ತಂದೆಯಂದಿರ ದಿನದ ವಿಶೇಷ “ಅಪ್ಪ”…..

ಜೂನ್ 16 ರಂದು ವಿಶ್ವ ಅಪ್ಪಂದಿರ ದಿನ. ಅಪ್ಪ ಐ ಲವ್ ಯೂ ಅಪ್ಪ. ಫಾದರ್ಸ್ ಡೇ ದಿನದ ಅರ್ಥ ಮತ್ತು ತಂದೆಯ ಮಹತ್ವವನ್ನು ತಿಳಿದು ಕೊಳ್ಳಬೇಕು. ಅಪ್ಪ ಅಮ್ಮ ದೇವರ ಸಮಾನ. ಅಪ್ಪ ಎಂದರೆ ಬೆಳಕು. ಅಪ್ಜನಿಂದಲೇ ಈ ಬದುಕು.. ಅಪ್ಪನ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ತಂದೆಯ ಸ್ಥಾನ ಮತ್ತು ಅಪ್ಪ ಅಮ್ಮನ ಪ್ರೀತಿ ಅತ್ಯ ಮೂಲ್ಯವಾದದ್ದು. ನಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕುವರು ಅಪ್ಪ. ಅಂತಹ ತಂದೆ ತಾಯಿಗೆ ನಾವು ಯಾವಗಲೂ ಗೌರವದಿಂದ ಕಾಣಬೇಕು. ಅದು ನಮ್ಮ ಕರ್ತವ್ಯ ಕೂಡ. ಅಪ್ಪ ನೀ ದೇವರು ಈ ಜಗವೆಲ್ಲಾ ನೀನೆ ಅಪ್ಪ. ಅಪ್ಪ ಎಂಬ ಎರಡಕ್ಷರ ಪವಿತ್ರವಾದ ಸಂಕೇತ. ಹೌದು ಅಪ್ಪ ಅಮ್ಮ ದೇವರ ಸ್ವರೂಪ. ನಾವು ದೇವರನ್ನು ಎಷ್ಟು ಭಯ ಭಕ್ತಿಯಿಂದ ಗೌರವದಿಂದ ಪೂಜಿಸಿ ಆರಾಧಿಸುತ್ತೇವೆಯೋ ಹಾಗೇಯೇ ಅಮ್ಮ ಅಪ್ಪನ ಭಯ ಭಕ್ತಿಯಿಂದ ಗೌರವದಿಂದ ನೋಡಿ ಕೊಳ್ಳಬೇಕು. ಅಪ್ಪ ಇಲ್ಲದ ಪ್ರಪಂಚವಿಲ್ಲ. ಎಲ್ಲಾ ಮಕ್ಕಳಿಗೂ ತಂದೆ ತಾಯಿಯ ಆಶೀರ್ವಾದ ಬೇಕು ಅವರಿಂದಲೇ ನಾವು. ತಾಯಿ ಮೊದಲ ಗುರು ಮನೆಯ ಮೊದಲ ಪಾಠ ಶಾಲೆ ತನ್ನ ಮಕ್ಕಳಿಗೆ ಮೊದಲನೆಯ ಶಿಕ್ಷಕಿ ತಾಯಿ. ಮಗು ತನ್ನ ಜೀವನದಲ್ಲಿ ಹೇಳುವ ಮೊದಲ ಪದವೂ ಅಮ್ಮ ಅಪ್ಪ ಎಲ್ಲಾ ಮಕ್ಕಳ ಪಾಲಿಗೆ ಅಪ್ಪನೇ ಮೊದಲ ಹೀರೋ. ಅಪ್ಪ ಮಗುವಿನ ತೋರು ಬೆರಳು ಹಿಡಿದು ತನ್ನ ಸುತ್ತ ಮುತ್ತ ಇಡೀ ಜಗತ್ತನೇ ತೋರಿಸುತ್ತಾರೆ. ಅಪ್ಪ ಅಂದರೆ ಜಗತ್ತು ಅಪ್ಪ ಅಂದರೆ ದೇವರು ಅಪ್ಪ ಅಂದರೆ ಶಕ್ತಿ ಅಪ್ಪ ಅಂದರೆ ಆಕಾಶ ಅಪ್ಪ ಅಂದರೆ ಸ್ನೇಹಿತ ಅಪ್ಪ ಅಂದರೆ ಪಪ್ರಂಚ ಅಪ್ಪ ಅಂದರೆ ಪ್ರೀತಿ ಅಪ್ಪ ಅಂದರೆ ಬೆಳಕು ಅಪ್ಪ ಅಂದರೆ ಸಂತೋಷ ಹೀಗೆ ಎಷ್ಟು ಅರ್ಥಗಳಿವೆ. ಅಪ್ಪ ಮಕ್ಕಳನ್ನು ಬೈಯುವುದಕ್ಕೆ ಮುಖ್ಯ ಕಾರಣ ಮಕ್ಕಳು ಯಾವ ತಪ್ವೂ ಮಾಡದಿರಲಿ. ನಮಗೆ ಯಾವ ಕೆಡಕು ಆಗಬಾರದು ಅಂತ ಎಷ್ಟೇ ಬೈದ್ರೂ ಮನಸ್ಸಲಿ ಬೆಟ್ಚದಷ್ಟು ಪ್ರೀತಿ ಇರುತ್ತದೆ. ತನಗೆ ಎಷ್ಟೇ ಕಷ್ಟ ನೋವು ಬಂದ್ರು ತನ್ನ ಮಕ್ಕಳು ನಮ್ಮ ಕುಟುಂಬ ಖೂಷಿಯಾಗಿ ಸಂತೋಷವಾಗಿ ಇರಬೇಕು ಎಂದು ಬಯಸುವರು ಅಪ್ಪ. ಮಕ್ಕಳು ಕೇಳಿದ್ದನ್ನೆಲ್ಲಾ ಕೊಡಿಸೋಕ್ ಆಗದೇ ಇದ್ರೂ ಕೈಲಾಗಿದ್ದನ್ನ ಕೊಡಿಸುವರು ಅಪ್ಪ. ಬೇಡಿದಷ್ಟು ಕೊಡದೇ ಹೋದ್ರು ಸಲ್ಪವಾದರು ಕೊಡಿಸುವರು ತನ್ನಿಂದ ಸಾಧಿಸಕ್ಕಾಗದೇ ಇರೋದನ್ನ ತನ್ನ ಮಕ್ಕಳಿಂದ ಮಾಡಿಸೋದಕ್ಕೆ ಪ್ರಯತ್ನ ಮಾಡುವರು. ಎಷ್ಟೇ ಕಷ್ಟಗಳು ನೋವುಗಳು ಬಂದರು ತನ್ನಲ್ಲಿಟ್ಟು ಕೊಂಡು ಮಕ್ಕಳನ್ನು ಪ್ರೀತಿ ಮಾಡುವರು ಅಪ್ಪ. ಅಪ್ಪ ಯಾವಾಗಲೂ ತನ್ನ ದುಃಖಗಳನ್ನು ಮರೆತು ಮಕ್ಕಳ ಜೀವನ ಸಂತೋಷದ ಬಗ್ಗೆ ಯೋಚಿಸುತ್ತಾರೆ. ಮಕ್ಕಳು ಸಂತೋಷವಾಗಿರುವುದು ನೋಡಿ ಅವರು ಸಂತೋಷವಾಗಿರುತ್ತಾರೆ. ತಂದೆ ತಾಯಿಯ ಋಣವನ್ನು ನಾವು ಎಂದಿಗೂ ತೀರಿಸಲು ಸಾಧ್ಯವಿಲ್ಲ ಆದ್ದರಿಂದ ನಾವು ನಮ್ಮ ತಂದೆ ತಾಯಿಗೆ ಸಾಧ್ಯವಾದಷ್ಟು ಸೇವೆ ಸಲ್ಲಿಸಬೇಕು ನಮ್ಮ ವ್ಯಕ್ತಿತ್ವವನ್ನು ಹೆಚ್ಚಿಸಲು ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟ ಜೀವನದ ಪ್ರತಿಯೊಂದು ಸಂತೋಷವನ್ನು ನಾವು ತಾಯಿ ತಂದೆಗೇ ನೀಡಬೇಕು. ಅಪ್ಪ ಐ ಲವ್ ಯೂ…!
– ವಿ.ಎಂ.ಎಸ್.ಗೋಪಿ ✍️
ಲೇಖಕರು, ಸಾಹಿತಿಗಳು
ಬೆಂಗಳೂರು.
