ಶ್ರೀಮಾತೆಯವರ ವ್ಯವಹಾರ ಕೌಶಲ ಅದ್ಭುತವಾದದ್ದು – ಶ್ರೀಮತಿ ಜಿ.ಯಶೋಧಾ ಪ್ರಕಾಶ್ ಅಭಿಪ್ರಾಯ.
ಚಳ್ಳಕೆರೆ ಸ.04

ಶ್ರೀಮಾತೆ ಶ್ರೀಶಾರದಾದೇವಿಯವರ ವ್ಯವಹಾರ ಕೌಶಲ ಅದ್ಭುತವಾದದ್ದು ಎಂದು ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ತಿಳಿಸಿದರು.

ಶಿವ ನಗರದ ತಮ್ಮ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ ಅವರು ಮಾತನಾಡಿದರು.

ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ “ಶ್ರೀದೇವಿಸ್ತುತಿ” ಪಾರಾಯಣ ಮತ್ತು “ಏಕಾದಶಿ”ಯ ಪ್ರಯುಕ್ತ ಶ್ರೀರಾಮನಾಮ ಸಂಕೀರ್ತನೆ ನಡೆಯಿತು.

ಸತ್ಸಂಗ ಸಭೆಯಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ರಂಗಮ್ಮ ಗುಂಡಲ, ಹೆಚ್.ಲಕ್ಷ್ಮೀದೇವಮ್ಮ, ಯತೀಶ್.ಎಂ ಸಿದ್ದಾಪುರ, ಉಷಾ ಶ್ರೀನಿವಾಸ್, ಕೆ.ಎಸ್ ವೀಣಾ, ಸಂಗೀತ ವಸಂತಕುಮಾರ್, ಶೈಲಜ ಶ್ರೀನಿವಾಸ್, ಕೃಷ್ಣವೇಣಿ ವೆಂಕಟೇಶ್, ಜಯಶೀಲಮ್ಮ, ಭ್ರಮರಂಭಾ ಮಂಜುನಾಥ, ವಿಜಯಲಕ್ಷ್ಮೀ ರಾಮರೆಡ್ಡಿ, ನಾಗರತ್ನಮ್ಮ ಪಾಲ್ಗೊಂಡಿದ್ದರು.