“ವೈದ್ಯೋ ನಾರಾಯಣೋ ಹರಿ”…..

ನಮಿಸೋಣ ಎಲ್ಲರೂ ನಮಿಸೋಣ ವೈದ್ಯ ಮಹಾಶಯರಿಗೆ ನಮಿಸೋಣಮನುಕುಲದ ಪ್ರತ್ಯಕ್ಷ ದೈವರಿಗೆ,ಕಲಿಯುಗದ ಧನ್ವoತರಿಗೆ,ಜೀವಿಗಳಪಾಲಿನ ಜೀವ ಸಂಜೀವಿನಿಗೆ ಒಮ್ಮನದಿಂದ ನಮಿಸೋಣ ||1||
ತನ್ನ ಕುಟುಂಬವ ಮರೆತು ರೋಗದಿಂದ ಬಳಲುವ ಜೀವಿಗಳ ಸೇವೆಗೈವ ಸೇವಾಕರ್ತನಿಗೆನೋವಿನಿಂದ ನರಳುವ ಜೀವಿಗಳಿಗೆತಾಳ್ಮೆಯಿಂದ ಶುಶ್ರುಷೆ ಮಾಡುವಶುಶ್ರುಕ್ಷಕನಿಗೆ ಒಮ್ಮನದಿಂದ ನಮಿಸೋಣ ||2||
ರೋಗಿಗಳ ಮುಗುಳ್ನಗೆಯಲ್ಲಿ ಸಂತೃಪ್ತಿ ಭಾವವ ಕಾಣುವ ನಿಸ್ವಾರ್ಥ ಮನಕ್ಕೆಕಾಯಿಲೆಯಿಂದ ನೊಂದು ಬೆಂದಜೀವಿಗಳಿಗೆ ಸಂಯಮದಿಂದ ಸಾಂತ್ವನ ಹೇಳುವ ಸಹನಾ ಮೂರ್ತಿಗೆಬಾಳ ಮುಸ್ಸಂಜೆಯಲ್ಲಿ ಪಯಣಿಸುವ ನೊಂದ ಮನಗಳಿಗೆ ಜೀವನೋತ್ಸಹ ತುಂಬುವ ಜೀವ ದಾತನಿಗೆ ಒಮ್ಮನದಿಂದ ನಮಿಸೋಣ ||3||
ನವಜಾತ ಶಿಶುಗಳ ಸಂರಕ್ಷಕನಿಗೆಮನುಜರ ದಬ್ಬಾಳಿಕೆಗೆ ಬೆಚ್ಚದೆ, ಬೆದರೆದೆ ನಿಷ್ಠೆಯಿಂದ ಸೇವೆಗೈವನಿಷ್ಠಾವಂತನಿಗೆಚಿತ್ತ ವಿಕಲ್ಪ ಹೊಂದಿದ ಮನೋ ರೋಗಿಗಳ ಬದುಕಿನ ಭರವಸೆಯ ಮೂರ್ತಿಗೆ ಒಮ್ಮನದಿಂದ ನಮಿಸೋಣ ||4||
ಹಗಲೆನ್ನದೇ, ಇರುಳೆನ್ನದೆ, ಸಮಯದ ಗಡುವಿಲ್ಲದೆ ಅವಿರತ ಸೇವೆಗೈವ ಕಾಯಕ ಯೋಗಿಗೆವೈದ್ಯನ್ನರಾಯಣೋ ಹರಿ ಎಂಬೀನುಡಿಗೆ ಭಾಜನರಾದ ಹೃದಯ ವೈಶಾಲ್ಯವುಳ್ಳ ಮಾನವೀಯತೆಯ ಮೂರ್ತಿಗೆ ಒಮ್ಮನದಿಂದ ನಮಿಸೋಣ ||5||
ಎಂ. ಎಸ್. ಆಶಾಲತಾ, ಶಾಖಾ ವ್ಯವಸ್ಥಾಪಕರು, ಎಂ. ಡಿ. ಸಿ. ಸಿ. ಬ್ಯಾಂಕ್, ಕೆ ಹೊನ್ನಲಗೆರೆ ಶಾಖೆ.
