ಮಲ್ಲಾಬಾದ್ ಏತ್ ನೀರಾವರಿಯ ಕಾಲುವೆ ನೀರು P.W.D ರಸ್ತೆ ಕಾಮಗಾರಿಗೆ ಬಳಕೆ ಅಧಿಕಾರಿಗಳ ವಿರುದ್ಧ – ಶ್ರವಣಕುಮಾರ.ಡಿ ನಾಯಕ ಆಕ್ರೋಶ.
ಇಜೇರಿ ಮಾ.24

ಯಡ್ರಾಮಿ ತಾಲ್ಲೂಕಿನ ಇಜೇರಿ ಗ್ರಾಮದಿಂದ ಜವಳಗಾ ಗ್ರಾಮದ ವರೆಗೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ರಸ್ತೆ ಸುಧಾರಣೆ ಕಾಮಗಾರಿಗೆ ಮಲ್ಲಾಬಾದ್ ಏತ್ ನೀರಾವರಿ ಕಾಲುವೆಯ ನೀರು ಬಳಕೆ ಮಾಡುತ್ತಿದ್ದಾರೆ ಇದರ ಬಗ್ಗೆ ಸಾಕಷ್ಟು ಬಾರಿ P.W.D ಮತ್ತು KBJNL ಅಧಿಕಾರಿಗಳ ಗಮನಕ್ಕೆ ತಂದರು ಕೂಡ ಯಾವುದೇ ಪ್ರಯೋಜನೆ ಆಗಿಲ್ಲ, ಕಾಲುವೆಗೆ ನೀರು ಬೀಡಿ ಎಂದು ವಿವಿಧ ಸಂಘಟನೆಗಳು ಹೋರಾಟ ಮಾಡಿ ನೀರು ಬಿಡಿಸಿದ್ದರೆ ರೈತರಿಗೆ ಮತ್ತು ದನ ಕರುಗಳಿಗೆ ಅನುಕೂಲ ವಾಗುವ ಬದಲು ಕಾನೂನು ಬಾಹಿರವಾಗಿ ರಸ್ತೆ ಗುತ್ತಿಗೆದಾರ ಕ್ಯಾನಲ್ ನೀರು ರಸ್ತೆಗೆ ಬಳಕೆ ಮಾಡುತ್ತಿರುವುದು ನಾಚಿಗೇಡಿನ ಸಂಗತಿಯಾಗಿದೆ.
ಇದರ ಬಗ್ಗೆ ಕೂಡಲೇ ಅಧಿಕಾರಿಗಳು ಗುತ್ತೇಗೆದಾರನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ P.W.D ಮತ್ತು KBJNL ಕಚೇರಿ ಮುಂದೆ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಮತ್ತು ಪತ್ರಕರ್ತರ ಶ್ರವಣಕುಮಾರ.ಡಿ ನಾಯಕ ಮತ್ತು ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯ ಇಜೇರಿ ಗ್ರಾಮ ಘಟಕ ಅಧ್ಯಕ್ಷ ನಿಂಗಣ್ಣ ಚಿಗರಹಳ್ಳಿ ಆಗ್ರಹಿಸಿದ್ದಾರೆ.