ಪಾಳು ಬಿದ್ದಿರುವ ಕೃಷಿ ಮಾರುಕಟ್ಟೆಯನ್ನು ಆದಷ್ಟು ಬೇಗನೆ ದುರಸ್ತಿ ಗೊಳಿಸಿರಿ – ಕಲಕೇರಿ ರೈತರಿಂದ ಆಗ್ರಹ.
ಕಲಕೇರಿ ಜು.26

ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ 2007. ಅಡಿಗಲ್ಲು ಸಮಾರಂಭ ಆಗಿತ್ತು. 2015 ವರೆಗೆ ಕೃಷಿ ಮಾರುಕಟ್ಟೆ ಪ್ರಾರಂಭ ಇತ್ತು. 2015 ರಿಂದ ಇಲ್ಲಿವರೆಗೂ ಕೃಷಿ ಮಾರುಕಟ್ಟೆ ಹಾಳು ಬಿದ್ದ ಕೃಷಿ ಮಾರುಕಟ್ಟೆ ಅಂದರೆ 9 ವರ್ಷಗಳ ಕಾಲ ಕಲಕೇರಿ ಕೃಷಿ ಮಾರುಕಟ್ಟೆ ಹಂದಿಗಳ ತಾಣ ಆಗಿದೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಬೇಗನೆ ಎಚ್ಚೇತ್ತು ಕೊಳ್ಳಬೇಕು ಎಂದು ಗ್ರಾಮಸ್ಥರು ತಿಳಿಸಿದರು.ಕಲಕೇರಿ ಕೃಷಿ ಮಾರುಕಟ್ಟೆ ಹಂದಿಗಳ ತಾಣ ತಾಳಿಕೋಟಿ ತಾಲೂಕಿನ ಕಲಕೇರಿ ಕೃಷಿ ಮಾರುಕಟ್ಟೆ ಉದ್ಘಾಟನೆ ಮಾಡಿ ಸುಮಾರು ದಿನಗಳು ಕಳೆದರು ಅದಕ್ಕೆ ಒಂದು ಮುಕ್ತಿ ಸಿಗಲಿಲ್ಲ.

ಅಲ್ಲಿಯ ಪರಸ್ಥಿತಿ ನೋಡಿದರೆ ಹಂದಿಗಳ ತಾಣ ಆಗಿದೆ ನಿಂತ ನೀರು ಗಬ್ಬು ವಾಸನೆ ಸೊಳ್ಳೆಗಳ ಕಾಟ ಡೆಂಗ್ಯೂ ಜ್ವರ ಬರುವ ಸ್ಥಿತಿ ಆಗಿದೆ ಸುತ್ತ ಮುತ್ತ ಮನೆಯವರು ಹಿಡಿ ಶಾಪ್ ಹಾಕುವ ಪರಸ್ಥಿತಿ ಬಂದಿದೆ. ಖಾಲಿ ಬಿದ್ದ ಕೃಷಿ ಮಾರುಕಟ್ಟೆಗೆ ಅಲ್ಲಿಯ ಸುತ್ತ ಮುತ್ತಲಿನ ಜನರು ಧನಗಳ ಕಟ್ಟಲು ಕೊಟ್ಟಿಗೆ ಆಗಿದೆ. ಅಲ್ಲೇ ಶೌಚಾಲಯ ಮಾಡುವುದು ಮೂತ್ರ ಮಾಡುವುದು. ಕೃಷಿ ಮಾರುಕಟ್ಟೆ ನೋಡಲು ಹೋದರೆ ಗಬ್ಬು ವಾಸನೆ ಕಣ್ಣಿನಿಂದ ನೋಡಲು ಸಾಧ್ಯವಿಲ್ಲ ಅಷ್ಟು ದುರ್ವಾಸನೆ ಕಲಕೇರಿ ದೊಡ್ಡ ಗ್ರಾಮ ಸುಮಾರು ಹಳ್ಳಿಗಳು ಬರುತ್ತವೆ.

ಆದರೆ ಸರಕಾರ ಸುಮಾರು ವರ್ಷಗಳ ಕಾಲ ಕಟ್ಟಡ ಮಾಡಿದ ಕೃಷಿ ಮಾರುಕಟ್ಟೆ ಅಲ್ಲಿಂದ ಇಲ್ಲಿವರೆಗೂ ಈ ಕೃಷಿ ಮಾರುಕಟ್ಟೆ ಸುತ್ತ 40 ಹಳ್ಳಿ ಇರುವ ಕಲಕೇರಿ ಗ್ರಾಮದಲ್ಲಿ ಸುಮ್ಮನೆ ಕೃಷಿ ಮಾರುಕಟ್ಟೆ ಇದೆ ಎನ್ನುವುದಕ್ಕೆ ಈ ಗ್ರಾಮದಲ್ಲಿ ಕೃಷಿ ಮಾರುಕಟ್ಟೆ ಕಟ್ಟಾಗಿದೆ ಆದರೆ ಅಲ್ಲಿ ಕಸದ ತೊಟ್ಟಿ ಹಂದಿಗಳ ತಾಣ ಆಗಿದೆ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಇದರ ಬಗ್ಗೆ ಬೇಗನೆ ಎಚ್ಚೆತ್ತು ಗೊಳ್ಳುಬೇಕು ಇಂಥ ದೊಡ್ಡ ಕಲಕೇರಿ ಗ್ರಾಮದಲ್ಲಿ ಸುಮ್ಮನೆ ಹೆಸರಿಗೆ ಕೃಷಿ ಮಾರುಕಟ್ಟೆ ಕಟ್ಟಡ ಮಾಡಿ ಅಧಿಕಾರಿಗಳು ಸುಣ್ಣ ಹಚ್ಚುವ ಕೆಲಸ ಮಾಡಿದ್ದಾರೆ ಆದ್ದರಿಂದ ಕೃಷಿ ಮಾರುಕಟ್ಟೆಗೆ ಸಂಬಂಧಪಟ್ಟ ಅಧಿಕಾರಿಗಳು ಬೇಗನೆ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಗ್ರಾಮಸ್ಥರ ಆಗ್ರಹ ಆಗಿದೆ.

ಏಕೆ ಅಂದರೆ ಕಲಕೇರಿ ಗ್ರಾಮದ ಸುತ್ತ ಮುತ್ತ 40 ಹಳ್ಳಿ ಜನರು ವ್ಯಾಪಾರ ಮಾಡುವುದಕ್ಕೆ ಕಲಕೇರಿ ಗ್ರಾಮಕ್ಕೆ ಬರುತ್ತಾರೆ ಅವರಿಗೆ ವ್ಯಾಪಾರ ಮಾಡುವುದಕ್ಕೆ ಕಲಕೇರಿಯಲ್ಲಿ ಇರುವ ಕೃಷಿ ಮಾರುಕಟ್ಟೆ ಬೇಗನೆ ಸಂಬಂಧಪಟ್ಟ ಅಧಿಕಾರಿಗಳು ಪ್ರಾರಂಭ ಮಾಡಬೇಕು ಎಂದು ಆಗ್ರಹ ಏಕೆ ಅಂದರೆ ಕಲಕೇರಿ ಗ್ರಾಮದಲ್ಲಿ ಪ್ರತಿ ಗುರುವಾರ ಬೆಳಗ್ಗೆ 6 ಗಂಟೆಯಿಂದ ಸಾಯಂಕಾಲ 5:00 ವರೆಗೂ ದೊಡ್ಡ ಸಂತೆ ನಡೆಯುತ್ತದೆ ಆದ್ದರಿಂದ ಕಲಕೇರಿ ಗ್ರಾಮಸ್ಥರ ಒಂದು ಅನಿಸಿಕೆ ಆಸೆಗಳು ಏನಪ್ಪಾ ಅಂದರೆ ಕಲಕೇರಿ ಗ್ರಾಮದಲ್ಲಿ ಇರುವ ಕೃಷಿ ಮಾರುಕಟ್ಟೆ ಸಂಬಂಧಪಟ್ಟ ಅಧಿಕಾರಿಗಳು ಬೇಗನೆ ಕೃಷಿ ಮಾರುಕಟ್ಟೆ ಪ್ರಾರಂಭ ಮಾಡಿಸಬೇಕೆಂದು ಆಗ್ರಹ.ಹಲವಾರು ಊರಿನ ಗ್ರಾಮಸ್ಥರು . ಕುಮಾರ್ ದೇಸಾಯಿ. ಹಣಮಂತ್ ವಡ್ಡರ್. ಶರಣು ಝಳಕಿ. ಸೋಮಶೇಖರ್ ಸಜ್ಜನ್. ಇನ್ನೂ ಹಲವಾರು ಗ್ರಾಮಸ್ಥರು ಕೃಷಿ ಮಾರುಕಟ್ಟೆ ಬೇಗನೆ ಸ್ವಚ್ಚತಾ ಮಾಡಿ ಪ್ರಾರಂಭ ಆಗುವಂತೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ ಮನಗೂಳಿ ತಾಳಿಕೋಟೆ.