ನಡು ಗಡ್ಡೆಯಾದ ಹಳೆ ತಾರಾಪುರ ಗ್ರಾಮ 50 ಜನರ – ರಕ್ಷಣೆ ಮಾಡಿದ ಯುವಕರು.
ಆಲಮೇಲ ಸ.25





ವಿಜಯಪುರ ಜಿಲ್ಲೆಯ ಚಡಚಣ, ಇಂಡಿ, ಆಲಮೇಲ ತಾಲೂಕಿನಲ್ಲಿ ಹಾಯ್ದು ಹೋಗಿರುವ ಭೀಮ ನದಿ ತನ್ನ ಆರ್ಭಟವನ್ನು ಮುಂದುವರಿಸಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಭೀಮಾ ನದಿಯ ಉಪ ನದಿ ಹಾಗೂ ಭೀಮಾ ನದಿಗೆ ಸೇರುವ ಹಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಪ್ರವಾಹದ ಪರಿಸ್ಥಿತಿ ಮತ್ತಷ್ಟು ಹೆಚ್ಚಾಗಿದೆ.

ಆಲಮೇಲ ತಾಲೂಕಿನ ಹಳೆ ತಾರಾಪುರ ಗ್ರಾಮವನ್ನು ಸುತ್ತುವರೆದಿರುವ ಭೀಮಾ ನದಿಯ ನೀರು ಗ್ರಾಮವನ್ನು ಸಂಪೂರ್ಣ ನಡುಗಡ್ಡೆ ಯನ್ನಾಗಿಸಿದೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ಗುರುವಾರ ಬೆಳಿಗ್ಗೆ ಎದ್ದು ನೋಡಿದರೆ ಗ್ರಾಮದ ಸುತ್ತಲೂ ನೀರು ಅಪಾರ ಮಟ್ಟದ ಮೀರಿ ಹರಿಯುತ್ತಿದ್ದರ ಪರಿಣಾಮವಾಗಿ ಗ್ರಾಮವು ಸಂಪೂರ್ಣ ನಡುಗಡ್ಡೆಯಾಗಿ ಪರಿವರ್ತನೆ ಯಾಗಿದೆ.

ಹಳೆ ತಾರಾಪುರ ಗ್ರಾಮದಲ್ಲಿ ಸುಮಾರು 50 ಕುಟುಂಬಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದರು ತಕ್ಷಣ ಗಮನಿಸಿದ ತಾರಾಪೂರ ಗ್ರಾಮದ ಯುವಕರು ಬುಟ್ಟಿಯ ಮೂಲಕ ರಕ್ಷಣೆ ಮಾಡಿದರು ಹಾಗೂ ಗ್ರಾಮದಲ್ಲಿ ಸಿಲುಕಿ ಕೊಂಡ ಹಲವರನ್ನು ರಕ್ಷಿಸಿದರು. & ದನ ಕರುಗಳನ್ನು ಹೊರಗಡೆ ಹಾಕಲು ಹರಸಹಾಸ ಪಟ್ಟರು.

ಗ್ರಾಮದಲ್ಲಿದ್ದ ತಮ್ಮ ಉಪ ಜೀವನದ ಸಾಮಾಗ್ರಿಗಳನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಸಲಾಯಿತು ಭೀಮಾ ನದಿಯ ಪ್ರವಾಹ ದಿಂದ ರೈತ ಬೆಳೆದ ಕಬ್ಬು ಹತ್ತಿ ತೊಗರಿ ಇನ್ನಿತರ ಬೆಳೆಗಳಿಗೆ ನೀರು ನುಗ್ಗಿರುವುದರಿಂದ ಸಂಪೂರ್ಣ ನಾಶವಾಗಿದೆ ಮುನ್ನೆಚ್ಚರಿಕೆ ಕ್ರಮವಾಗಿ ಹೂಸ ತಾರಾಪೂರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ.

ತಾರಾಪೂರ ಗ್ರಾಮಕ್ಕೆ ಆಲಮೇಲ ತಹಶೀಲ್ದಾರ್ ಧನಪಾಲ ಶೆಟ್ಟಿ ಎ.ಎಮ್ ಅತ್ತಾರ ಕಡಣಿ ಗ್ರಾಮ ಪಂಚಾಯಿತಿಯ ಪಿಡಿಓ ಶರಣಗೌಡ ಕಡ್ಲೆವಾಡ ತಾರಾಪೂರ ತಲಾಟಿ ಮಡಿವಾಳಪ್ಪ ಬಿರಾದಾರ ಭೇಟಿ ನೀಡಿದರು.ಹಳೆ ತಾವರಖೇಡ ಗ್ರಾಮದಲ್ಲಿ ಸುಮಾರು 5 ರಿಂದ 6 ಮನೆಗಳಿಗೆ ನುಗ್ಗಿರುವ ನೀರು ಕೆಲವು ಜನರು ಅಲ್ಲಿಂದ ಬೇರೆ ಕಡೆಗೆ ಸ್ಥಳಾಂತರ ಗೊಂಡರು.

ಹಳೆ ಬ್ಯಾಡಗಿಹಾಳ ಗ್ರಾಮದಲ್ಲಿ ನೀರು ನುಗ್ಗಿದೆ. ದೇವಣಗಾಂವ ಗ್ರಾಮದ ಹನುಮಾನ್ ದೇವಸ್ಥಾನದ ಆವರಣವನ್ನು ನೀರು ಸುತ್ತುವರಿದಿದ್ದು ಜನ ವಸತಿ ಸಮೀಪ ನೀರು ಆವರಿಸಿದೆ. ಕುಮಸಗಿ ಗ್ರಾಮದಲ್ಲಿ ಸುಮಾರು 20 ಮನೆಗಳಿಗೆ ನೀರು ನುಗ್ಗಿರುತ್ತದೆ. ಗ್ರಾಮದ ಪಕ್ಕದಲ್ಲಿದ್ದ ಶಂಬೇವಾಡ ಗ್ರಾಮದ ಜನ ಪ್ರದೇಶದ ಹತ್ತಿರ ನೀರು ನುಗ್ಗಿರುತ್ತದೆ. ಕಡ್ಲೆವಾಡ, ಶಿರಸಗಿ, ಬಗಲೂರು ಗ್ರಾಮದ ಸಮೀಪ ನೀರು ನುಗ್ಗಿದೆ. ದೇವಣಗಾಂವ, ಬ್ಯಾಡಗಿಹಾಳ, ಶಂಬೆವಾಡ, ಕಡ್ಲೆವಾಡ ಗ್ರಾಮಗಳ ಜನರನ್ನು ಎಚ್ಚರದಲ್ಲಿರುವಂತೆ ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ. ಜಿ ಹಿರೇಮಠ ಆಲಮೇಲ