ಜು. 25 & 26 ರಂದು ಮಹಾ ವಿದ್ಯಾಲಯದಯಕ್ಕೆ ನ್ಯಾಕ್ ಸಮಿತಿ ಆಗಮನ – ಡಾ, ಮಹಾಂತೇಶ ಕಡಪಟ್ಟಿ.
ಹುನಗುಂದ ಜು.22

ಪಟ್ಟಣದ ವಿ.ಎಂ.ಎಸ್.ಆರ್. ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್.ಬೆಳ್ಳಿಹಾಳ ವಾಣಿಜ್ಯ ಮಹಾ ವಿದ್ಯಾಲಯಕ್ಕೆ ಜು. ೨೫ ಮತ್ತು ೨೬ ರಂದು ಎರಡು ದಿನ ಕಾಲ ೪ ನೆಯ ಸುತ್ತಿನ ರಾಷ್ಟೀಯ ಮೌಲ್ಯ ಮಾಪನ ಮತ್ತು ಮಾನ್ಯತೆ ಸಮಿತಿ (ನ್ಯಾಕ್) ಆಗಮಿಸಲಿದೆ ಎಂದು ವಿ.ಮ.ಸಂಘದ ಗೌರವ ಕಾರ್ಯದರ್ಶಿ ಡಾ.ಮಹಾಂತೇಶ ಕಡಪಟ್ಟಿ ಹೇಳಿದರು.ಪಟ್ಟಣದ ವಿ.ಎಂ.ಎಸ್.ಆರ್. ವಸ್ತ್ರದ ಕಲಾ, ವಿಜ್ಷಾನ ಹಾಗೂ ವಿ.ಎಸ್. ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯ ಕಾರ್ಯಾಲಯದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಕ್ ಸಮಿತಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪಠ್ಯೆ ಮತ್ತು ಪಠ್ಯೇತರ ಚಟುವಟಿಕೆಗಳ ಬಗ್ಗೆ ಇಲ್ಲೀನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಸಕಲ ಸಿದ್ದತೆಯನ್ನು ಮಾಡಿ ಕೊಳ್ಳಲಾಗಿದೆ. ಅದರ ಜೊತೆಗೆ ಅಂದು ಮಹಾ ವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು ಮತ್ತು ವಿಶ್ರಾಂತ ಪ್ರಾಧ್ಯಾಪಕರು ಆಗಮಿಸಲಿದ್ದು. ಜು.೨೫ ರಂದು ಗುರುವಾರ ಮಧ್ಯಾಹ್ನ ೧.೩೦ ಗಂಟೆಗೆ ಹಳೆಯ ವಿದ್ಯಾರ್ಥಿಗಳು ಮತ್ತು ಸಧ್ಯ ವಿದ್ಯಾರ್ಥಿಗಳ ನಡುವೆ ಸಂವಾದ ಕಾರ್ಯಕ್ರಮ ಜರುಗಲಿದೆ. ಮಹಾ ವಿದ್ಯಾಲಯಕ್ಕೆ ಆಗಮಿಸಿದ ನ್ಯಾಕ್ ಸಮಿತಿ ಎರಡು ದಿನಗಳ ಕಾಲ ಕಾಲೇಜಿನ ಪಠ್ಯೆ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಪರಿಶೀಲಿಸಿ ನಂತರ ಶ್ರೇಣಿಯನ್ನು ನೀಡಲಿದ್ದು. ಈಗಾಗಲೇ ನಮ್ಮ ಮಹಾ ವಿದ್ಯಾಲಯಕ್ಕೆ ನ್ಯಾಕ್ ಸಮಿತಿ ನಾಲ್ಕನೆಯ ಬಾರಿ ಆಗಮಿಸುತ್ತಿದ್ದು. ಈ ಮೊದಲು ೨೦೦೪ ರಲ್ಲಿ ಬಿ+ ಶ್ರೇಣಿ, ೨೦೧೧ರಲ್ಲಿ ಬಿ ಶ್ರೇಣಿ, ೨೦೧೭ ರಲ್ಲಿ ಬಿ++ ಶ್ರೇಣಿ ಬಂದಿದೆ. ಈ ಬಾರಿ ಇನ್ನೂ ಹೆಚ್ಚಿನ ಶ್ರೇಣಿ ಸಿಗುವ ನಿರೀಕ್ಷೆ ಯಲ್ಲಿದ್ದೇವೆ ಎಂದರು.ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಅರಣೋದಯ ದುದ್ಗಿ, ರವಿ ಹುಚನೂರ, ಬಸವರಾಜ ಕೆಂದೂರ,ರಾಚಪ್ಪ ರಾಜಮನಿ, ಎಂ.ಎಸ್. ಮಠ, ಮಹಾಂತೇಶ ಕತ್ತಿ,ಡಾ.ಎಸ್.ಎಚ್.ಮುದಗಲ್ಲ,ಪ್ರಾಚಾರ್ಯ ಎಸ್.ಕೆ.ಮಠ,ಡಾ.ಎಸ್.ಆರ್.ಗೋಲಗೊಂಡ,ದೈಹಿಕ ನಿರ್ದೇಶಕರು ಲೆಪ್ಟಿನೆಂಟ್ ಎಸ್.ಬಿ.ಚಳಗೇರಿ ಸೇರಿದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ ಎಂ ಬಂಡರಗಲ್ಲ ಹುನಗುಂದ.