ಕಾಂಗ್ರೇಸ್ ಅಸಂಘಟಿತ ಕಾರ್ಮಿಕ ವಿಭಾಗ ಹಾಗೂ ಪೌರ ನೌಕರರ ಸಂಘದವರಿಂದ – ಜಿ.ಎಸ್. ಮಂಜುನಾಥ್ ರವರಿಗೆ ಗೌರವಿಸಿ ಸನ್ಮಾನಿಸಿದರು.
ಕೂಡ್ಲಿಗಿ ಜು.22

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಕಾವೇರಿ ನಗರದ ಎನ್ ಎಚ್ 50 ರಸ್ತೆಯಲ್ಲಿ ಹೊಸಪೇಟೆ ಯಿಂದ ಚಿತ್ರದುರ್ಗ ಮಾರ್ಗವಾಗಿ ಹಾದು ಹೋಗುವ ಸಂದರ್ಭದಲ್ಲಿ ಕೂಡ್ಲಿಗಿ ಪಟ್ಟಣ ಪಂಚಾಯತಿ ಪೌರ ಕಾರ್ಮಿಕ ನೌಕರರ ಅಧ್ಯಕ್ಷರು ಅಜ್ಜಪ್ಪ ರವರು ಹಾಗೂ ಹತ್ತಾರು ಪೌರಾ ಕಾರ್ಮಿಕರು ನೂತನವಾಗಿ ಆದಿ ಜಾಂಬವ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಕೆ ಪಿ ಸಿ ಸಿ ಅಸಂಘಟಿತ ರಾಜ್ಯಾಧ್ಯಕ್ಷರಾದ ಜಿ. ಎಸ್. ಮಂಜುನಾಥ್ ರವರು ಕರ್ನಾಟಕ ರಾಜ್ಯ ಪೌರ ನೌಕರರ ಸಂಘದಿಂದ ಗದಗನಲ್ಲಿ ಕಾರ್ಯಕ್ರಮ ಮುಗಿಸಿ ಕೊಂಡು ಹೋಗುವಂತ ಸಂದರ್ಭದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಜಿ ಎಸ್ ಮಂಜುನಾಥ್ ರವರಿಗೆ ಪೌರ ಕಾರ್ಮಿಕರಿಗೆ ಜೀವ ನಾಡಿಯಾದ ಇವರಿಗೆ ಗೌರವ ಪೂರಕ ಅಭಿನಂದನಾ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಎನ್ ಎಚ್ 50 ಹೆದ್ದಾರಿಯ ರಸ್ತೆಯಲ್ಲಿ ಕೂಡ್ಲಿಗಿಯಲ್ಲಿ ಕಾಂಗ್ರೇಸ್ ಅಸಂಘಟೀತ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷರಾದ ನಲ್ಲಾಮುತ್ತಿ ದುರುಗೇಶ್ ಹಾಗೂ ಮಲ್ಲಾಪುರದ ರಾಘವೇಂದ್ರ ರವರು ಹೂ ಮಾಲೆ ಹಾಕುವುದರೊಂದಿಗೆ ಜಯ ಘೋಷಣೆ ಗಳೊಂದಿಗೆ ಸ್ವಾಗತಿಸಿದರು.

ಹಾಗೆ ಪೌರ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಕೆ. ಪ್ರಭಾಕರ್, ಅಸಂಘಾಟಿತ ಕಾರ್ಮಿಕ ಕೂಡ್ಲಿಗಿ ತಾಲೂಕು ಅಧ್ಯಕ್ಷರು ನಾಗರಾಜ ಹೆಗ್ಡೆಳ್,ರೈತ ಸಂಘದ ಮುಖಂಡರು ನಲ್ಲಾಮುತ್ತಿ ರಮೇಶ್, ಹಿರಿಯೂರಿನಾ ಪೌರ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ರಮೇಶ, ಜನಾರ್ದನ್, ದುರುಗೇಶ್, ಕಾಲಚಟ್ಟಿ ಕೃಷ್ಣಪ್ಪ, ಜಿಂಕಲ್ ನಾಗೇಶ್, ಆಟೋ ಚೌಡಪ್ಪ ಇನ್ನೂ ಮುಂತಾದವರು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ ಬಿ. ಸಾಲುಮನೆ ಕೂಡ್ಲಿಗಿ.