ವಿಶ್ವ ಗೆದ್ದರು ವಿವೇಕರು…..

“ಏಳಿ ಎದ್ದೇಳಿ ಗುರಿ ಮುಟ್ಟವ ತನಕ ನಿಲ್ಲದಿರಿ ” ಈ ಮಾತು ಪ್ರತಿ ಭಾರತೀಯನ ನರನಾಡಿಗಳಲ್ಲಿ ಸದಾ ಸಕಾರತ್ಮಕವಾಗಿದೆ . ಈ ಮಾತನ್ನು ಹೇಳಿದ್ದು , ನಳನಳಿಸುವ ಕಣ್ಣುಗಳುಳ್ಳ ವಿವೇಕಯುತ ಚಿಂತನೆಯುಳ್ಳ ವಿಶ್ವಗುರು ಸ್ವಾಮಿ ವಿವೇಕಾನಂದರು. ಸ್ವಾಮಿ ವಿವೇಕಾನಂದ … ಈ ಹೆಸರೇ ಒಂದು ಪ್ರೇರಣೆ . ಈ ಹೆಸರೇ ಒಂದು ಚೈತನ್ಯ ಶಕ್ತಿ , ಈ ಹೆಸರೇ ಒಂದು ದಿವ್ಯ ಶಕ್ತಿಯನ್ನು ದೇಹದೊಳಗೆ ಸಂಚಯಿಸುವ ಶಕ್ತಿ ಸೋತ ಇಂತಹ ದಿವ್ಯ ಚೇತನ ಹುಟ್ಟಿದ ದೇಶದಲ್ಲಿ ನಾವು ಹುಟ್ಟಿದೇವೆ ಎಂಬುದೇ ಅದೃಷ್ಟ , ಅವರು ಭಾರತೀಯರು ಎನ್ನುವುದು ನಮ್ಮ ಹೆಮ್ಮೆ ವಿಶ್ವರಾಷ್ಟ್ರಗಳು ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಮಹಾನ್ ಚೇತನ ಅವರು , ಭಾರತದ ಆಧ್ಯಾತ್ಮಿಕತೆಯ ಔನತ್ಯವನ್ನು ಜಗದ ಮುಂದೆ ಇಟ್ಟು , ಎಲ್ಲಾ ರಾಷ್ಟ್ರಗಳ ಮೈ ರೋಮಾಂಚನಗೊಳಿಸಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ.ಇಂದು ಅವರ ಜಯಂತಿ ಈ ದಿನ ನಾವು ಅವರನ್ನು ನೆನೆಯದ್ದಿರೆ ನಾವು ಭಾರತೀಯರೇ ಅಲ್ಲ . ಭಾರತಕ್ಕೆ ಇವರ ಸೇವೆಯನ್ನು ಗುರುತಿಸಿ ರಾಷ್ಟ್ರೀಯ ಯುವ ದಿನಾಚರಣೆ 1985 ರಿಂದ ಆಚರಿಸುತ್ತಾ ಬಂದಿದ್ದೇವೆ .ಸ್ವಾಮಿ ವಿವೇಕಾನಂದರು ತಮ್ಮ ಶಕ್ತಿಯುತ ವ್ಯಕ್ತಿತ್ವದಿಂದ , ಅಪೂರ್ವ ವಾಕ್ ಚಾತುರ್ಯತೆಯಿಂದ ಹಾಗೂ ಪ್ರಚೋದನಾತ್ಮಕ ಬರವಣಿಗೆಗಳ ಮೂಲಕ ಯುವಕರಲ್ಲಿ ನವೋತ್ಸಾಹತುಂಬಿದರು , ಅವರು ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆ ಮೂಡಿಸಿ ನವ ಭಾರತ ನಿರ್ಮಾಣ ಮಾಡಿದರು ದೇಶವನ್ನು ಮುನ್ನಡೆಸಲು ಸಶಕ್ತವಾದ ಯುವಪಡೆ ನಿರ್ಮಿಸುವುದೇ ನನ್ನ ಗುರಿ ಎನ್ನುತ್ತಿದ್ದ ಎಕೈಕ ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರು ಮಾನಸಿಕ , ದೈಹಿಕ , ಆಧ್ಯಾತ್ಮಿಕ , ನೈತಿಕ , ಸಾಮಾಜಿಕ ಶಕ್ತಿಗಳನ್ನು ಎಂದಿಗೂ ಕಳೆದುಕೊಳ್ಳಬಾರದು ಎಂದು ಯುವಕರಿಗೆ ಕರೆ ನೀಡುತ್ತಿದ್ದರು ಯುವಜನರಿಗೆ ವಿವೇಕಾನಂದರು ಆದರ್ಶವಾಗಿದ್ದರು , ಅವರ ವ್ಯಕ್ತಿತ್ವ ಇಂದಿಗೂ ಯುವಕ ಯುವತಿಯರನ್ನು ಆಕರ್ಷಿಸುತ್ತದೆ “ಶಕ್ತಿಯೇ ಜೀವನ ,ದೌರ್ಬಲ್ಯವೇ ಮರಣ ” ಎಂದು ಯುವಜನರಿಗೆ ಶಕ್ತಿ ಸಂಜೀವಿನಿ ಆಗಿ ಬೋಧಿಸಿದರು . ಅವರಲ್ಲಿ ಅಪಾರ ರಾಷ್ಟ್ರಪ್ರೇಮ , ವಿಶ್ವಭಾತೃತ್ವ ಪ್ರಾಯೋಗಿಕ ವೇದಾಂತ ಅವರಲ್ಲಿ ಅಡಗಿತ್ತು ಹಾಗೂ ಕೃಷಿ ಕಾರ್ಮಿಕರು ಭಾರತೀಯರು ವ್ಯವಸಾಯವನ್ನು ಒಂದು ಉದ್ಯೋಗವನ್ನಾಗಿ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು . ಭಾರತಾದ್ಯಂತ ಕಾಲ್ನಡಿಗೆಯಲ್ಲಿ ಸಂಚರಿಸಿ ದೇಶದ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿದರು . ಸ್ವಾಮಿ ವಿವೇಕಾನಂದರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರು. ಅವರ ಪ್ರಕಾರ ಶಿಕ್ಷಣವೆಂದರೆ ಮಾನವೀಯತೆ ವಿಕಾಸ ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವುದೇ ಶಿಕ್ಷಣ ‘ ಎಂದು ಶಿಕ್ಷಣದ ಮೌಲ್ಯ ತಿಳಿಸಿದರು . ಹಾಗೂ ಶಿಕ್ಷಣವೆಂಬುದು ವ್ಯಕ್ತಿತ್ವ ನಿರ್ಮಾಣ ಚಾರಿತ್ವ ನಿರ್ಮಾಣ ಇದುವೇ ರಾಷ್ಟ್ರದ ನಿರ್ಮಾಣ ಎಂದು ಭಾರತೀಯರಲ್ಲಿ ಜಾಗೃತಿ ಮೂಡಿಸಿದರು .