ಶಿಕ್ಷಣ ಪ್ರೇಮಿ ಪಿ.ಕೆ.ಪಿ.ಎಸ್ ಬ್ಯಾಂಕ್ ಕಾರ್ಯ ನಿರ್ವಾಹಕ ಅಧಿಕಾರಿಗಳು ನಿಂಗರಾಜ್ ಗುಡಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದರು.
ಕುಳಲಿ ಜು.09

ಮುಧೋಳ ತಾಲೂಕಿನ ಕುಳಲಿ ಗ್ರಾಮದ ಅಂಬೇಡ್ಕರ್ ಶಿಕ್ಷಣ ಸಂಸ್ಥೆ ಕೆ.ಎಸ್ ಪೂರ್ವ ಪ್ರಾಥಮಿಕ ಭೀಮ್ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸಮವಸ್ತ್ರ ಡ್ರೆಸ್ ವಿತರಣಾ ಕಾರ್ಯಕ್ರಮವನ್ನು ಕುಳಲಿ ಗ್ರಾಮದ ಪಿಕೆಪಿಎಸ್ ಬ್ಯಾಂಕ್ ಕಾರ್ಯ ನಿರ್ವಾಹಕ ಅಧಿಕಾರಿಗಳು ನಿಂಗರಾಜ್ ಗುಡಿ ವಿತರಣೆ ಮಾಡಿದರು. ಸಂಸ್ಥೆಯ ಏಳಿಗೆಗೆ ಸದಾ ಬೆನ್ನೆಲುಬಾಗಿ ನಾನು ಇರುತ್ತೇನೆಂದು ಹೇಳಿದರು. ಜಾತ್ರೆ ನಾಟಕ ಕಾರ್ಯಕ್ರಮಗಳಿಗೆ ಹೊರತು ಪಡಿಸಿ ಶಿಕ್ಷಣಕ್ಕೆ ಒತ್ತು ಕೊಡುತ್ತೇನೆ ಶಿಕ್ಷಣಕ್ಕೆ ಸಹಾಯ ಸಹಕಾರ ನೀಡುತ್ತೇನೆಂದು ಹೇಳಿದರು.

ಸಂದರ್ಭದಲ್ಲಿ ಕಲ್ಲೋಳಿ ಮೈಗೂರ್ ಗ್ರಾಮ ಪಂಚಾಯತ್ ಸದಸ್ಯರು ಕುಳಲಿ ಮುತ್ತಪ್ಪ ವಜ್ರಮಟ್ಟಿ ಪ್ರಗತಿಪರ ರೈತರು ಕುಳಲಿ ಲಕ್ಷ್ಮಿ ಹಾರುಕೊಪ್ಪ ತಾಲೂಕ ಅಧ್ಯಕ್ಷರು ಜಾನಪದ ಸಂಘ ಹಾಗೂ ಅಂಬೇಡ್ಕರ್ ಸಂಸ್ಥೆಯ ಮಾರ್ಗದರ್ಶಕರು ರಾಜು ಬೆಂಡೆ ಪಾರ್ವತಿ ವಡಗೇರ್ ಸಂಸ್ಥೆಯ ಸದಸ್ಯರು ಸದಾಶಿವ ತಳಗೇರಿ ಅಧ್ಯಕ್ಷರು ಅಂಬೇಡ್ಕರ್ ಶಿಕ್ಷಣ ಸಂಸ್ಥೆ ಹಾಗೂ ಸಂಪಾದಕರು ದಲಿತ ವೇದಿಕೆ ಪತ್ರಿಕೆ ದಲಿತ ಮುಖಂಡರು ಸೈದು ಮುಗಳಖೋಡ ಚಿದಾನಂದ ಕೊಣ್ಣೂರ್ ಸುಭಾಷ್ ಗಸ್ತಿ ಸೆಟ್ಟೆಪ್ಪ ತಳಗೇರಿ ಶಾಲಾ ಮಕ್ಕಳು ಪಾಲಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್ ವಾಯ್ ಕಿಳ್ಳಿ.ಇಲಕಲ್ಲ.