ಕಲಕೇರಿ ಗ್ರಾಮದ ರೈತನೋರ್ವ 9:00 ಗಂಟೆಯಲ್ಲಿ 18. ಎಕರೆ ಹೊಲವನ್ನು ಗಳೇ ಹೊಡೆದು – ಸಾಧನೆ ಗೈದ ರೈತ.
ಕಲಕೇರಿ ಜು.29

ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ರೈತರಿಂದ ಅದ್ಭುತ ಸಾಧನೆ ಬೆಳಿಗ್ಗೆ ಎಂಟು ಗಂಟೆಯಿಂದ ನಾಲ್ಕು ಗಂಟೆವರೆಗೂ ಎತ್ತುಗಳಿಗೆ ಹಗ್ಗ ಇಲ್ಲದೆ 18 ಎಕರೆ ಭೂಮಿಯಲ್ಲಿ ಗಳೇ ಹೊಡೆದಿದೆ. ಎತ್ತುಗಳ ಮಾಲೀಕರಾದ ದೇವೇಂದ್ರ ಕುದುರೆಕಾರ ಕಲಕೇರಿ ಗ್ರಾಮ ಹತ್ತಿಯ ಹೊಲದಲ್ಲಿ ಬೆಳಗ್ಗೆ 8 ಗಂಟೆಯಿಂದ ಸಾಯಂಕಾಲ 4:00 ವರೆಗೂ ಗಳೇ ಹೊಡೆದಿದೆ. ರೈತ ದೊಡ್ಡ ಸಾಧನೆ ಮಾಡಿದ 9 ತಾಸಿನಲ್ಲಿ 18 ಎಕರೆ ಹೊಲವನ್ನು ಗಳೇ ಹೊಡೆದರು ಇಂಥ ಸಾಧನೆ ನಮ್ಮ ಕಲಕೇರಿ ಗ್ರಾಮದಲ್ಲಿ ರೈತರ ಒಂದು ಸಾಧನೆ ಹೆಮ್ಮೆ ಪಡುವಂತ ವಿಷಯ.

ಸಾಯಂಕಾಲ 5:00 ಯಿಂದ ಎತ್ತುಗಳನ್ನು ಮೆರವಣಿಗೆ ಮಾಡುತ್ತಾ ದೇವಸ್ಥಾನಕ್ಕೆ ಬಂದು ಪೂಜೆಯನ್ನು ಸಲ್ಲಿಸಿದರು , ಗ್ರಾಮ ಪಂಚಾಯಿತಿಯ ಸದಸ್ಯರಾದ ಪರಶುರಾಮ್ ಕುದುರೆ ಕಾರ್. ರೈತ ಮುಖಂಡರಾದ ಬಸಪ್ಪ ಬೈಚಬಾಳ. ರಫೀಕ್ ಬಿಜಾಪುರ್. ಸಂತೋಷ್ ರಕ್ಕಸಗಿ. ಪರಮಣ್ಣ ಕುದುರ್ ಕಾರ್. ಶ್ರೀಶೈಲ ಕುದುರಕಾರ್. ಪ್ರಕಾಶ್ ಕುದುರಕಾರ್. ಹಣಮಂತ್ ಕುದುರೆ ಕಾರ್. ಊರಿನ ರೈತ ಬಾಂಧವರು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ ಮನಗೂಳಿ ತಾಳಿಕೋಟೆ.