ಪ್ರೆಸ್ ಕ್ಲಬ್ ವತಿಯಿಂದ ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಜರುಗಿತು.
ಕಲಕೇರಿ ಅ.02

ತಾಳಿಕೋಟೆ ಪ್ರೆಸ್ ಕ್ಲಬ್ ವತಿಯಿಂದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಕಲಕೇರಿಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಜೆ ಬಿ ಕುಲಕರ್ಣಿ ಇವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ದೊರೆತಿರುವ ಕಾರಣ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ಕಲಕೇರಿಯಲ್ಲಿ ಇಂದು ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಯಿತು. ಸದರಿ ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳಾದ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಜೆ ಬಿ ಕುಲಕರ್ಣಿ ಅವರನ್ನು ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಚಂದ್ರು ಬಡಿಗೇರ್, ಸದಸ್ಯರಾದ ಮಲ್ಲು ನಾವಿ, ಕೆ ಜಿ ಎಸ್ ಶಾಲೆಯ ಮುಖ್ಯ ಗುರುಗಳಾದ ಶ್ರೀ ಎಸ್ ಬಿ ಪಡಶೆಟ್ಟಿ , ಸ್ಥಳೀಯ ಶಾಲೆಯ ಶಿಕ್ಷಕರಾದ ಶ್ರೀ ಸಿ ಡಿ ಮಾದರ್, ಶ್ರೀಮತಿ ಎಸ್ ಟಿ ಕೋಳೂರು,ಜೆ ಕೆ ಬೋವಿ,ನಂದಿನಿ ಸಜ್ಜನ್, ಕುಮಾರಿ ಸುಷ್ಮಾ ಬೇನಾಳ, ಚಾಂದನಿ ಸುಗಂಧಿ ಕಾರ್ಯಕ್ರಮದಲ್ಲಿ ಹಾಜರಿದ್ದರು, ಕಾರ್ಯಕ್ರಮವನ್ನು ಕುರಿತು ಸ್ಥಳೀಯ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಎಸ್ ಎಲ್ ನಾಯ್ಕೋಡಿ ಇಂಥ ಶಿಕ್ಷಕರು 100 ಕ್ಕೆ ಒಬ್ಬರು ಎಂದ ಅವರು ಮನೆಯಲ್ಲಿರೋದು ಕೇವಲ ನಾಲ್ಕು ಗಂಟೆ ಮಾತ್ರ 18 ಗಂಟೆಗಳ ಕಾಲ ಶಾಲೆಯ ಬಗ್ಗೆ ಬಹಳ ಕಾಳಜಿ ಇದೆ. ಈ ಶಾಲೆ ಮಕ್ಕಳು ಬೆಳೆಯಲಿ ಎಂದು ಶಾಲೆಗಳಿಗೆ ಇಂಥ ಶಿಕ್ಷಕರು ಬೇಕು ಎಂದು ಸಂದರ್ಭದಲ್ಲಿ ಮಾತನಾಡಿದರು. ಎಸ್ ಟಿ ಕೋಳೂರು ಗುರು ಮಾತೆಯರು ಸ್ವಾಗತಿಸಿದರು, ಸಿ ಡಿ ಮಾದರ್ ನಿರೂಪಿಸಿ ವಂದಿಸಿದರು. ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ ಮನಗೂಳಿ ತಾಳಿಕೋಟೆ.