ಬಡವರ ಮುಖದಲ್ಲಿ ಮಂದಹಾಸ ಮೂಡಿಸಿದ 2024. ರ ಕೇಂದ್ರ ಬಜೆಟ್.
ಚಿತ್ರದುರ್ಗ ಜು.26

ಶಿವಮೂರ್ತಿ.ಟಿ ಕೋಡಿಹಳ್ಳಿ ನಿರ್ದೇಶಕರು, ಪರಿಶ್ರಮ ಪ್ರೇರಣಾ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಚಿತ್ರದುರ್ಗ.
ಇತ್ತೀಚಿಗೆ ಮಂಡಿಸಿದ ಕೇಂದ್ರ ಸರ್ಕಾರ ದಿಂದ ಬಜೆಟ್ ಮಂಡನೆಯಲ್ಲಿ ಚಿನ್ನದ ಮೇಲಿನ ಸುಂಕ ಕಡಿಮೆ ಮಾಡಿದ್ದು, ಚಿನ್ನದ ಪ್ರಿಯರಿಗೆ ಬಂಪರ್ ಎಂದೇ ಹೇಳಬಹುದು,ಮಕ್ಕಳಿಗಾಗಿ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ನಿರ್ಮಲಾ ಸೀತರಾಮನ್ ಘೋಷಣೆ ಮಾಡಿದ್ದಾರೆ. ಇದರಲ್ಲಿ ನಮ್ಮ ಮಕ್ಕಳಿಗೆ 18 ನೇ. ವಯಸ್ಸಿ ನಿಂದಾನೇ ಪಿಂಚಣಿ ಘೋಷಣೆ ಮಾಡಿ, 70 ವರ್ಷದವರೆಗೂ ಹೂಡಿಕೆ ಮಾಡಬಹುದು. ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಪೋಷಕರು ಮಾಡಬಹುದಾದಂತ ಉಳಿತಾಯದ ಪಿಂಚಣಿ ಯೋಜನೆ ಇದಾಗಿದೆ. ನಿವೃತ್ತಿ ಉಳಿತಾಯ ಹಾಗೂ ದೀರ್ಘಾವಧಿಯ ಆರ್ಥಿಕ ಭದ್ರತೆಯನ್ನು ಉತ್ತೇಜಿಸುವಲ್ಲಿ ಕೇಂದ್ರ ಬಜೆಟ್ ನ ರಾಷ್ಟ್ರೀಯ ಪಿಂಚಣಿ ಯೋಜನೆ ವಾತ್ಸಲ್ಯವು ಶ್ಲಾಘನೀಯ ಯೋಜನೆಯಾಗಿದೆ. ಪೋಷಕರು ತಮ್ಮ ಅಪ್ರಾಪ್ತ ಮಕ್ಕಳಿಗೆ ಎನ್ಪಿಎಸ್ ಖಾತೆಯನ್ನು ತೆರೆಯಲು ಅವಕಾಶ ನೀಡುವ ಮೂಲಕ ಚಿಕ್ಕ ವಯಸ್ಸಿ ನಿಂದಾನೇ ಜವಾಬ್ದಾರಿಯುತ ಹಣಕಾಸು ನಿರ್ವಹಣೆಗೆ ಅಡಿಪಾಯ ಹಾಕಿದಂತೆ ಆಗುತ್ತದೆ. ಇದರಿಂದಾಗಿ ಪ್ರೌಢಾವಸ್ಥೆಗೆ ಬಂದಾಗ ಮಕ್ಕಳ ಉಳಿತಾಯವೂ ಸುಗಮ ವಾಗುತ್ತದೆ ಎಂದರೆ ತಪ್ಪಾಗಲಾರದು, ಇದು ಮಕ್ಕಳ ಶ್ರೇಯೋಭಿವೃದ್ಧಿಗೆ ಪೂರಕವಾದ ಜನಪರ ಬಜೆಟ್ ಇದಾಗಿದೆ.
ವರದಿ:ಶಿವಮೂರ್ತಿ.ಟಿ.ಕೋಡಿಹಳ್ಳಿ.ಚಿತ್ರದುರ್ಗ.