ಸ್ವಾಮಿ ವಿವೇಕಾನಂದರು ಹೇಳುವ ಅದ್ಭುತವಾದ ನುಡಿಗಳೆಂದರೆ ನೀವು ಯಾವುದೇ ಕೆಲಸವನ್ನು ಮಾಡುವಾಗಲೂ ನಿಮ್ಮ ಮನಸ್ಸು ಹೃದಯ ನಿಮ್ಮ ಸರ್ವಸ್ವವನ್ನೂ ಆ ಕೆಲಸಕ್ಕೆ ಕೊಡಿ , ಈ ಜಗತ್ತೇ ನಿಮ್ಮದು ನಮ್ಮನ್ನು ನಾವು ಗಟ್ಟಿಗೊಳಿಸಲೆಂದೇ ಇರುವ ವ್ಯಾಯಾಮ ಶಾಲೆ ” ಎಂದು ಯುವಕರಲ್ಲಿ ಉತ್ಸಾಹ ಚಿಲುಮೆ ಆಗಿದ್ದರು ವಿವೇಕಾನಂದರು ಭಾರತೀಯ ಸಮಾಜವು ಶಿಕ್ಷಣದಿಂದ ಮಾತ್ರ ಪುಟಿದೇಳಬಲ್ಲದ್ದು , ಶಿಕ್ಷಣ ಮಾತ್ರ ಪುನಃ ಚೈತನ್ಯವನ್ನು ತುಂಬಬಲ್ಲದು . ಅದರಲ್ಲಿಯೂ ಮುಖ್ಯವಾಗಿ ಮಹಿಳಾ ಶಿಕ್ಷಣದಿಂದ ಮಾತ್ರ ದೇಶ ಪುನಃ ನಿರ್ಮಾನ ಮಾಡಲು ಸಾಧ್ಯ ಎಂದು ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದರು. ಏವೇಕಾನಂದರ ಗುರಿಯನ್ನು ಒಂದೇ ಸಾಲಿನಲ್ಲಿ ಹೇಳುವುದಾದರೆ ಹಿಂದೂ ಸಂಸ್ಕೃತಿಯ ಉದಾತ್ತ ಧೇಯ ಗಳನ್ನು ಕುರಿತು ಜಾಗೃತಿ ಮೂಡಿಸುವುದು . ಹಾಗೂ ವೇದಾಂತವನ್ನು ವೈಜ್ಞಾನಿಕ ಮತ್ತು ವೈಚಾರಿಕ ರೀತಿಯಲ್ಲಿ ಹೇಳುತ್ತಿದ್ದರು . ನಮ್ಮ ಸಂಸ್ಕೃತಿಯ ಶ್ರೇಷ್ಠತೆಯು ಎಲ್ಲದಕ್ಕಿಂತ ಹೆಚ್ಚಿನದು ಎಂದು ಯುವಕರಲ್ಲಿ ಕಿಚ್ಚು ಹಚ್ಚಿದರು . ಹಾಗೂ ಯುವಕರಿಗೆ ಎದ್ದೇಳಿ ಕಾರ್ಯೋನ್ಮುಖರಾಗಿ ಈ ಬದುಕು ನಿಮ್ಮದು ಹುಟ್ಟಿದ ಮೇಲೆ ಏನಾದರೂ ಸಾಧಿಸಿ ಎಂದು ಪ್ರೇರೇಪಿಸಿದರು . ಅಂದು ಸೆಪ್ಟೆಂಬರ್ II ನೇ ತಾರೀಖು ಶಿಕಾಗೋ ಧರ್ಮ ಸಂಸತ್ತಿನಲ್ಲಿ ನಿಂತ ವಿವೇಕಾನಂದರು ಮಾತು ಆರಂಭವಾಗಿದ್ದು , ಅಮೇರಿಕಾದ ಸಹೋದರ ಸಹೋದರಿಯರೇ ಎಂಬ ವಿದ್ವತ್ ಪೂರ್ಣ ಪ್ರೀತಿಯುತ ಮಾತುಗಳಿಂದ , ತನ್ನೆದುರು ಕೂತಿದ್ದ ಅಷ್ಟು ಜನರನ್ನು ಹಾಗೆ ಒಂದೇ ಉಸಿರಿನಲ್ಲಿ ತನ್ನವರನ್ನಾಗಿ ಮಾಡಿ ಕೊಂಡ ಪ್ರಪಂಚದ ಏಕೈಕ ಧರ್ಮಗುರು ವಿಶ್ವಗುರು ಸ್ವಾಮಿ ವಿವೇಕಾನಂದರು . ಸ್ವಾಮಿ ವಿವೇಕಾನಂದರು ಸಹೋದರ , ಸಹೋದರಿ ಯರೇ ‘ ಎಂದಿದ್ದೇ ತಡ ಇಡೀ ಸಭಾಂಗಣಕ್ಕೆ ವಿದ್ಯುತ್ ಸಂಚರಿಸಿದಂತಾಯಿತು . ಎಲ್ಲಾ ಸಭಿಕರು ಎದ್ದು ಮೂರ್ನಾಲ್ಕು ನಿಮಿಷಗಳವರೆಗೂ ಚಪ್ಪಾಳೆ ತಟ್ಟಿದರು ಕೇವಲ ಹದಿನೈದು ನಿಮಿಷಗಳ ಪುಟ್ಟ ಭಾಷಣದಲ್ಲಿ ನಮ್ಮ ಸನಾತನ ಹಿಂದೂ ಸಂಸ್ಕೃತಿಯ ಮೂಲ ಆಶಯ ಮತ್ತು ಉದಾತ್ತ ಮೌಲ್ಯಗಳನ್ನು ಅನಾವರಣ ಮಾಡಿದರು ಮರುದಿನ ಎಲ್ಲಾ ಪತ್ರಿಕೆಗಳಲ್ಲಿ ದೂರದ ಹಿಂದೂಸ್ಥಾನದ ಯುವ ‘ ವೀರ ಸಂನ್ಯಾಸಿಯ ಸಿಂಹಗರ್ಜನೆ ‘ ಎಂದು ಹೊಗಳಿದ್ದರು . ಗಂಟೆಗಟ್ಟಲೇ ಭಾಷಣ ಮಾಡಿದ ಮಗೆ , ಬೀಗುತ್ತಿದ್ದವರಿಗೆ ನಮ್ಮ ವಿವೇಕಾನಂದರ ಹದಿನೈದು ನಿಮಿಷಗಳ ಭಾಷಣದ ಮುಂದೆ ಕಾಲು ಕಸದಂತೆ ಮೂಲೆ ಸೇರಿತು , ರಾತ್ರಿ ಕಳೆದು ಬೆಳಗಾಗುವುದರಲ್ಲಿ ವಿವೇಕಾನಂದರು ಧ್ರುವತಾರೆ ಆದರು . ಇಂತಹ ದಿವ್ಯ ಪುರುಷ ನಮ್ಮ ದೇಶದಲ್ಲಿ ಹುಟ್ಟಿದ್ದು ನಮ್ಮ ಪುಣ್ಯ.ನಾವೆಲ್ಲರೂ ಅವರ ಆದರ್ಶವನ್ನು ಪಾಲಿಸುತ್ತಾ ಮುನ್ನಡೆಯೊನಾ.ಅಂತಹ ದಿವ್ಯ ಚೇತನರನ್ನು ಈ ಭೂಮಿಗೆ ತಂದ ವಿಶ್ವನಾಥ ದತ್ತರಿಗೆ ತಾಯಿ ಭುವನೇಶ್ವರಿ ದೇವಿಯವರಿಗೆ ಇಡೀ ಮಾನವ ಕುಲ ಚಿರ ಋಣಿ . ಅವರಲ್ಲಿ ಆಧ್ಯಾತ್ಮಿಕತೆಯ ಬೀಜ ಬಿತ್ತಿದ ಆ ಮಹಾತಾಯಿ , ಆ ಆಧ್ಯಾತ್ಮಿಕತೆಯ ಬೀಜ ಒಡೆದು ಗಿಡವಾದಾಗ ಅದು ಹೆಮ್ಮರವಾಗಿ ವಿಶ್ವಕ್ಕೇ ಸನ್ನಡತೆಯ ನೆರಳು ನೀಡುವಂತೆ ಬೆಳೆಸಿದ ಮಹಾಗುರು ಶ್ರೀ ರಾಮಕೃಷ್ಣ ಪರಮಹಂಸರ ಪಾದಾರವಿಂದಗಳಿಗೆ ಎಲ್ಲರ ನಮನಗಳನ್ನು ಸಲ್ಲಿಸೋಣ.
ಭೂಮಿಕಾ ರಂಗಪ್ಪ ದಾಸರಡ್ಡಿ, ಬಿದರಿ