ಮಳೆಗೆ ಮನೆ ಕುಸಿದು ನಾಲ್ವರಿಗೆ ಗಂಭೀರ ಸ್ವರೂಪದ ಗಾಯ, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ – ಗ್ರಾಮಸ್ಥರು ಆಕ್ರೋಶ.
ಅರೆ ಮುರಾಳ ಆ.28





ಮುದ್ದೇಬಿಹಾಳ ತಾಲೂಕಿನ ಅರೆ ಮುರಾಳ ಗ್ರಾಮದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಕಳೆದ ರಾತ್ರಿ ದುಃಖದ ಘಟನೆ ಸಂಭವಿಸಿದೆ. ಮಧ್ಯೆ ರಾತ್ರಿಯ ಹೊತ್ತಿನಲ್ಲಿ ಸುರಿದ ಮಳೆಯಿಂದ ರುದ್ರಪ್ಪ.ಬಂಡಿ ವಡ್ಡರ್ ಅವರ ಮನೆಯೊಂದು ಕುಸಿದು ನಾಲ್ವರು ಕುಟುಂಬದ ಸದಸ್ಯರು ಗಂಭೀರವಾಗಿ ಗಾಯ ಗೊಂಡಿದ್ದಾರೆ. ಗಾಯಾಳುಗಳಲ್ಲಿ ರುದ್ರಪ್ಪ.ಬಂಡಿ ವಡ್ಡರ್, ಮಲ್ಲಮ್ಮ.ಬಂಡಿ ವಡ್ಡರ, ಶಾರದಾ.ಬಂಡಿ ವಡ್ಡರ್, ಹಾಗೂ ಸುಶಾಂತ್.ಬಂಡಿ ವಡ್ಡರ್, ಇದ್ದು ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಪ್ರಾಥಮಿಕ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಿಸಲಾಗಿದೆ. ಕುಟುಂಬದವರು ತಮ್ಮ ಜೀವ ಉಳಿಸಿ ಕೊಂಡಿದ್ದ. ಮನೆಯಲ್ಲಿದ್ದ ಬಹುತೇಕ ಎಲ್ಲಾ ಸಾಮಗ್ರಿಗಳು ದಿನ ಬಳಕೆ ವಸ್ತುಗಳು ಹಾಗೂ ಆಹಾರ ಪದಾರ್ಥಗಳು ಮಣ್ಣು ಪಾಲಾಗಿ ನಾಶವಾಗಿವೆ. ಘಟನೆ ಮಧ್ಯೆ ರಾತ್ರಿ ನಡೆದಿದ್ದರೂ ಬೆಳಿಗ್ಗೆ ವರೆಗೂ ಸ್ಥಳೀಯ ಪಂಚಾಯಿತಿ ಸದಸ್ಯರು ಅಥವಾ ಕಂದಾಯ ಇಲಾಖೆ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದೇ ಇರುವುದು, ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. ಹಾನಿ ಗೊಳಗಾದ ಕುಟುಂಬದವರು ತುರ್ತು ನೆರವಿಗಾಗಿ ಅಂಗಲಾಚುತಿದ್ದರು,

ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದ ಮನಸ್ಥಿತಿಗೆ ಕಾರಣವಾಗಿದೆ. ಇದರ ನಡುವೆ, ಬಿಜೆಪಿ ರೈತ ಮೋರ್ಚಾ ರಾಧ್ಯಕ್ಷರು ಹಾಗೂ ಮಾಜಿ ಶಾಸಕ ಎಸ್.ಎಸ್ ಪಾಟೀಲ್ ನಡಹಳ್ಳಿ ಅವರು ಘಟನಾ ಸ್ಥಳಕ್ಕೆ ಧಾವಿಸಿ ಗಾಯಾಳು ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ತುರ್ತು ನೆರವಿನ ಭಾಗವಾಗಿ ಕುಟುಂಬಕ್ಕೆ ಪಡಿತರ ವಿತರಿಸಿ ಬೆಂಬಲ ನೀಡಿದರು. ಸ್ಥಳೀಯ ಆಡಳಿತದ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿದ ಅವರು “ಜನತೆ ಸಂಕಷ್ಟದಲ್ಲಿದ್ದಾಗ ತಕ್ಷಣ ನೆರವು ನೀಡುವುದು ಸರ್ಕಾರದ ಹೊಣೆಗಾರಿಕೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ತಕ್ಷಣ ಪರಿಹಾರ ಘೋಷಿಸ ಬೇಕಾಗಿದೆ” ಎಂದು ಆಗ್ರಹಿಸಿದರು. ಗ್ರಾಮಸ್ಥರು ಕೂಡ ಒಟ್ಟುಗೂಡಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು, ಹಾನಿಗೆ ಒಳಗಾದ ಕುಟುಂಬಕ್ಕೆ ಸರಕಾರಿ ಪರಿಹಾರ ತಕ್ಷಣ ಲಭ್ಯವಾಗುವಂತೆ ಒತ್ತಾಯಿಸಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