿ ಬಸ್ಸ್ ಪ್ರಾರಂಭಕ್ಕೆ ಚಾಲನೆ ನೀಡಿದರು.
ಕಲಕೇರಿ ಫೆ.08

ತಾಳಿಕೋಟೆ ತಾಲೂಕಿನ ವನಕಿಹಾಳ ಮತ್ತು ಬೂದಿಹಾಳ ಗ್ರಾಮಗಳ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡಲಾಯಿತು ಕಲಕೇರಿ ಗ್ರಾಮದ ಬಸ್ಟ್ಯಾಂಡ್ ನಲ್ಲಿ ಪೂಜೆ ಸಲ್ಲಿಸಿ ಬಸ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ ತಾಲೂಕ ಅಧ್ಯಕ್ಷರು ಕಾಶಿನಾಥ್ ತಾಳಿಕೋಟೆ ಕಲಕೇರಿಯ ಸಾರಿಗೆ ನಿಯಂತ್ರಕರು ಜೆ.ಎಚ್ ಭಗವಾನ್. ಬಾಬು ವಡ್ಡರ್ ಕಲಕೇರಿ. ಕಲಕೇರಿ ವಲಯ ಅಧ್ಯಕ್ಷರು ಅರುಣ್ ಪೂಜಾರಿ. ವಿಶಾಲ್. ಯಮನೂರಪ್ಪ. ಮಹಾಂತೇಶ್. ಅನಿಲ್. ಹಾಗೂ ವಿದ್ಯಾರ್ಥಿಗಳು ಊರಿನ ಹಿರಿಯರು ಉಪಸಿದ್ಧರಿದ್ದರು. ತಾಲೂಕ ಅಧ್ಯಕ್ಷ ಕಾಶಿನಾಥ್ ತಾಳಿಕೋಟಿ ಬಹು ದಿನಗಳ ಬೇಡಿಕೆ ಇಂದು ಈಡೇರಿದ್ದು, ನಮಗೆಲ್ಲರಿಗೂ ಸಂತೋಷದ ಕ್ಷಣ ತಾಳಿಕೋಟೆಯ ಘಟಕ ವ್ಯವಸ್ಥಾಪಕರು ಮನವಿಗೆ ಸ್ಪಂದಿಸಿ 3 ದಿನಗಳಲ್ಲೇ ಬಸ್ ವ್ಯವಸ್ಥೆ ಮಾಡಿ ಕೊಟ್ಟಿದ್ದಕ್ಕೆ ಎಲ್ಲರ ಪರವಾಗಿ ಧನ್ಯವಾದಗಳು ಅಂತೆಯೇ ಕಲಕೇರಿ ಬಸ್ಸ್ಟ್ಯಾಂಡ್ ವಿಚಾರವಾಗಿ ಆದಷ್ಟು ಬೇಗ ಕಾಮಗಾರಿ ಪ್ರಾರಂಭ ಮಾಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಬಸ್ ಸ್ಟ್ಯಾಂಡ್ ನಲ್ಲಿ CCTV ವ್ಯವಸ್ಥೆ, ಮಹಿಳೆಯರಿಗೆ ವಿಶ್ರಾಂತಿ ಕೋಣೆ, ಕುಡಿಯುವ ನೀರಿನ ಘಟಕ ಈ ಎಲ್ಲಾ ಬೇಡಿಕೆಗಳು ಆದಷ್ಟು ಬೇಗ ಈಡೇರಿಸುತ್ತಾರೆ ಎಂಬುದು ನಮ್ಮೆಲ್ಲರಿಗೆ ಭರವಸೆ ಇದೆ, ಬಸ್ ಚಾಲಕರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆದು ಕೊಂಡು ಹೋಗಬೇಕು ಹಾಗೇ ವಿದ್ಯಾರ್ಥಿಗಳು ಯಾವುದೇ ಕೀಟಲೆ ಸ್ವಭಾವದಿಂದ ವರ್ತಿಸ ಬಾರದು ಎಂದು ಹೇಳಿದರು. ಮತ್ತು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್, ಹಾಗೂ ಎ.ಸಿ.ಬಿ ನ್ಯೂಸ್ ಚಾನೆಲ್ ವರದಿಗಾರರಿಗೆ ಈ ಸಂದರ್ಭದಲ್ಲಿ ಸುದ್ದಿಯನ್ನು ನೋಡಿ ನಿಮ್ಮ ಮಾತಿಗೆ ಬೆಲೆ ಕೊಟ್ಟು ಬಸ್ಸು ಪ್ರಾರಂಭಿಸಿದ್ದಾರೆ. ಇವತ್ತು ಪತ್ರಿಕೆಯವರಿಗೆ ಮತ್ತು ಚಾನೆಲ್ ವರದಿಗಾರರು ಮೈಬೂಬಬಾಷ ಮನಗೂಳಿ ಇವರಿಗೆ ಎಲ್ಲಾ ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