ಗಣ್ಯರ ವಸತಿ ಗೃಹಗಳಲ್ಲಿ ಲಾರ್ವಾ ಸಮೀಕ್ಷೆ – ಆರೋಗ್ಯ ಜಾಗೃತಿ.
ಬಾಗಲಕೋಟೆ ಜು .26

ನವ ನಗರದ ಗಣ್ಯ ಮಾನ್ಯರ ವಸತಿ ಗೃಹಗಳಲ್ಲಿ ಡೆಂಗ್ಯೂ ಈಡೀಜ್ ಇಜಿಪ್ತೆ ಲಾರ್ವಾ ಉತ್ಪತ್ತಿ ತಾಣಗಳ ಸಮೀಕ್ಷೆ ಜಾಗೃತಿ ಆಯೋಜಿಸಲಾಗಿತ್ತು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎಸ್ ಎಸ್ ಅಂಗಡಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಿ ಎಚ್ ಗುಗ್ಯಾಳ ನೆತೃತ್ವದ ತಂಡ ಬಾಗಲಕೋಟೆ ಜಿಲ್ಲಾಧಿಕಾರಿಗಳ, ಅಪರ ಜಿಲ್ಲಾಧಿಕಾರಿಗಳ ವಸತಿ ಗೃಹಗಳ ಆವರಣದಲ್ಲಿ ಡೆಂಗ್ಯೂ ತಡೆಗೆ ಸೊಳ್ಳೆ ಈಡೀಜ್ ಇಜಿಪ್ತೆ ಲಾರ್ವಾ ಉತ್ಪತ್ತಿ ತಾಣಗಳ ಸಮೀಕ್ಷೆ ನಡೆಸಿ ಒಡೆದ ಬಾಟಲ್ ಟೈರ್ ಟ್ಯೂಬ್ ಟೆಂಗಿನ ಚಿಪ್ಪುಕಸ ವಿಲೆವಾರಿ ಮಾಡುವುದು ನೀರಿನ ಸಂಗ್ರಹ ಸ್ವಚ್ಛತೆ ಆದ್ಯತೆ ನೀಡಬೇಕೆಂದು. ಸಿಬ್ಬಂದಿಗಳಿಗೆ ಮುಂಜಾಗ್ರತೆ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು. ಡೆಂಗ್ಯೂ ರೋಗ ತಡೆಗೆ “ಈಡೀಜ್ ಇಜಿಪ್ತೆ” ಲಾರ್ವಾ ಉತ್ಪತ್ತಿ ತಾಣಗಳ ನಿರ್ಮೂಲನೆ ನಮ್ಮ ಗುರಿ ಸಮೀಕ್ಷೆ ಜಾಗೃತಿ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ನಗರ ಸಭೆಯ ಸ್ವಚ್ಛ ಭಾರತ ಅಭಿಯಾನದ ಕಾರ್ಯಕರ್ತರು ಭಾಗವಹಿಸಿದ್ದರು.