ಮಂತ್ರ ದೀಕ್ಷೆ ಯಿಂದ ಆಧ್ಯಾತ್ಮಿಕ ಉನ್ನತಿ – ಶ್ರೀಮತಿ ಜಿ.ಯಶೋಧಾ ಪ್ರಕಾಶ್ ಅಭಿಪ್ರಾಯ.
ಚಳ್ಳಕೆರೆ ನ.14

ಸಮರ್ಥ ಸದ್ಗುರುವಿನಿಂದ ಮಂತ್ರದೀಕ್ಷೆ ಪಡೆಯುವುದರಿಂದ ಆಧ್ಯಾತ್ಮಿಕ ಉನ್ನತಿ ಉಂಟಾಗುತ್ತದೆ ಎಂದು ಚಳ್ಳಕೆರೆಯ ಶಿವನ ಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ತಿಳಿಸಿದರು.
ಶಿವನ ಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ ಮಾತನಾಡುತ್ತಿದ್ದರು. ಶ್ರೀಮಾತೆಯವರು ಬೇರೆಯವರು ನೀಡಿದ ವಸ್ತುಗಳನ್ನು ಉಪಯೋಗಿಸಿ ಅದರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದರು ಎಂದರು.

ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿಸ್ತುತಿ ಪಠಣ , ವಿಶೇಷ ಭಜನೆ ಮತ್ತು ಶ್ರೀಮತಿ ದ್ರಾಕ್ಷಾಯಣಿ ವಿಜಯೇಂದ್ರ ಅವರಿಂದ ಬಿಲ್ವಪತ್ರೆಯ ಕುರಿತ ಭಜನಾ ಕಾರ್ಯಕ್ರಮ ನಡೆಯಿತು.
ಸತ್ಸಂಗ ಸಭೆಯಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಲೀಲಾವತಿ, ರತ್ನಮ್ಮ, ಸೌಮ್ಯ ಪ್ರಸಾದ್, ವಿಜಯಲಕ್ಷ್ಮೀ, ನಾಗರತ್ನಮ್ಮ, ಶಾರದಾಮ್ಮ, ಗೀತಾಲಕ್ಷ್ಮೀ, ವೀರಮ್ಮ, ಸಂಗೀತ, ರಶ್ಮಿ ವಸಂತ,ಶೈಲಜ, ಉಷಾ ಶ್ರೀನಿವಾಸ್, ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ, ಜಯಶೀಲಮ್ಮ, ಜಯಮ್ಮ,ಸುಧಾಮಣಿ, ಯತೀಶ್ ಎಂ ಸಿದ್ದಾಪುರ ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

