ಕಾಲಿನಿಂದಲೇ ಹಕ್ಕು ಚಲಾಯಿಸಿದ ವಿಶೇಷ ಚೇತನ – ಮಹಿಳೆ ಲಕ್ಷ್ಮೀದೇವಿ.

ಗುಂಡು ಮುಣುಗು ಮೇ.08

ಕೂಡ್ಲಿಗಿ ತಾಲೂಕಿನ ಗುಂಡುಮುಣುಗು ಗ್ರಾಮದ ಮತಗಟ್ಟೆ ಸಂಖ್ಯೆ 122 ರಲ್ಲಿ ಎರಡೂ ಕೈಗಳಿಲ್ಲದ ವಿಶೇಷ ಚೇತನರಾದ ಶ್ರೀ ಲಕ್ಷ್ಮೀದೇವಿ ತನ್ನ ಕಾಲಿನಿಂದ ಮತ ಹಕ್ಕು ಚಲಾಯಿಸಿ ಗಮನ ಸೆಳೆದರು. ಪ್ರತಿ ಚುನಾವಣೆಯಲ್ಲೂ ಯಾರ ಸಹಾಯವೂ ಇಲ್ಲದೆ ಲಕ್ಷ್ಮೀದೇವಿ ಮತದಾನ ಮಾಡುವುದು ಮಾತ್ರ ತಪ್ಪುವುದಿಲ್ಲ.ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ಮತದಾನ ಜಾಗೃತಿ ಕಾರ್ಯಕ್ರಮದ ರಾಯಭಾರಿಯಾಗಿ ಜಿಲ್ಲಾಡಳಿತ ಆಯ್ಕೆ ಮಾಡಿತ್ತು. ಈ ಬಾರಿ ಕೂಡ ಅಖಂಡ ಬಳ್ಳಾರಿ-ವಿಜಯನಗರ ಜಿಲ್ಲೆಯ ಲೋಕಸಭಾ ಚುನಾವಣೆಯ ಮತದಾನ ಜಾಗೃತಿ ಜಿಲ್ಲಾ ರಾಯಭಾರಿಯಾಗಿ ಆಯ್ಕೆಯಾಗಿದ್ದು, ಜಿಲ್ಲೆಯ ಎಲ್ಲಾ ತಾಲೂಕಿನ ವಾರು ಸುತ್ತಾಡಿ ಮತದಾನ ನಮ್ಮ ಸಂವಿಧಾನ ಬದ್ಧ ಹಕ್ಕು ಅದನ್ನು ತಪ್ಪದೆ ಎಲ್ಲರೂ ಚಲಾಯಿಸಿ. ಭಾರತ ದೇಶವು ಜಗತ್ತಿನಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ದೇಶವಾಗಿದೆ. ದೇಶದ ಉಜ್ವಲ ಭವಿಷ್ಯಕ್ಕೆ ಮತದಾನ ಕೂಡ ಅಷ್ಟೇ ಮುಖ್ಯ. ಪ್ರಜಾಪ್ರಭುತ್ವದ ರಾಯಭಾರಿಯಾದ ಚುನಾವಣೆಯಲ್ಲಿ ,18 ವರ್ಷ ತುಂಬಿದ ಅರ್ಹ ಮತದಾರರೆಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. ನನ್ನೊಬ್ಬನ ಮತದಿಂದ ಏನಾಗುತ್ತದೆ ಎಂಬ ಅಸಡ್ಡೆ ಭಾವ ಯಾರಲ್ಲೂ ಬರಕೂಡದು. ದೇಶದ ಭವಿಷ್ಯ ನಿರ್ಮಾಣವಾಗುವುದೇ ಪ್ರತಿಯೊಬ್ಬರ ಮತದಾನ ದಿಂದ ಮಾತ್ರ ಎಂಬುವುದನ್ನು ಅರಿತು. ನನಗೂ ಕೈಗಳಿಲ್ಲ ಎಂದು ಮತದಾನದಿಂದ ಹಿಂದೆ ಸರಿದು ಮನೆಯಲ್ಲೇ ಕೂರದೆ ಮತಗಟ್ಟೆಯತ್ತ ಹೆಜ್ಜೆ ಹಾಕಿದ ಲಕ್ಷ್ಮೀದೇವಿ ಅವರು, ಮತಗಟ್ಟೆಯಲ್ಲಿ ಉತ್ಸಾಹದಿಂದ ತನ್ನ ಗುರುತಿನ ಚೀಟಿ ತೋರಿಸಿದರು. ಕಾಲಿನ ಬೆರಳಿಗೆ ಮತಗಟ್ಟೆ ಅಧಿಕಾರಿಗಳು ಶಾಹಿ ಹಾಕಿದ ಬಳಿಕ, ಕಾಲಿನಿಂದಲೇ ದಾಖಲಾತಿ ಪುಸ್ತಕಕ್ಕೆ ಸಹಿ ಹಾಕಿದರು. ಕಾಲಿನಿಂದಲೇ ಮತ ಯಂತ್ರದ ಗುಂಡಿ ಒತ್ತುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು.”ತಾನು ಕಲಿತಳು; ಇತರರನ್ನು ಬೆಳೆಸಿದಳು” ಎರಡೂ ಕೈಗಳಿಲ್ಲದಿದ್ದರೂ ಬಿ.ಇಡಿ ಶಿಕ್ಷಣ ಪೂರೈಸಿ ಶಿಕ್ಷಕಿಯಾಗುವ ಕನಸು ಹೊತ್ತಿದ್ದಳು, ಸ್ಥಳೀಯ ಶಾಲೆಯಲ್ಲಿ ಶಿಕ್ಷಕಿಯಾಗಿಯೂ ಕೆಲಸ ನಿರ್ವಹಿಸಿದ್ದಾರೆ, ಶಾಲೆಯ ತರಗತಿಯಲ್ಲಿ ಬೋರ್ಡ್ ಮೇಲೆ ತನ್ನ ಕಾಲಿನಿಂದಲೇ ಅಕ್ಷರಗಳನ್ನು ಬರೆದು ಪಾಠ ಮಾಡುವುದು, ಅಕ್ಷರಗಳನ್ನು ಡೆಸ್ಟರ್ ನಿಂದ ‌ಒರೆಸುತ್ತಾಳೆ,‌ ಮಕ್ಕಳ ಪಾಲಿಗೆ ಲಕ್ಷ್ಮಿ ದೇವಿ ಟೀಚರ್ ಅಂದರೆ ಸ್ಪೂರ್ತಿ ಹಾಗೂ ಮಾರ್ಗದರ್ಶಿ. ಸಮಾಜಕ್ಕೂ ಇಂಥ ಲಕ್ಷ್ಮಿ ದೇವಿ ಟೀಚರ್ ಗಳೇ ಜೀವನಕ್ಕೊಂದು ಮುನ್ನಡೆಯುವ ದಾರಿದೀಪ.”ಮನೆಯವರಿಗೆ ನೆರವು” ತನ್ನ ಮನೆಯಲ್ಲಿ ಕಾಲಿನಿಂದ ಕಸ ಗುಡಿಸುವುದು, ರಂಗೋಲಿ ಹಾಕುವುದು ಸೇರಿ ತರಕಾರಿಯನ್ನು ಕಟ್ ಮಾಡಿ ಕೊಡುವ ಮೂಲಕ ಮನೆಯವರಿಗೂ ನೆರವಾಗುತ್ತಾರೆ ಲಕ್ಷ್ಮಿ ದೇವಿ ಇವರ ಸ್ವಾಭಿಮಾನದ ಸ್ವಾವಲಂಭಿತನಕ್ಕೆ ಹಾಗೂ ಆದರ್ಶ ವ್ಯಕ್ತಿತ್ವಕ್ಕೆ, ಸಮಸ್ತ ನಾಡಿನ ಜನತೆಯನ್ನು ಗಮನ ಸೆಳೆಯುತ್ತಿದ್ದಾರೆ.

ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button