ವೀರಶೈವ ಮಹಾ ಸಭಾ ಅಧ್ಯಕ್ಷರಾಗಿ ಜಿ. ಸುನಿಲ್ ಪಾಟೀಲ್ ಆಯ್ಕೆ.
ಕೂಡ್ಲಿಗಿ ಜು.09

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಜಿ. ಸುನಿಲ್ ಪಾಟೀಲ್ ಅವರು ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕಕ್ಕೆ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿ ಇವರೊಂದಿಗೆ 13 ಜನ ಪುರುಷರು ಹಾಗೂ ಏಳು ಮಂದಿ ಮಹಿಳೆಯರು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ವಿ. ಎಸ್. ಸಿದ್ದರಾಧ್ಯ ತಿಳಿಸಿದ್ದಾರೆ. ಅಧ್ಯಕ್ಷ ಸ್ಥಾನ ಸೇರಿದಂತೆ ಎಲ್ಲಾ ಕಾರ್ಯಕಾರಿ ಸದಸ್ಯರ ಸ್ಥಾನಗಳಿಗೆ ಒಬ್ಬರೇ ನಾಮಪತ್ರ ಸಲ್ಲಿಸಿದು ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಕಾರ್ಯಕಾರಿ ಸಮಿತಿಯ ಮಹಿಳಾ ಸದಸ್ಯ ರಾಗಿ ಕೆ. ಎಚ್. ಎಂ. ಶೈಲಜಾ, ಎ ಸುಮಂಗಲ, ಕೆಎಚ್ಎಂ ಅನ್ನಪೂರ್ಣ,ಮಂಜುಳಾ, ಟಿ ಬಿ ಅಂಬಿಕಾ, ಎಸ್ ವೀರಮ್ಮ, ಪ್ರತಿಭಾ, ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಎಂ ಮಂಜುನಾಥ, ಶೆಟ್ರು ಬಸವರಾಜ್, ಜೆ ಬಸವರಾಜ್, ಎಂ ಮರಳು ಸಿದ್ದಪ್ಪ,ಬಣಕಾರ ಮೂಗಪ್ಪ,ಜಿ ಸೋಮಶೇಖರ, ಪಿ ಜಯರಾಜ್, ಕೆಎಸ್ ವೀರೇಶ್, ಮಹೇಂದ್ರ ಕುಮಾರ್,ಜಿಎಸ್ ಗಿರೀಶ್, ಕೆಎಚ್ ವಿಶ್ವನಾಥ,ಟಿ ಹೆಚ್ ಎಂ ಶೇಖರಯ್ಯ, ಎನ್ ಜಿ ಚನ್ನಬಸವನಗೌಡ, ಆಯ್ಕೆಯಾಗಿದ್ದಾರೆ, ಕೂಡ್ಲಿಗಿ ತಾಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಿ.ಸುನಿಲ್ ಪಾಟೀಲ್ ರವರಿಗೆ ಹಾಗೂ ಪದಾಧಿಕಾರಿಗಳಿಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸಂಜೆ ಚುನಾವಣೆ ಅಧಿಕಾರಿ ಎಸ್. ವಿ.ಸಿದ್ದರಾಧ್ಯ ಪ್ರಮಾಣ ಪತ್ರ ವಿತರಿಸಿದರು. ನಿಕಟ ಪೂರ್ವ ಅಧ್ಯಕ್ಷರಾಗಿ ಟಿ.ಜಿ. ನಾಗರಾಜ್ ಗೌಡ ಜಿಲ್ಲಾ ನಿರ್ದೇಶಕರಾದ ಎಂ ಗುರುಸಿದ್ದನಗೌಡ್ರು, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ ಕೆ ನಾಗರಾಜ್ ನೌಕರರ ಸಂಘದ ತಾಲೂಕು ಅಧ್ಯಕ್ಷರು ಪಿ ಶಿವರಾಜ್, ಕೋಗಳಿ ಮಂಜುನಾಥ, ಸೇರಿದಂತೆ ಇತರರು ಇದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ.