ಭವಿಷ್ಯಕ್ಕಾಗಿ ಪರಿಸರ ಕಾಳಜಿ ಮುಖ್ಯ – ವನಸಿರಿ ಅಮರೇಗೌಡ ಮಲ್ಲಾಪುರ.
ಸಿಂಧನೂರು ಮಾ.02

ನಮ್ಮ ಮುಂದಿನ ಪೀಳಿಗೆಯ ಆರೋಗ್ಯಕರ ಭವಿಷ್ಯಕ್ಕೆ ಪರಿಸರ ಕಾಳಜಿ ಪ್ರತಿಯೊಬ್ಬರಲ್ಲೂ ಬರಬೇಕು. ಪರಿಸರ ಸಂರಕ್ಷಣೆ ಪ್ರಥಮ ಆದ್ಯತೆ ಯಾಗಬೇಕು ಎಂದು ವನಸಿರಿ ಫೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಹೇಳಿದರು.ನಗರದ TBP ಕ್ಯಾಂಪ್ ಶಾಸಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಕೋ ಕ್ಲಬ್ ಹಾಗೂ ವನಸಿರಿ ಪೌಂಡೇಷನ್ ವತಿಯಿಂದ ಅಮರ ಶ್ರೀ ಆಲದ ಮರದ ಹತ್ತಿರ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಸರ ಸಂರಕ್ಷಿಸಿ:- ಪರಿಸರ ದಿನೇ ದಿನೆ ಮಲೀನವಾಗುತ್ತಿದೆ,
ಶುದ್ಧ ಗಾಳಿಯು ಸಿಗುತ್ತಿಲ್ಲ, ಪರಿಸರ ಮಾಲಿನ್ಯದಿಂದ ಹೊಸ ಹೊಸ ರೋಗಗಳು ಸೃಷ್ಟಿಯಾಗುತ್ತಿವೆ. ಇಳಿ ವಯಸ್ಸಿನಲ್ಲಿ ಸಾವು, ನೋವುಗಳು ಸಂಭವಿಸುತ್ತಿವೆ. ಇದಕ್ಕೆಲ್ಲ ಪರಿಸರದ ಅಸಮತೋಲನವೇ ಕಾರಣವಾಗಿದೆ. ಆದ್ದರಿಂದ ಯುವಕರು,ಮಕ್ಕಳು ಪರಿಸರ ರಕ್ಷಣೆ ಮಾಡಬೇಕು. ಗಿಡಗಳನ್ನು ಬೆಳೆಸಬೇಕು, ಕಡಿಯಬಾರದು ಎಂದರು.ಇದೇ ವೇಳೆ ಅಮರ ಶ್ರೀ ಆಲದ ಮರದ ಉದ್ಯಾನವನಕ್ಕೆ ಮತ್ತು ಸಂಚಾರಿ ಪೊಲೀಸ್ ಠಾಣೆಯ ಆವರಣಕ್ಕೆ ಭೇಟಿ ನೀಡಿ ವನಸಿರಿ ಪೌಂಡೇಷನ್ ವತಿಯಿಂದ ನೆಟ್ಟ ಸಸಿಗಳನ್ನು ವೀಕ್ಷಣೆ ಮಾಡಿದರು.ಈ ಸಂಧರ್ಭದಲ್ಲಿ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು, ಸಿಬ್ಬಂದಿಗಳು, TBP ಕ್ಯಾಂಪ್ ಶಾಲೆಯ ಮುಖ್ಯ ಗುರುಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.