ಮಕ್ಕಳ ಸಂತೆಯಿಂದ ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಮತ್ತು ವ್ಯಾಪಾರದ ಕೌಶಲ್ಯ ಬೆಳೆಸಲು ಸಾಧ್ಯ.
ಹುನಗುಂದ ನ.14

ಮಕ್ಕಳಲ್ಲಿ ವ್ಯವಹಾರಿಕ ಜ್ಞಾನವನ್ನು ಹೆಚ್ಚಿಸಲು ಮತ್ತು ವ್ಯಾಪಾರ ವಹಿವಾಟುಗಳ ಕೌಶಲ್ಯಗಳನ್ನು ಬೆಳೆಸಲು ಸದುದ್ದೇಶದಿಂದ ಈ ಮಕ್ಕಳ ಸಂತೆಯನ್ನು ಆಯೋಜಿಸಲಾಗಿದೆ ಎಂದು ವಿದ್ಯಾನಗರ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಎಸ್.ಎಚ್ ಹುನಗುಂದ ಹೇಳಿದರು.ಗುರುವಾರ ಪಟ್ಟಣದ ವಿದ್ಯಾನಗರ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಜವಾಹರ್ ಲಾಲ್ ನೆಹರು ಅವರ ಜನ್ಮ ದಿನೋತ್ಸವ ಮತ್ತು ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳ ಸಂತೆಯ ಕುರಿತು ಮಾತನಾಡಿದ ಅವರು, ಇಂದಿನ ಆಧುನಿಕ ವಿಜ್ಞಾನ ತಂತ್ರಜ್ಞಾನ ಯುಗದಲ್ಲಿರುವ ನಾವುಗಳು ಮನೆಯಲ್ಲೇ ಕುಳಿತು ನಿತ್ಯ ಬಳಸುವ ದಿನಸಿ ಪದಾರ್ಥ ಸೇರಿದಂತೆ ಸೇವಿಸುವ ಆಹಾರ ಪದಾರ್ಥದ ಉಡುವ ಬಟ್ಟೆಯವರಿಗೂ ಆನ್ಲೈನ್ ಶಾಪಿಂಗ್ ಮಾಡುವ ಕಾಲವಿದು. ಇದರಿಂದ ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಬರಲು ಸಾಧ್ಯವಿಲ್ಲ. ನೇರವಾಗಿ ಮಾರುಕಟ್ಟೆಯ ವ್ಯವಸ್ಥೆ, ವ್ಯಾಪಾರ ವಹಿವಾಟಿನಲ್ಲಿ ಚೌಕಾಸಿ, ವಸ್ತುವಿನ ಬೆಲೆ ಬಗ್ಗೆ ತಿಳಿಯಲು ಇಂತಹ ಮಕ್ಕಳ ಸಂತೆ ಬಹಳ ಉಪಯುಕ್ತ ವಾಗಿವೆ. ಇದರಿಂದ ಮಕ್ಕಳಲ್ಲಿ ಪುಸ್ತಕ ಜ್ಞಾನದ ಜೊತೆಗೆ ಹೊರಗಿನ ವ್ಯವಹಾರಿಕ ಜ್ಞಾನವೂ ಕೂಡ ಮಕ್ಕಳಲ್ಲಿ ಬರಲು ಸಾಧ್ಯವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಮಕ್ಕಳು ಮನೆಯಿಂದ ತಂದ ವಿವಿಧ ತರಹದ ತರಕಾರಿ, ದಿನಸಿ ವಸ್ತುಗಳು, ಹೋಟೆಲ್ಗಳಲ್ಲಿ ತಯಾರಿಸುವ ಆಹಾರಗಳಾದ ದೋಸೆ, ಇಡ್ಲಿ, ವಡೆ, ಅನ್ನ ಸಾಂಬಾರು, ಬಜಿ ಗಿರಿಮಿಟ್ಟು, ಜಾಮೂನು ಸೇರಿದಂತೆ ಅನೇಕ ವಸ್ತುಗಳನ್ನು ಸಂತೆಯಲ್ಲಿ ಮಾರಾಟ ಮಾಡುತ್ತಿರುವ ದೃಶ್ಯವನ್ನು ಪಾಲಕರು ಮತ್ತು ಸಾರ್ವಜನಿಕರು ನೋಡಿ ಕಣ್ತುಂಬಿ ಕೊಳ್ಳುವ ಮೂಲಕ ತಾವು ಕೂಡ ಸಂತೆಯಲ್ಲಿ ವಿವಿಧ ವಸ್ತುಗಳನ್ನು ಖರೀದಿಸಿ ಸಂತಸ ಪಟ್ಟರು.ಮಕ್ಕಳ ದಿನಾಚರಣೆ ನಿಮಿತ್ಯ ಜವಾಹರ್ ಲಾಲ್ ನೆಹರು ರವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಕ್ಕಳಿಂದ ಕೇಕ್ ಕಟ್ ಮಾಡಿಸುವ ಮೂಲಕ ಅದ್ದೂರಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಮಕ್ಕಳ ದಿನಾಚರಣೆಯ ಪ್ರಯುಕ್ತ ಹಮ್ಮಿ ಕೊಳ್ಳಲಾಗಿದ್ದಂತ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಶಾಲಾ ಎಸ್.ಡಿ.ಎಮ್.ಸಿ ಸದಸ್ಯ ವಿರುಪಾಕ್ಷಿ ಮುಚಖಂಡಿ, ದೈಹಿಕ ಶಿಕ್ಷಕ ಎನ್.ಎಂ ರೋಣದ, ಸಹ ಶಿಕ್ಷಕರಾದ ಎಸ್. ಎಚ್. ಗಾಣಿಗೇರ, ಎಂ. ಬಿ. ಹೊರಗಿನಮಠ, ಎಸ್.ಎಸ್. ಹೊಸಮನಿ, ಎಸ್. ಬಿ. ಲೋಕಾಪುರ, ಎಲ್.ಎಸ್. ಮೇಟಿ, ಎಸ್.ಎಸ್ ಮೇಟಿ ಸೇರಿದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಮಲ್ಲಿಕಾರ್ಜುನ.ಬಿ.ಬಂಡರಗಲ್ಲ.ಹುಣಗುಂದ