ನಿವೃತ್ತ ಶಿಕ್ಷಕ ಸೋಮಶೇಖರಪ್ಪ ಅವರಿಗೆ ಬೀಳ್ಕೊಡುಗೆ.

ಸಿದ್ದಾಪುರ ಜೂನ್.30

ಕೂಡ್ಲಿಗಿ ತಾಲೂಕಿನ ಗುಂಡುಮುಣುಗು ಗ್ರಾ.ಪಂ ವ್ಯಾಪ್ತಿಯ ಸಿದ್ದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸೋಮಶೇಖರಪ್ಪ ಅವರಿಗೆ ಶಾಲೆಯ ಸಿಬ್ಬಂದಿ, ಹಳೆ ವಿದ್ಯಾರ್ಥಿಗಳು ಶನಿವಾರ ಆತ್ಮೀಯ ಬೀಳ್ಕೊಡುಗೆ ನೀಡಿದರು. ಈ ವೇಳೆ ಕಾನಾಮಡುಗು ದಾಸೋಹ ಮಠದ ಧರ್ಮಾಧಿಕಾರಿ ದಾ.ಮ ಐಮಡಿ ಶರಣಾರ್ಯರು ದಿವ್ಯ ಸಾನಿಧ್ಯ ವಹಿಸಿಕೊಂಡರು. ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ವಾಗೇಶ್ ಅಧ್ಯಕ್ಷತೆಯಲ್ಲಿ ಜರಗಿತು.ನಿವೃತ್ತ ಶಿಕ್ಷಕ ಸೋಮಶೇಖರಪ್ಪ ಅವರು ಮೂಲತಃ ಕೂಡ್ಲಿಗಿ ತಾಲೂಕಿನ ಕಾನಮಡಗು ಗ್ರಾಮದವರು. ಶಿಕ್ಷಕರಾಗಿ 1996 ರಲ್ಲಿ ನೇಮಕ ಗೊಂಡು ಇಮಡಪುರ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿ ಹತ್ತು ವರ್ಷಗಳ ಸೇವೆ ಸಲ್ಲಿಸಿ ನಂತರ ಸಿದ್ದಾಪುರ ಸರ್ಕಾರಿ ಪ್ರಾಥಮಿಕ ಶಾಲೆಗೆ ವರ್ಗಾವಣೆಯಾಗಿ ಅಲ್ಲಿಯೇ 16 ವರ್ಷ ಸೇವೆ ಸಲ್ಲಿಸಿ ಇಂದಿಗೆ 28 ವರ್ಷಗಳ ನಿರಂತರ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕ ಸೋಮಶೇಖರಪ್ಪ ಅವರನ್ನು ಹಳೆ ವಿದ್ಯಾರ್ಥಿಗಳು ಶಾಲೆಯ ಸಿಬ್ಬಂದಿಗಳು, ಮುಖಂಡರು ಸನ್ಮಾನಿಸಿ ಬೀಳ್ಕೊಟ್ಟರು. ಈ ವೇಳೆ ವೀರೇಂದ್ರ ನಾಯ್ಕ್ ಶಿಕ್ಷಕರು ಮಾತನಾಡಿ ಮಕ್ಕಳ ಭವಿಷ್ಯ ರೂಪಿಸಿದ ಅವರ ವಿಶ್ರಾಂತ ಜೀವನ ಸುಖಮಯವಾಗಿರಲಿ, ಅತ್ಯಂತ ಶಿಸ್ತಿನ ಶಿಕ್ಷಕರಾದ ಸೋಮಶೇಖರಪ್ಪ ಎಂದರೆ ಮಕ್ಕಳಿಗೆ ಅಚ್ಚುಮೆಚ್ಚು, ಅಲ್ಲದೆ ಸುತ್ತಮುತ್ತಲ ಹಳ್ಳಿಗಳಲ್ಲು ಅತ್ಯಂತ ಪ್ರೀತಿಯ ಪಾತ್ರ ಶಿಕ್ಷಕರಾಗಿದ್ದರು. ಶಾಲೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟು ಮಕ್ಕಳ ಭವಿಷ್ಯವನ್ನು ಕಂಡವರು. ಇಂತಹ ಶಿಕ್ಷಕರು ಸಿಗುವುದು ತುಂಬಾ ಅಪರೂಪ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಡಿಡಿಪಿಐ ಯುವರಾಜ್ ನಾಯ್ಕ್ ವಿಜಯನಗರ, ಗ್ರಾಮ ಪಂಚಾಯಿತಿ ಸದಸ್ಯರಾದ ಜೀವ ಪ್ರಕಾಶ್, ನಾಗರಾಜ್, ಗಂಗಮ್ಮ, ಎಸ್ಡಿಎಂಸಿ ಉಪಾಧ್ಯಕ್ಷೆ ಮಮತಾ, ಮಾಜಿ ತಾ.ಪಂ ಸದಸ್ಯ ವೆಂಕಟೇಶ್, ನಿವೃತ್ತಿ ಬಿ.ಆರ್.ಸಿ ಶರಣಪ್ಪ ಕಾನಮಡಗು, ಸಿಆರ್.ಪಿ ಸಿದ್ದೇಶ್, ನಿವೃತ್ತ ಶಿಕ್ಷಕ ಎಂ ಶರಣಪ್ಪ, ಬಿ.ಸಿ ಪಾಟೀಲ್ ನೌಕರರ ಸಂಘದ ಸದಸ್ಯ, ಜಿ.ಬಿ ಜಗದೀಶ್, ಶಿವಲಿಂಗಪ್ಪ ನಿವೃತ್ತಿ ವೈದ್ಯಾಧಿಕಾರಿ, ಶಶಿಕಲಾ ಸೋಮಶೇಖರಪ್ಪ, ರಾಮ್ ಸ್ವಾಮಿ ವೆಂಕಟೇಶ್ ಅಣಬೂರು ಗ್ರಾ.ಪಂ ಸದಸ್ಯರು, ಇಮಾಮ್ ಹುಸೇನ್ ಜಗಳೂರು, ಈಶ್ವರಪ್ಪ ನಿವೃತ್ತ ಶಿಕ್ಷಕರು, ಶಾಲೆಯ ಮುಖ್ಯ ಗುರುಗಳು ಬಸವರಾಜ್, ಶಿಕ್ಷಕರಾದ ಮಂಜುಳಾ, ಮಹಮ್ಮದ್ ರಫಿ, ಮಂಜುನಾಥ್, ತಿಪ್ಪೇಸ್ವಾಮಿ, ಈಶಣ್ಣ, ಶೃತಿ, ಜಲೇಂದ್ರ, ರಾಜಣ್ಣ, ಮಂಜುನಾಥ್ ಹಾಗೂ ಆಲೂರು ಗ್ರಾ.ಪಂ ಸದಸ್ಯ ಅಂಜಿನಪ್ಪ, ಬೋರಣ್ಣ ಗ್ರಾ.ಪಂ ಸದಸ್ಯ ಪೂಜಾರಹಳ್ಳಿ, ಪಿ ತಿಪ್ಪೇಸ್ವಾಮಿ, ಶರಣಪ್ಪ ವಿಕ್ಟೋರಿ ಆಸ್ಪತ್ರೆ, ಸೇರಿದಂತೆ ಶಾಲೆಯ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು, ಮುಖಂಡರು, ವಿದ್ಯಾರ್ಥಿಗಳು ಉಪಸಿತರಿದ್ದರು.

ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್ ಖಾನಾ ಹೊಸಹಳ್ಳಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button