ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಕ್ಕೆ ಹಲವಾರು ಯೋಜನೆಗಳು ಸುರಿಮಳೆ ಹರಿಸಿದಂತ ಶಾಸಕರು.
ರಾಂಪುರ ಜೂನ್.24

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ಸ್ಥಳೀಯ ರಾಂಪುರದ ಎಲ್ಲಮ್ಮನ ಎಸ್ಟೇಟ್ ನಲ್ಲಿ ಸಾರ್ವಜನಿಕರ ಅಹವಾಲಗಳನ್ನು ಆಲಿಸಿ ಅರ್ಜಿಯ ಮುಖಾಂತರ ಕ್ಷೇತ್ರದ ಗ್ರಾಮಗಳಿಂದ ಬಂದಿರ್ತಕ್ಕಂತ ಸಾರ್ವಜನಿಕರ ಅರ್ಜಿಗಳನ್ನು ತೆಗೆದು ಕೊಂಡು ಗ್ರಾಮದ ಜನ ಸಾಮಾನ್ಯರಿಗೆ ಅನುಕೂಲವಾಗುವ ಯೋಜನೆಗಳನ್ನು ತಿಳಿದು ಸರ್ಕಾರ ದಿಂದ ಅನುದಾನ ಬಿಡುಗಡೆ ಮಾಡಿಸಿ ಯೋಜನೆಗಳು ರೂಪಿಸಿ ಕೊಡಲು ಮುಂದಾದ ಶಾಸಕರು ಈಗ ಹಲವಾರು ಯೋಜನೆಗಳು ಕ್ಷೇತ್ರದಾದ್ಯಂತ ಕೆರೆ ಕಟ್ಟೆಗಳಾಗಿರಬಹುದು ತಳಕು ಹೋಬಳಿಯ ಐದಾರು ಕೆರೆಗಳಿಗೆ ಭದ್ರಾ ನೀರನ್ನು ಚಾನಲ್ ಮುಖಾಂತರ ನೀರು ಹರಿಯುವಂತೆ ಯೋಜನೆ ರೂಪಿಸಿದ್ದಾರೆ ಮತ್ತು ಗ್ರಾಮಗಳಲ್ಲಿ ಮನೆ ಇಲ್ಲದಂತವರಿಗೆ ಮನೆಗಳು ಸಹ ಮಂಜೂರು ಮಾಡಿಸಿದ್ದಾರೆ. ಕುಡಿಯುವ ನೀರಿನ ಸೌಲಭ್ಯ ಆಗಿರಬಹುದು ಗ್ರಾಮಗಳಲ್ಲಿ ಚರಂಡಿಯ ಸ್ವಚ್ಛತೆ ಬಗ್ಗೆ ಗ್ರಾಮಗಳಲ್ಲಿ ರೋಗರುಜಿನ ಅಂಟಬಾರದು ಎಂದು ಗಮನಹರಿಸಿ ಚರಂಡಿಗಳು ಕ್ಲೀನ್ ಮಾಡಿಸಿ ವಿದ್ಯುತ್ ದೀಪಗಳು ಹಾಕಿಸಿದ್ದಾರೆ. ಹಲವಾರು ಯೋಜನೆ ರೂಪಿಸಿ ಜನ ಸಾಮಾನ್ಯರಿಗೆ ಅನುಕೂಲ ಮಾಡಿ ಕೊಟ್ಟಿದ್ದಾರೆ ಓಡಾಡುವಂತ ರಸ್ತೆಗಳು ಸಿಸಿ ರಸ್ತೆಗಳು ಆಗಿರಬಹುದು ರೈತರಿಗೆ ಇನ್ಸೂರೆನ್ಸ್ ಬೆಳೆ ಪರಿಹಾರಗಳು ಮತ್ತು ಈಗ ಮುಂಗಾರು ಹಂಗಾಮಿನಲ್ಲಿ ಬೀಜ ಗೊಬ್ಬರ ಭೂಮಿ ಉಳುಮೆ ಮಾಡಲು ಕೃಷಿ ಯಂತ್ರೋಪ ಉಪಕರಣಗಳು ಇಲಾಖೆಯಿಂದ ಸಣ್ಣ ಟ್ಯಾಕ್ಟರ್ ವಾಹನಗಳನ್ನು ಮಂಜೂರು ಮಾಡಿಸಿದ್ದಾರೆ ಅಂಗವಿಕಲರಿಗೆ ಥ್ರೀ ವೀಲರ್ 85 ಸ್ಕೂಟರ್ಗಳು ಸಹ ರೂಪಿಸಿದ್ದಾರೆ.

ಮೊಳಕಾಲ್ಮೂರು ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆ ಮೊಳಕಾಲ್ಮೂರು ಪಟ್ಟಣದ ಅಕ್ಕ ಪಕ್ಕ ಇರುವ ರಸ್ತೆ ಹಾನಗಲ್ ಕಡೆಗೆ ಹೋಗುವ ರಸ್ತೆ ಡಬಲ್ ವಾಹನಗಳು ಓಡಾಡಿದರು ಕೂಡ ಅನುಕೂಲ ವಾಗುವಂತೆ ಲೆಫ್ಟ್ ರೈಟ್ ರಸ್ತೆಗಳನ್ನು ಮಾಡಿಸಿದ ಶಾಸಕರು ಮತ್ತು ಮೊಳಕಾಲ್ಮುರು ಪಟ್ಟಣದಲ್ಲಿ ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್ ಹೊಸ ಸಂತೆ ಮಾರ್ಕೆಟ್ ಮತ್ತು ಕೋನಸಾಗರದ ಗ್ರಾಮದ ಹತ್ತಿರ ಆರೂವರೆ ಕೋಟಿ ಮೊರಾರ್ಜಿ ವಸತಿ ಶಾಲೆಯನ್ನು ರೂಪಿಸಿರುತ್ತಾರೆ. ಮತ್ತು ರಾಯಪುರ ಗ್ರಾಮದ ಹತ್ತಿರ ಅಲೆಮಾರಿ ಜನಾಂಗದವರಿಗೆ ಜಾಗ ಮತ್ತು ಸೂರು ಒದಗಿಸುವಂತೆ ಸರ್ಕಾರ ದಿಂದ ಯೋಜನೆ ರೂಪಿಸಿದ್ದಾರೆ ರಾಂಪುರ ತಳಕು ಹೋಬಳಿಯ ಕಂದಾಯ ಇಲಾಖೆ ನಾಡ ಕಚೇರಿ ಆಫೀಸ್ ಗಳನ್ನು ಸಹ ಮಂಜೂರು ಮಾಡಿಸಿದ್ದಾರೆ. ಮತ್ತು ಶಿಕ್ಷಣಕ್ಕೆ ಶಾಲೆ ಬಿಲ್ಡಿಂಗ್ ಗಳು ಅಡಿಗೆ ಕೋಣೆ ಕಾಂಪೌಂಡ್ ಶೌಚಾಲಯಗಳು ರೂಪಿಸಿದ್ದಾರೆ ಶಾಸಕರು ಇನ್ನೂ ಹಲವಾರು ಯೋಜನೆಗಳು ರೂಪಿಸಿ ಮೊಳಕಾಲ್ಮೂರು ಕ್ಷೇತ್ರಕ್ಕೆ ಕೀರ್ತಿ ತಂದಿದ್ದಾರೆ ಅಭಿವೃದ್ಧಿ ಹರಿಕಾರರು ಎನ್ ವೈ ಗೋಪಾಲಕೃಷ್ಣ ಶಾಸಕರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ. ಹೊಂಬಾಳೆ ಮೊಳಕಾಲ್ಮುರು.