ಕ್ಷೇತ್ರದ ಗಡಿ ಭಾಗಗಳ ರಾಂಪುರ ಹೋಬಳಿಯ ಗ್ರಾಮಗಳ ಗಡಿ ಭಾಗಗಳಿಗೆ ಸಿಸಿ ರಸ್ತೆ, ಚರಂಡಿ, ಸೋಲಾರ್ ಲೈಟ್ ಗಳು, – ಉದ್ಘಾಟನೆ ಮಾಡಿದ ಶಾಸಕರು.
ರಾಂಪುರ ಜು.17

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ಕ್ಷೇತ್ರದ ಗಡಿ ಭಾಗಕ್ಕೆ ಮೇಗಳ ಕಣಿವೆ ಕೆಳಗಳ ಕಣಿವೆ ಬಂಡ್ರವಿ ಸಂತೆಗುಡ್ಡ ಲಕ್ಲಳ್ಳಿ ಈ ಗ್ರಾಮಗಳಿಗೆ ಸುಮಾರು 550 ಲಕ್ಷಗಳು ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಯಿತು. ಮ್ಯಾಗಳ ಕಣಿವೆ ಸಿಸಿ ರಸ್ತೆ ಸೋಲಾರ್ ಲೈಟ್ ಗಳು ಅಳವಡಿಸುವುದು ಹನುಮನ ಗುಡ್ಡ ಸಿಸಿ ರಸ್ತೆ ಸೋಲಾರ್ ಲೈಟ್ ಅಳವಡಿಸುವುದು ಬಾಂಡ್ರಾವಿ ಗ್ರಾಮ ಸಿಸಿ ರಸ್ತೆ ಸೋಲಾರ್ ಲೈಟ್ ಗಳು ಅಳವಡಿಸುವುದು ಸಂತೆಗುಡ್ಡ ಸಿಸಿ ರಸ್ತೆ ಚರಂಡಿ ಸೋಲಾರ್ ಲೈಟ್ ಅಳವಡಿಸುವುದು ಈ ಕಾಮಗಾರಿಗೆ ಅಂದಾಜು ವೆಚ್ಚ 480 ಲಕ್ಷಗಳು ಪ್ರಥಮ ದರ್ಜೆ ಗುತ್ತಿಗೆದಾರರಾದ ಕೆ ಜಾನಕಿ ರಾಮರೆಡ್ಡಿ ಎನ್ನಾರ್ ಚಿಕ್ಕಮಂಗಳೂರು ಜಿಲ್ಲೆ ಪಂಚಾಯತ್ ರಾಜ್ ಇಲಾಖೆ ಸರ್ಕಾರ ದಿಂದ ಮಂಜೂರು ಮಾಡಿಸಿ ಉದ್ಘಾಟನೆ ಮಾಡಿದ ಶಾಸಕರು ಈ ಸಂದರ್ಭದಲ್ಲಿ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ ಹೊಂಬಾಳೆ ಮೊಳಕಾಲ್ಮುರು.