ಬಳ್ಳಾರಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಿ. ಶ್ರೀ ರಾಮುಲು ಗೆಲುವು ನಿಶ್ಚಿತ – ಎಂ.ಎಲ್.ಸಿ ರವಿಕುಮಾರ್.
ಹೊಸಹಳ್ಳಿ ಏಪ್ರಿಲ್.15

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ ಶ್ರೀರಾಮುಲು ಗೆಲುವು ನಿಶ್ಚಿತ ಎಂದು ರವಿಕುಮಾರ್ ಹೇಳಿದರು. ಅವರು ಭಾನುವಾರ ಭಾರತೀಯ ಜನತಾ ಪಾರ್ಟಿ ಬಳ್ಳಾರಿ ಮತ ಕ್ಷೇತ್ರದಿಂದ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣಾ ಪ್ರಚಾರ ಅಂಗವಾಗಿ ಪ್ರಚಾರದಲ್ಲಿ ಭಾಗವಹಿಸಿ ಮತಯಾಚನೆ ಮಾಡಿ ಮಾತನಾಡಿದರು ಬಿಜೆಪಿ ಗೆಲುವು ಶತಸಿದ್ಧ ಜನರು ದೇಶದ ಅಭಿವೃದ್ಧಿ ಹಾಗೂ ಭದ್ರತೆ ಪರವಾಗಿದ್ದಾರೆ. ತನ್ನ ಬೇಡಿಕೆಗಿಂತ ದೇಶದ ಸುರಕ್ಷತೆ ಬಗ್ಗೆ ಚಿಂತಿಸುವ ಜನರಿದ್ದಾರೆ. ಹೀಗಾಗಿ ಮೋದಿಯಿಂದ ದೇಶದ ಸುರಕ್ಷತೆ ಮತ್ತು ಭದ್ರತೆ ಸಾಧ್ಯ. ದೇಶದಲ್ಲಿ ಕಾಂಗ್ರೆಸ್ಸಿಗೆ ಉತ್ತಮ ನಾಯಕನ ನೇತೃತ್ವವಿಲ್ಲ. ಆದರೆ ಬಿಜೆಪಿಗೆ ಮೋದಿ ಎಂಬ ಉತ್ತಮ ನಾಯಕನ ನೇತೃತ್ವವಿದೆ. ನಿಶ್ಚಿತವಾಗಿ ಬಳ್ಳಾರಿ ಜಿಲ್ಲೆಯ ಜನರು ಬಿ. ಶ್ರೀರಾಮುಲು ಇವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಮೋದಿಜಿ ಅವರ ಕೈ ಬಲಪಡಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಬಳ್ಳಾರಿ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಮಾತನಾಡಿ ಮೇ 7 ರಂದು ನಡೆಯುವ ಲೋಕಸಭಾ ಚುನಾವಣೆಗೆ ಪ್ರತಿಯೊಬ್ಬರು ಉತ್ಸಾಹದಿಂದ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಸಿದ್ಧರಾಗಿದ್ದಾರೆ. ದೇಶದಲ್ಲಿ ಜನರಿಗೆ ಗೊತ್ತಾಗಿದೆ ನರೇಂದ್ರ ಮೋದಿ ಅವರ ಗ್ಯಾರಂಟಿಯ ಮುಂದೆ ಕಾಂಗ್ರೆಸ್ ಗ್ಯಾರಂಟಿ ನಿಲ್ಲುವುದಿಲ್ಲ. ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ ನಿಧಿಯನ್ನು ಕೇಂದ್ರ ಸರ್ಕಾರ 6000 ಹಾಗೂ ಈ ಮೊದಲು ಬಿಜೆಪಿ ಸರ್ಕಾರ 4000 ಸಾವಿರ ಸೇರಿಸಿ ಒಟ್ಟು 10000 ಸಾವಿರ ಕಿಸಾನ್ ಸಮ್ಮಾನ ನಿಧಿಯನ್ನು ಎಲ್ಲ ವರ್ಗದ ರೈತರಿಗೂ ನೀಡಲಾಗುತ್ತಿದ್ದು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯದ 4000 ಸಾವಿರ ಕಿಸಾನ್ ಸಮ್ಮಾನ ನಿಧಿಯನ್ನು ಕಡಿತ ಗೊಳಿಸಿದ್ದಾರೆ.

