ಕಾಳಾಪುರ ಕ್ಯಾಂಪ್ ಶಾಲೆಯಲ್ಲಿ ನೂತನವಾಗಿ – ಎಸ್.ಡಿ.ಎಂ.ಸಿ ಸಮಿತಿ ರಚಿಸಲಾಯಿತು.
ಕಾಳಾಪುರ ಜು.23

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕಾಳಾಪುರದಲ್ಲಿ ದಿನಾಂಕ 22-07-2024 ರಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಳಾಪುರ ಕ್ಯಾಂಪ್ ಶಾಲೆಯಲ್ಲಿ ನೂತನ ಎಸ್.ಡಿ.ಎಂ.ಸಿ ರಚನೆ ಮಾಡಲಾಯಿತು.ಎಸ್.ಡಿ.ಎಂ.ಸಿಯ ಅಧ್ಯಕ್ಷರಾಗಿ ಶ್ರೀ ಮಂಜಪ್ಪ ಉಪಾಧ್ಯಕ್ಷರಾಗಿ ಶ್ರೀಮತಿ ಮಂಗಳಮ್ಮ ರವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬಿಆರ್‌ಪಿಗಳಾದ ರವೀಂದ್ರನಾಥ್ ಹಾಗೂ ಸಿ ಆರ್ ಪಿ ಗಳಾದ ಕೊಟ್ರೇಶ್ ಕಾಳಾಪುರ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಮತ್ತು ಕಾಳಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಿ ಸುರೇಶ್ ಹಾಗೂ ಎಸ್.ಡಿ.ಎಂ.ಸಿ ಸದಸ್ಯ ಪೂಜಾರ್ ಮಂಜುನಾಥ್ ಹಾಗೂ ರಿಪೋರ್ಟ್ ವಾರ ಪತ್ರಿಕೆಯ ವರದಿಗಾರರಾದ ಪಿ ಶ್ರೀಕಾಂತ್ ಮತ್ತು ಎಸ್.ಡಿ.ಎಂ.ಸಿ ಯ ಸರ್ವ ಸದಸ್ಯರು ಹಾಗೂ ಸಮಸ್ತ ಪೋಷಕ ವರ್ಗದವರು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ.ಕೊಟ್ಟೂರು.