ಸಿಂದಗಿಯಲ್ಲಿ ನೂತನ ಸಂಸದರಿಗೆ ವಿಷೇಶ ಸನ್ಮಾನ.
ಸಿಂದಗಿ ಜು. 17

ಗೌರವಾನ್ವಿತ ಎಲ್ಲಾ ಮುಖಂಡರಿಗೂ, ಪದಾಧಿಕಾರಿಗಳಿಗೂ, ಚುನಾಯಿತ ಪ್ರತಿನಿಧಿಗಳಿಗೂ, ಅಭಿಮಾನಿ ಬಳಗದವರು ಹಿತೈಷಿಗಳಿಗೂ ಸಮಸ್ತ ಕಾರ್ಯಕರ್ತ ಬಂಧುಗಳಿಗೆ ತಿಳಿಸುವು ದೇನೆಂದರೆ. ದಿನಾಂಕ 18/07/2024 ರಂದು ಗುರುವಾರ ಮಧ್ಯಾಹ್ನ 3:00 ಗಂಟೆಗೆ ಸಿಂದಗಿ ಬಿಜೆಪಿ ಕಾರ್ಯಾಲಯದಲ್ಲಿ ವಿಜಯಪುರ ಲೋಕಸಭಾ ಚುನಾವಣೆಯಲ್ಲಿ ನೂತನ ಸಂಸದರಾಗಿ ಆಯ್ಕೆಯಾದ ಕೇಂದ್ರದ ಮಾಜಿ ಸಚಿವರು ಜನಪ್ರಿಯ ಸಂಸದರಾದ ಸನ್ಮಾನ್ಯ ಶ್ರೀ ರಮೇಶ್ ಜಿಗಜಿಣಗಿ ಅವರಿಗೆ ಸನ್ಮಾನ ಸಮಾರಂಭ ಹಾಗೂ ಮಂಡಲ ಕಾರ್ಯಕಾರಣಿ ಸಭೆ ಇದ್ದು.

ಈ ಸಭೆಗೆ ಜಿಲ್ಲಾ ಅಧ್ಯಕ್ಷರಾದ ಆರ್ ಎಸ್ ಪಾಟೀಲ್ ಕುಚುಬಾಳ, ಸಂಸದರಾದ ಸನ್ಮಾನ್ಯ ಶ್ರೀ ರಮೇಶ್ ಜಿಗಜಿಣಗಿ, ಮಾಜಿ ಶಾಸಕರಾದ ಶ್ರೀ ರಮೇಶ ಭೂಸನೂರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಳುಗೌಡ ಪಾಟೀಲರು ಹಾಗೂ ಮುಖಂಡರು ಹಾಗೂ ಜಿಲ್ಲೆಯ ಮಂಡಲದ ಪ್ರಮುಖರು ಆಗಮಿಸುತ್ತಿದ್ದು. ಈ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿ ಗೊಳಿಸಬೇಕಾಗಿ ತಮ್ಮಲ್ಲಿ ಸಿಂದಗಿ ಮಂಡಲ ಅಧ್ಯಕ್ಷರಾದ ಶ್ರೀ ಸಂತೋಷ ಪಾಟೀಲ ಡಂಬಳ ರವರು ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ. ದೇವರ ಹಿಪ್ಪರಗಿ.