ಈ ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿಗಳು ಜನರಿಗೆ ಅರ್ಥವಾಗಿದೆ. ಬಳ್ಳಾರಿಯ ಜನ ರಾಷ್ಟ್ರದ ಹಿತ ಬಯಸುವವರು ದೇಶದ ಭದ್ರತೆಗಾಗಿ ಮೋದಿಜಿಯನ್ನು ಬೆಂಬಲಿಸುತ್ತಾರೆ ಎಂದರು. ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪ್ರಾರಂಭಗೊಂಡು ಡಾ. ಬಿ.ಆರ್ ಅಂಬೇಡ್ಕರ್ ವೃತ್ತದ ವರೆಗೆ ರೋಡ್ ಶೋ ಮುಖಾಂತರ ಪ್ರಚಾರ ಮುಕ್ತಾಯ ಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಎಸ್ ಟಿ ಮೋರ್ಚಾದ ರಾಜ್ಯಾಧ್ಯಕ್ಷ ಬಂಗಾರು ಹನುಮಂತು . ಬಿಜೆಪಿ ಜಿಲ್ಲಾಧ್ಯಕ್ಷ ಚೆನ್ನಬಸವನ ಗೌಡ್ರು. ಮಂಡಲದ ಬಿಜೆಪಿ ಉಸ್ತುವಾರಿ ಸೂರ್ಯ ಪಾಪಣ್ಣ. ಮಂಡಲ ಅಧ್ಯಕ್ಷ ಬಣವಿಕಲ್ ನಾಗರಾಜು. ನಿಕಟ ಪೂರ್ವ ಅಧ್ಯಕ್ಷ ಕೆ ಚನ್ನಪ್ಪ. ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಹೊಂಬಾಳೆ ರೇವಣ್ಣ. ಮಾರಬದ ಶಿವಣ್ಣ. ಎಸ್ ಪಿ ಪ್ರಕಾಶ್. ಯುವ ಮುಖಂಡ ಗುಳಿಗೆ ವೀರೇಂದ್ರ .ಕೆ ಸುಭಾಷ್ ಚಂದ್ರ. ಎರಿಸ್ವಾಮಿ ರೆಡ್ಡಿ. ಕುಲುಮೆಹಟ್ಟಿ ವೆಂಕಟೇಶ್. ಕೋಡಿಹಳ್ಳಿ ಭೀಮಣ್ಣ. ಕೆಟಿ ಮಲ್ಲೇಶ್. ಕೆ ಜಿ ನಾಗರಾಜ ಗೌಡ.ಹನುಮಜ್ಜ ನಾಗೇಶ್. ಮಹಿಳಾ ಮೋರ್ಚಾ ಅಧ್ಯಕ್ಷ ಶಾರದ ಕುಂಬಾರ್. ಗ್ರಾಮ ಪಂಚಾಯತಿ ಉಪಾಧ್ಯಕ್ಷ ನೇತ್ರಾವತಿ ಮಂಜುನಾಥ್. ಮಂಜುನಾಥ್. ಎಲ್ ಪವಿತ್ರ. ನೇತ್ರಾವತಿ. ಲಕ್ಷ್ಮಿಬಾಯಿ. ಮಂಡಲದ ಪ್ರಧಾನ ಕಾರ್ಯದರ್ಶಿ ಮಂಜುನಾಥ. ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆಎಚ್ ಎಂ ಸಚಿನ್ ಕುಮಾರ್. ಕರಿ ವೀರಪ್ಪ. ಆಲೂರು ಕೆ. ಟಿ. ಮಲ್ಲಿಕಾರ್ಜುನ. ಯಂಬಳಿ ಗಂಗಣ್ಣ. ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಕಾರ್ಯಕರ್ತರು ಯುವಕರು ಶ್ರೀರಾಮುಲು ಅಭಿಮಾನಿಗಳು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.